More

    ನಾಳೆ ಇಡೀ ಬೆಂಗಳೂರು ಬಂದ್ ಆಗ್ಬೇಕು; ಅದಾಗ್ಯೂ ವ್ಯಾಪಾರ ಮಾಡಿದ್ರೆ ಮುಂದಾಗುವ ತೊಂದರೆಗೆ ನೀವೇ ಹೊಣೆ: ಬಿಎಸ್​ವೈ

    ಬೆಂಗಳೂರು: ಕಾವೇರಿ ನದಿ ನೀರು ವಿಚಾರವಾಗಿ ನಾಳೆ ನಡೆಯಲಿರುವ ಬೆಂಗಳೂರು ಬಂದ್​​ ಯಶಸ್ವಿಯಾಗಬೇಕು, ಇಡೀ ಬೆಂಗಳೂರು ಸಂಪೂರ್ಣ ಬಂದ್ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಬೆಂಗಳೂರು ಬಂದ್ ವಿಚಾರವಾಗಿ ಇಂದು ಸುದ್ದಿಗಾರರ ಜತೆ ಮಾತನಾಡಿರು ಅವರು, ಹೋಟೆಲ್ ಮತ್ತಿತರ ವ್ಯಾಪಾರಸ್ಥರು ಅಂಗಡಿಗಳನ್ನ ಮುಚ್ಚಿ ಬೆಂಗಳೂರಿನ ಜ್ವಲಂತ ಸಮಸ್ಯೆಗಳಿಗೆ ಬೆಂಬಲ ನೀಡಬೇಕು. ಯಾರಾದರೂ ಹೋಟೆಲ್ ತೆರೆದು ವ್ಯಾಪಾರ ಮಾಡಲು ಮುಂದಾದರೆ ಮುಂದೆ ಆಗುವ ತೊಂದರೆಗಳಿಗೆ ನೀವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಇದನ್ನೂ ಓದಿ: ಮೀನು ಮಾರುವವರಿಗೂ ಎಚ್ಚರಿಕೆ: ಆ ಒಂದು ದಿನ ಮಾರಾಟ ಮಾಡಿದರೆ ಕಾನೂನು ಕ್ರಮ, ದಂಡನೆ!

    ಕಾಂಗ್ರೆಸ್‌ ಸರ್ಕಾರದ ವೈಫಲ್ಯದಿಂದ ಈ ಸಮಸ್ಯೆ ತಲೆದೋರಿದೆ. ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ಇರುವುದು ಕೇವಲ 59 ಟಿಎಂಸಿ ನೀರು ಮಾತ್ರ ಎಂದಿರುವ ಬಿಎಸ್​ವೈ, ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸೆ. 27ರಂದು ಬಿಜೆಪಿ ಶಾಸಕರು, ಸಂಸದರು ಧರಣಿ ಮಾಡುತ್ತಾರೆ ಎಂದೂ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಬೇಕೆಂಬ ದೇವೆಗೌಡರ ಮನವಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಎಸ್​ವೈ, ಪತ್ರ ಬರೆದಿರುವುದು ಗೊತ್ತಿದೆ, ಆದರೆ ಈಗ ಅದರ ಬಗ್ಗೆ ಏನು ಮಾತನಾಡುವುದಿಲ್ಲ ಎಂದಿದ್ದಾರೆ. ಅಲ್ಲದೆ, ಸಿಎಂ-ಡಿಸಿಎಂ ತಮಿಳುನಾಡಿನ ಏಜೆಂಟರಂತೆ ವರ್ತಿಸುವುದನ್ನು ನಿಲ್ಲಿಸಿ, ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

    ಬೆಂಗಳೂರು ಬಂದ್: ನಾಳೆ ಹೋಟೆಲ್​ಗಳು ತೆರೆದಿರುತ್ತವೆಯೇ?; ಇಲ್ಲಿದೆ ಸಂಘದ ಅಧ್ಯಕ್ಷರ ಸ್ಪಷ್ಟನೆ..

    ಪಿಎಸ್​ಐ ನೇಮಕಾತಿ ಹಗರಣ: 6 ತಿಂಗಳಿಗೂ ಅಧಿಕ ಕಾಲದಿಂದ ಜೈಲಲ್ಲಿರುವ ಆರೋಪಿ ಅಮೃತ್​ ಪೌಲ್​ಗೆ ಜಾಮೀನು ಮಂಜೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts