ಒಲಂಪಿಕ್ಸ್​ ಸ್ಪರ್ಧಾಳುಗಳಿಗೆ ನೀಡಲಾಗುತ್ತೆ 1.6 ಲಕ್ಷ ಕಾಂಡೋಮ್​! ಈ ವರ್ಷನೂ ಕೊಡ್ತೀವಿ.. ಆದರೆ...

condom
Published on

ಟೋಕಿಯೊ: 2021ರ ಒಲಂಪಿಕ್ಸ್​ ಜುಲೈನಲ್ಲಿ ಜಪಾನ್​ನ ಟೊಕಿಯೋದಲ್ಲಿ ಆರಂಭವಾಗಲಿದೆ. ಕರೊನಾದ ಸಂಕಷ್ಟದ ಸಮಯದಲ್ಲಿ ಒಲಂಪಿಕ್ಸ್​ ನಡೆಸುವ ಸಾಹಸಕ್ಕೆ ದೇಶ ಕೈ ಹಾಕಿದೆ. ಅನೇಕ ರೀತಿಯ ನೀತಿ ನಿಯಮಗಳೊಂದಿಗೆ ಈ ಒಲಂಪಿಕ್ಸ್​ ನಡೆಯಲಿದ್ದು, ಸ್ಪರ್ಧಾಳುಗಳಿಗೂ ಅನೇಕ ಕಟ್ಟುಪಾಡನ್ನು ಹಾಕಲಾಗಿದೆ.

ಅಂದ ಹಾಗೆ ಪ್ರತಿ ವರ್ಷ ಒಲಂಪಿಕ್ಸ್​ಗೆ ಬರುವ ಸ್ಪರ್ಧಾಳುಗಳಿಗೆ ಉಚಿತವಾಗಿ ಕಾಂಡೋಮ್​ ನೀಡಲಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಕಾಂಡೋಮ್​ಗಳು ಈ ಒಂದೇ ಕ್ರೀಡಾಕೂಟದಲ್ಲಿ ಬಳಕೆಯಾಗುತ್ತದೆಯಂತೆ. ಆದರೆ ಈ ವರ್ಷ ಈ ಯೋಜನೆಗೂ ಒಂದು ರೀತಿಯಲ್ಲಿ ಕಲ್ಲು ಬಿದ್ದಿದೆ ಎನ್ನಬಹುದು.

ಪ್ರತಿ ವರ್ಷದಂತೆ ಈ ವರ್ಷ ಕೂಡ ಉಚಿತ ಕಾಂಡೋಮ್​ ವಿತರಣೆಯಾಗುತ್ತದೆ. ಸುಮಾರು 1.6 ಲಕ್ಷ ಕಾಂಡೋಮ್​ ಅನ್ನು ವಿತರಣೆ ಮಾಡಲಾಗುವುದು. ಆದರೆ ಈ ಸಮಯದಲ್ಲಿ ದೈಹಿಕ ಅಂತರ ಅತಿಮುಖ್ಯವಾಗಿರುವುದರಿಂದಾಗಿ ಕಾಂಡೋಮ್​ ಅನ್ನು ಯಾರೋ ಅಲ್ಲಿ ಬಳಸುವಂತಿಲ್ಲ. ಸ್ಪರ್ಧಾಳುಗಳು ತಮ್ಮ ದೇಶಕ್ಕೆ ವಾಪಸಾದ ನಂತರ ಅದರ ಬಳಕೆ ಮಾಡಿಕೊಳ್ಳಬಹುದು ಎಂದು ಆಡಳಿತ ಹೇಳಿದೆ.

ಏಡ್ಸ್​ ತಡೆಯುವ ನಿಟ್ಟಿನಲ್ಲಿ ಹಾಗೂ ಸೇಫ್​ ಸೆಕ್ಸ್​ ದೃಷ್ಟಿಯಿಂದಾಗಿ ಒಲಂಪಿಕ್ಸ್​ನಲ್ಲಿಯೂ ಕಾಂಡೋಮ್​ ವಿತರಣೆ ಮಾಡುವ ಕೆಲಸವನ್ನು 1988ರಲ್ಲಿ ಆರಂಭಿಸಲಾಯಿತು. ಈವರೆಗೆ ಲಕ್ಷಾಂತರ ಕಾಂಡೋಮ್​ ವಿತರಣೆ ಮಾಡಲಾಗಿದೆ. ರಿಯೋ ಒಲಂಪಿಕ್ಸ್​ನಲ್ಲಿ ಅತಿ ಹೆಚ್ಚು ಅಂದರೆ 4.5 ಲಕ್ಷ ಕಾಂಡೋಮ್​ ವಿತರಣೆ ಮಾಡಲಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net