ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

bar
Published on

ಬಾರ್ಸಿಲೋನಾ: ಕೆಲಸ ಕೊಟ್ಟಿದ್ದ ಬಾಸ್​ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆ ತಾನೇ ಪೊಲೀಸರಿಗೆ ಕರೆ ಮಾಡಿ ಶರಣಾಗಿರುವ ಘಟನೆ ಸ್ಪೇನ್​ನ ಬಾರ್ಸಿಲೋನಾ ನಗರದಲ್ಲಿ ನಡೆದಿದೆ. ಮಹಿಳೆಯ ಈ ಕೃತ್ಯಕ್ಕೆ ಕಾರಣವನ್ನು ಕೇಳಿದ ಪೊಲೀಸರು ಆಕೆಯ ಬಾಸ್​ ಅನ್ನೂ ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.

ಆಕೆ ಸುಮಾರು 30 ವರ್ಷದ ಮಹಿಳೆ. ಬಾಂಗ್ಲಾದೇಶದ ಮೂಲದವಳಾಗಿರುವ ಆಕೆ ಬಾರ್ಸಿಲೋನಾದ ಬಾರ್​ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಆಕೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಬಾಸ್​ ಆಕೆಗೆ ಯಾವಾಗಲೂ ಹಿಂಸೆ ಕೊಡುತ್ತಿದ್ದನಂತೆ. ನನ್ನೊಂದಿಗೆ ಮಂಚದಲ್ಲಿ ಮಲಗು, ಮುತ್ತು ಕೊಡು ಎಂದು ಪೀಡಿಸುತ್ತಿರುತ್ತಿದ್ದನಂತೆ. ತಿಂಗಳುಗಳ ಕಾಲ ಅವನಿಂದ ತನ್ನನ್ನು ರಕ್ಷಿಸಿಕೊಂಡಿದ್ದ ಮಹಿಳೆ ಇತ್ತೀಚೆಗೆ ಒಮ್ಮೆ ತನ್ನ ಉಗ್ರ ರೂಪ ತೋರಿದ್ದಾಳೆ.

ಇತ್ತೀಚೆಗೆ ಒಂದು ದಿನ ಆ ಬಾಸ್​ ಮಹಿಳೆಯ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾನೆ. ಆಗ ಸಿಟ್ಟಿಗೆದ್ದ ಆಕೆ ಅಲ್ಲಿದ್ದ ಚಾಕುವಿನಿಂದ ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ. ನಂತರ ತಾನೇ ಪೊಲೀಸರಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆಕೆಯ ಬಾಸ್​ ಅನ್ನೂ ಬಂಧಿಸಲಾಗಿದೆ. ಆತನೂ ಕೂಡ ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಮೂಲದವನು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net