17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು...

teacher
Published on

ಪಾಣಿಪತ್​: ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿಯೊಂದಿಗೇ ಓಡಿ ಹೋಗಿರುವ ಘಟನೆ ಹರಿಯಾಣದ ಪಾಣಿಪತ್​ನಲ್ಲಿ ನಡೆದಿದೆ. ಕರೊನಾದಿಂದಾಗಿ ಶಾಲೆ ಕಾಲೇಜುಗಳು ಮುಚ್ಚಿರುವ ಈ ಸಮಯದಲ್ಲಿ ಅವರಿಬ್ಬರು ಒಟ್ಟಿಗೆ ನಾಲ್ಕು ಗಂಟೆಗಳ ಕಾಲ ಒಂದೇ ಮನೆಯಲ್ಲಿರುತ್ತಿದ್ದರು ಎನ್ನಲಾಗಿದೆ.

ಆಕೆ ಖಾಸಗಿ ಕಾಲೇಜೊಂದರ ಶಿಕ್ಷಕಿ. ಕಳೆದ ಎರಡು ವರ್ಷದಿಂದ ಆ ಬಾಲಕನಿಗೆ ಟ್ಯೂಷನ್​ ಹೇಳಿಕೊಡುತ್ತಿದ್ದಳು. ಮೊದಲೆಲ್ಲ ಒಂದೆರೆಡು ಗಂಟೆ ನಡೆಯುತ್ತಿದ್ದ ಟ್ಯೂಷನ್​, ಕರೊನಾ ಬಂದ ನಂತರ ನಾಲ್ಕು ತಾಸುಗಳಾಗಿ ಬದಲಾಗಿದೆ. ಇದೀಗ 11ನೇ ತರಗತಿಯಲ್ಲಿದ್ದ 17 ವರ್ಷದ ಬಾಲಕ ಹಾಗೂ ಟ್ಯೂಷನ್​ ಹೇಳಿಕೊಡುತ್ತಿದ್ದ ಟೀಚರ್​ ನಡುವೆ ಪ್ರೀತಿ ಹುಟ್ಟಿದ್ದು ಇಬ್ಬರೂ ಇದೀಗ ಕಾಣೆಯಾಗಿದ್ದಾರೆ.

ಮೇ 29ರಂದು ಮಧ್ಯಾಹ್ನ 2 ಗಂಟೆಗೆ ಟೀಚರ್​ ಮನೆಗೆ ಹೋದ ಮಗ ನಂತರ ಮನೆಗೆ ವಾಪಸು ಬಂದಿಲ್ಲ ಎಂದು ಕಾಣೆಯಾಗಿರುವ ಬಾಲಕನ ತಂದೆ ದೂರು ನೀಡಿದ್ದಾರೆ. ಈ ಕುರಿತಾಗಿ ಮೊದಲಿಗೆ ಟೀಚರ್​ ಮನೆಯವರು ಏನೂ ಸ್ಪಂದಿಸಿಲ್ಲವಾದರೂ ಕೆಲ ಗಂಟೆಗಳ ನಂತರ ತಮ್ಮ ಮಗಳೂ ಮನೆಯಲ್ಲಿ ಕಾಣುತ್ತಿಲ್ಲ ಎಂದು ನಿಜ ಬಾಯಿಬಿಟ್ಟಿದ್ದಾರೆ. ಆ ಟೀಚರ್​ಗೆ ಈಗಾಗಲೇ ಮದುವೆಯಾಗಿ ವಿಚ್ಛೇದನವೂ ಆಗಿದ್ದಾರೆ ಹೇಳಲಾಗಿದೆ. ಸದ್ಯ ಕಾಣೆಯಾದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net