ಪ್ರೇಯಸಿ ಭೇಟಿಯ ಯತ್ನದಲ್ಲಿ ಪಾಕಿಸ್ತಾನದಲ್ಲಿ ಸಿಲುಕಿಕೊಂಡಿದ್ದ ಹೈದರಾಬಾದ್​ ಯುವಕನ ಬಿಡುಗಡೆ!

HYD Youth
Published on

ಹೈದರಾಬಾದ್​: ಪಾಕಿಸ್ತಾನದಲ್ಲಿ ಸರೆಯಾಗಿದ್ದ ಹೈದರಾಬಾದ್​ ಮೂಲದ ಯುವಕನನ್ನು ಬಹುದಿನಗಳ ಬಳಿಕ ಬಿಡುಗಡೆ ಮಾಡಲಾಗಿದ್ದು, ಸೋಮವಾರ ಹೈದರಾಬಾದ್​ ತಲುಪಿದ್ದಾನೆ.

ಪ್ರಶಾಂತ್​ 2017ರ ಏಪ್ರಿಲ್​ನಲ್ಲಿ ಹೈದರಾಬಾದ್​ನಿಂದ ಕಾಣೆಯಾಗಿದ್ದ. ತನ್ನ ಗರ್ಲ್​ಫ್ರೆಂಡ್​ ಭೇಟಿ ಮಾಡಲು ಪಾಕಿಸ್ತಾನ ಮಾರ್ಗವಾಗಿ ಸ್ವಿಡ್ಜರ್​​ಲ್ಯಾಂಡ್​ಗೆ ತೆರಳುವಾಗ ಪಾಕ್​ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ. ಅಂದಿನಿಂದ ಪ್ರಶಾಂತ್​ ಪಾಕ್​ನಲ್ಲಿಯೇ ಸೆರೆಯಾಗಿದ್ದ.

ಇತ್ತೀಚೆಗಷ್ಟೇ ಪಾಕ್​ ಅಧಿಕಾರಿಗಳು ವಾಘಾ ಗಡಿಯ ಮೂಲಕ ಪ್ರಶಾಂತ್​ನನ್ನು ಭಾರತಕ್ಕೆ ಹಸ್ತಾಂತರಿಸಿದ್ದಾರೆ. ಪ್ರಶಾಂತ್​ ಹೈದರಬಾದ್​ನ ಸಾಫ್ಟ್​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಪಾಕಿಸ್ತಾನದಲ್ಲಿ ಮಗ ಸಿಲುಕಿಕೊಂಡಿದ್ದಾನೆ ಎಂದು ತಿಳಿದಾಗ ಪ್ರಶಾಂತ್​ ತಂದೆ ಬಾಬುರಾವ್​ ಸೈಬರ್​ಬಾದ್​ ಪೊಲೀಸ್​ ಆಯುಕ್ತ ಸಿಪಿ ಸಜ್ಜನರ್​ ಭೇಟಿ ಮಾಡಿ ಹಸ್ತಾಂತರ ಮಾಡಿಸಿಕೊಡುವಂತೆ 2019ರಲ್ಲಿ ಮನವಿ ಮಾಡಿದ್ದರು.

ಇದೀಗ ಪ್ರಶಾಂತ್​ ಪಾಕ್​ನಿಂದ ಬಿಡುಗಡೆಯಾಗಿ ಮರಳಿ ಗೂಡಿಗೆ ಸೇರಿರುವದರಿಂದ ಅವರ ಕುಟುಂಬಕ್ಕೆ ಬಹಳ ಸಂತೋಷ ವ್ಯಕ್ತವಾಗಿದ್ದು, ಮಗನನ್ನು ಬಹಳ ಖುಷಿಯಿಂದಲೇ ಬರ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net