

ಜಾರ್ಖಂಡ್: ಅನ್ಯಗ್ರಹ ಜೀವಿ ಏಲಿಯನ್‌ಗಳ ಇರುವಿಕೆಗೆ ಸಂಬಂಧಿಸಿದಂತೆ ಇದಾಗಲೇ ಸಾಕಷ್ಟು ಅಧ್ಯಯನಗಳು ನಡೆಯುತ್ತಿದ್ದು, ಇನ್ನೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಬಂದಿದ್ದಾರೆ. ಕೆಲವರು ಈ ಜೀವಿ ಇರುವುದು ನಿಜ ಎಂದಿದ್ದರೆ, ಅಂಥ ಜೀವಿಗಳೇ ಇಲ್ಲ ಎನ್ನುವುದು ಇನ್ನು ಕೆಲವರ ವಾದ.
ವಾದ-ಪ್ರತಿವಾದ ಏನೇ ಇದ್ದರೂ ಸದ್ಯ ಜಾರ್ಖಂಡ್‌ನಲ್ಲಿ ಕಂಡಿರುವ ಜೀವಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿರುವ ಜೀವಿಯೊಂದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದ್ದು, ಇದು ಏಲಿಯನ್ ಎಂದು ಹಲವರು ಹೇಳುತ್ತಿದ್ದಾರೆ. ವಾಹನ ಸವಾರರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಈ ಜೀವಿಯನ್ನು ಕಂಡ ಹೆದರಿ ಗಾಡಿ ನಿಲ್ಲಿಸಿರುವುದನ್ನು ಇದರಲ್ಲಿ ಕಾಣಬಹುದಾಗಿದೆ.
ಜಾರ್ಖಂಡ್‌ನ ಹಜಾರಿಬಾಗ್‌ನ ಚಡ್ವಾ ಅಣೆಕಟ್ಟು ಸೇತುವೆಯ ಮೇಲೆ ಈ ದೃಶ್ಯ ಕಂಡುಬಂದಿದೆ. ಇದು ನಿಜವಾಗಿಯೂ ವಿಚಿತ್ರ ಎಂದು ಜನರು ಭಯಭೀತರಾಗಿದ್ದರೆ, ಅದೇ ಇನ್ನೊಂದೆಡೆ ಇದು ಫೇಕ್ ಎಂದೂ ಕಮೆಂಟ್ ಮಾಡಿದ್ದಾರೆ. ಆದರೆ ಅಸಲಿಯತ್ತು ಏನೆಂದು ಇನ್ನಷ್ಟೇ ತಿಳಿಯಬೇಕಿದೆ. ನಿರ್ಮಾಪಕಿ ಏಕ್ತಾ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದೂ ಅಲ್ಲದೇ ಇದು ಭಯಾನಕ ಎಂದು ಹೇಳಿದ್ದಾರೆ. ಅಲ್ಲಿಂದ 30 ಸೆಕೆಂಡ್‌ಗಳ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇಲ್ಲಿದೆ ನೋಡಿ ವಿಡಿಯೋ: