ಗಿಟಾರ್‌ ವಾದ್ಯಕ್ಕೆ ತಕ್ಕಂತೆ ಹಾಡು ಹೇಳ್ತಿದೆ ಈ ಕ್ಯೂಟ್‌ ಗಿಳಿ: ವಿಡಿಯೋ ವೈರಲ್‌

parrot
Published on

ಗಿಳಿಗಳು ಮಾತನಾಡುವುದನ್ನು ಹಲವರು ಕೇಳಿರುತ್ತೀರಿ, ಅದೇ ರೀತಿ ಅದು ಹಾಡು ಕೇಳುವುದನ್ನೂ ಕೇಳಿರಬಹುದು. ಆದರೆ ಇಲ್ಲೊಂದು ಗಿಳಿ ಅದಕ್ಕೂ ಮುಂದೆ ಹೋಗಿ ಮಾಲೀಕ ನುಡಿಸುವ ಗಿಟಾರ್‌ ವಾದ್ಯಕ್ಕೆ ತಕ್ಕಂತ ಹಾಡು ಹಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

‘ಫ್ಲಾಪ್ ಇರಾ ಆರೆಂಜ್ ಕೋಟ್ ಗಾಯ್’ ಎಂಬ ಹೆಸರಿನ ಟ್ವಿಟರ್‌ನಲ್ಲಿ ಇದು ಶೇರ್‌ ಆಗಿದ್ದು, ನೋಡುಗರ ಕಣ್ಮನ ಸೆಳೆಯುವಂತೆ ಇದೆ. ಗಿಳಿಯ ಮಾಲೀಕ ಫ್ರಾಂಕ್ ಅವರು ಗಿಟಾರ್ ನುಡಿಸುತ್ತಾರೆ. ತಾವು ಇದನ್ನು ನುಡಿಸುವಾಗಲೆಲ್ಲವೂ ಗಿಳಿ ಸುಶ್ರಾವ್ಯವಾಗಿ ಹಾಡುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದಾಗಲೇ ಈ ವಿಡಿಯೋವನ್ನು 35 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ನೀವೂ ಒಮ್ಮೆ ನೋಡಿ ಖುಷಿಪಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net