More

    ಆನಂದಯ್ಯನವರ ಆಯುರ್ವೇದ ಕೋವಿಡ್‌ ಔಷಧಕ್ಕೆ ಕೊನೆಗೂ ಸಂದಿತು ಜಯ- ಸಿಕ್ಕಿತು ಗ್ರೀನ್‌ ಸಿಗ್ನಲ್‌

    ಅಮರಾವತಿ: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದ ಆಯುರ್ವೇದ ವೈದ್ಯ ಬಿ. ಆನಂದಯ್ಯನವರ ಕೋವಿಡ್‌ ಔಷಧಕ್ಕೆ ಕೊನೆಗೂ ಜಯ ಸಿಕ್ಕಿದೆ. ಇವರು ಉಚಿತವಾಗಿ ಕೋವಿಡ್‌ ಸೋಂಕಿತರಿಗೆ ಪೂರೈಕೆ ಮಾಡುತ್ತಿರುವ ಔಷಧ ವಿತರಣೆಗೆ ಆಂಧ್ರ ಸರ್ಕಾರ ಅನುಮತಿ ನೀಡಿದೆ.

    ಸೋಂಕಿತರಿಗೆ ಉಚಿತವಾಗಿ ಔಷಧವನ್ನು ಪೂರೈಕೆ ಮಾಡುತ್ತಾ, ಸಹಸ್ರಾರು ಮಂದಿಯ ಜೀವ ಕಾಪಾಡಿದ್ದ ಆನಂದಯ್ಯವರು ಪೂರೈಕೆ ಮಾಡುತ್ತಿರುವ ಔಷಧ ವೈಜ್ಞಾನಿಕ ಹೌದೋ ಅಲ್ಲವೋ ಎಂಬುದನ್ನು ಸಾಬೀತು ಮಾಡಲು ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈಜ್ಞಾನಿಕವಲ್ಲದ ಔಷಧ ಇದಾಗುವ ಸಾಧ್ಯತೆ ಇದ್ದು, ಇದರಿಂದ ಸೋಂಕಿತರು ಸತ್ತರೆ ಗತಿ ಏನು ಎನ್ನುವುದು ಮುಖ್ಯ ಪ್ರಶ್ನೆಯಾಗಿತ್ತು. ಆದ್ದರಿಂದ ಇದು ವೈಜ್ಞಾನಿಕವಾಗಿ ಸಾಬೀತು ಆಗುವವರೆಗೂ ಔಷಧ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಲಾಗಿತ್ತು.

    ಆನಂದಯ್ಯರು ತಯಾರಿಸಿದ ಔಷಧದ ಸಂಯೋಜನೆಯು ವಿಶಿಷ್ಟವಾಗಿದೆ. ಅದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಸಾಬೀತಾಗಿರುವ ಕಾರಣ ಔಷಧ ಹಂಚಿಕೆಗೆ ಹಸಿರು ನಿಶಾನೆ ಸಿಕ್ಕಿದೆ.
    ಆದರೆ ಕೆಲವೇ ನಿಮಿಷಗಳಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಉಪಯುಕ್ತ ಎಂದು ಹೇಳಲಾದ ಕಣ್ಣಿನ ಹನಿಗಳನ್ನು ಉಪಯೋಗಿಸಲು ಮಾತ್ರ ಆನಂದಯ್ಯರಿಗೆ ಸರ್ಕಾರ ಅನುಮತಿ ನೀಡಿಲ್ಲ. ಕಣ್ಣಿನ ಹನಿಗಳ ಪರಿಣಾಮಕಾರಿತ್ವದ ಬಗ್ಗೆ ಪೂರ್ಣ ವರದಿ ಬರಲು 2-3 ವಾರಗಳು ಬೇಕಾಗುವುದರಿಂದ, ಸರ್ಕಾರವು ತಕ್ಷಣವೇ ಅದರ ಬಳಕೆಗೆ ಅನುಮತಿಸಲಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಸದ್ಯ ಪಿ. ಎಲ್ ಮತ್ತು ಎಫ್ ಎಂದು ಹೆಸರಿಸಲಾದ ಮೂರು ಸಾಂಪ್ರದಾಯಿಕ ಔಷಧಿಗಳಿಗೆ ಅನುಮತಿ ನೀಡಲು ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ -19 ರ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ನಿರ್ಧರಿಸಲಾಗಿದೆ.

    “ರೋಗಿಗಳು ಈ ಆಯುರ್ವೇದ ಔಷಧ ಜತೆಗೆ ವೈದ್ಯರು ಶಿಫಾರಸು ಮಾಡಿದ ನಿಯಮಿತ ಔಷಧಿಗಳನ್ನು ತೆಗೆದುಕೊಳ್ಳಬೇಕು. ಇದು ವೈಯಕ್ತಿಕ ಆಯ್ಕೆಯಾಗಿದೆ” ಎಂದು ಸರ್ಕಾರ ಹೇಳಿದೆ. ಔಷಧಿ ತೆಗೆದುಕೊಳ್ಳಲು ಗ್ರಾಮಕ್ಕೆ ಬರುವವರು ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಸೂಚಿಸಿದೆ.

    ಸೈಡ್‌ ಎಫೆಕ್ಟು ಇಲ್ದೇ ಸಹಸ್ರಾರು ಮಂದಿ ಜೀವ ಉಳಿಸಿರೋ ಔಷಧಿಗೆ ಏಕೆ ಅಡ್ಡಗಾಲು? ಜಾಲತಾಣದಲ್ಲಿ ಆಕ್ರೋಶ

    ಅವರಪ್ಪನಿಂದಲೂ ಬಂಧಿಸಲು ಸಾಧ್ಯವಿಲ್ಲ- ‘ಮೂರ್ಖರ ವಿಜ್ಞಾನ’ದ ಪ್ರತಿಭಟನೆಗೆ ಬಾಬಾ ರಾಮ್‌ದೇವ್‌ ಪ್ರತಿಕ್ರಿಯೆ

    ಬಾಬಾ ರಾಮ್‌ದೇವ್‌ ಕೊರೊನಿಲ್‌ ಔಷಧಕ್ಕೆ ಬೇಡಿಕೆ- ಒಂದು ಲಕ್ಷ ಸೋಂಕಿತರಿಗೆ ಉಚಿತವಾಗಿ ಕಿಟ್ ವಿತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts