More

    ಸೈಡ್‌ ಎಫೆಕ್ಟು ಇಲ್ದೇ ಸಹಸ್ರಾರು ಮಂದಿ ಜೀವ ಉಳಿಸಿರೋ ಔಷಧಿಗೆ ಏಕೆ ಅಡ್ಡಗಾಲು? ಜಾಲತಾಣದಲ್ಲಿ ಆಕ್ರೋಶ

    ಕೃಷ್ಣಪಟ್ಟಣಂ (ಆಂಧ್ರಪ್ರದೇಶ): ಆಂಧ್ರ ಪ್ರದೇಶದ ಕೃಷ್ಣಪಟ್ಟಣಂನ ಆಯುರ್ವೇದ ಪಾರಂಪರಿಕ ವೈದ್ಯ ಆನಂದಯ್ಯ ಅವರು ಕೋವಿಡ್‌ಗೆಂದು ನೀಡುತ್ತಿದ್ದ ಉಚಿತ ಔಷಧವನ್ನು ಆಯುಷ್‌ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

    ಸಹಸ್ರಾರು ಜನರ ಜೀವವನ್ನು ಕಾಪಾಡಿದ ಆನಂದಯ್ಯ ಅವರ ಔಷಧವನ್ನು ವೈಜ್ಞಾನಿಕ ಪರೀಕ್ಷೆಯ ಹೆಸರಿನಲ್ಲಿ ಸ್ಥಗಿತಗೊಳಿಸಿರುವ ಹಿಂದಿನ ಕಾರಣವೇನು? ಇದಕ್ಕೆ ಅಡ್ಡಗಾಲು ಹಾಕಿರುವುದು ಏತಕ್ಕೆ? ಜನರ ಜೀವ ಉಳಿಸುತ್ತಿರುವ ಆನಂದಯ್ಯನವರ ವಿರುದ್ಧ ತಿರುಗಿ ಬಿದ್ದಿರುವುದು ಏಕೆ ಎಂಬ ಬಗ್ಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

    ಕರೊನಾ ಪಾಸಿಟಿವ್‌ ಬಂದ ವ್ಯಕ್ತಿಗಳು ಇಲ್ಲಿಂದ ಔಷಧ ಪಡೆದು 2-3 ದಿನಗಳಲ್ಲಿಯೇ ಗುಣಮುಖರಾಗಿರುವ ಉದಾಹರಣೆಗಳು ಸಾಕಷ್ಟಿವೆ. ಔಷಧ ಪಡೆದ 2-3 ದಿನಕ್ಕೇನೇ ನೆಗೆಟಿವ್‌ ವರದಿ ಬಂದಿವೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಆನಂದಯ್ಯ ಅವರ ಔಷಧವನ್ನು ಪಡೆದು ಗುಣಮುಖರಾಗಿದ್ದಾರೆ. ಇದರಿಂದಾಗಿ ಇವರ ಔಷಧಕ್ಕೆ ಭಾರಿ ಡಿಮಾಂಡ್‌ ಶುರುವಾಗಿತ್ತು. ಇದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಕರೊನಾ ಚಿಕಿತ್ಸೆಗಾಗಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗತೊಡಗಿತು.

    ಈ ಪರಿಯಲ್ಲಿ ಪ್ರಚಾರ ಪಡೆಯುತ್ತಿದ್ದಂತೆಯೇ ವಿಷಯ ಆಯುಷ್ ಇಲಾಖೆ ಕಿವಿಗೆ ಬಿದ್ದು ಅಲ್ಲಿಯ ತಜ್ಞರು ಸ್ಥಳಕ್ಕೆ ಭೇಟಿ ಕೊಟ್ಟರು. ಕರೊನಾ ಹೆಸರಿನಲ್ಲಿ ಹೀಗೆ ಔಷಧ ಹಂಚುತ್ತಿರುವುದು ಅವೈಜ್ಞಾನಿಕ ಎಂದು ವಾದಿಸಿದರು. ಇದು ನಿಯಮ ಬಾಹಿರ ಎಂದರು. ಈ ಔಷಧವನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ಅದರ ಅಂತಿಮ ವರದಿ ಬರುವವರೆಗೆ ಔಷಧ ನೀಡುವಂತೆ ಇಲ್ಲ ಆಯುಷ್‌ ಇಲಾಖೆ ಆದೇಶಿಸಿದೆ.

    ಈ ಆದೇಶ ಇದೀಗ ಸೋಂಕಿತರಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ. ಆಸ್ಪತ್ರೆಗಳಲ್ಲಿ ದಾಖಲಾದವರು ನೀಡುತ್ತಿರುವ ಶುಲ್ಕ, ಜೀವ ಕಳೆದುಕೊಳ್ಳುತ್ತಿರುವ ಪರಿಗಳ ಸುದ್ದಿ ನೋಡಿ, ಕೇಳಿ ಭಯಭೀತರಾಗಿದ್ದ ಸೋಂಕಿತರು ಆನಂದಯ್ಯನವರ ಔಷಧದ ಮೇಲೆ ಸಾಕಷ್ಟು ಭರವಸೆ ಇಟ್ಟಿದ್ದರು. ಆದರೆ ಏಕಾಏಕಿ ಔಷಧ ಸ್ಥಗಿತಗೊಂಡಿರುವ ಸುದ್ದಿ ಕೇಳಿ ಅವರಿಗೆ ದಿಕ್ಕೇ ತೋಚದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಸಮಾಧಾನದ ಹೊಗೆಯಾಡುತ್ತಿದೆ. ಅಷ್ಟಕ್ಕೂ ಆನಂದಯ್ಯನವರು ಕೊಡುತ್ತಿದ್ದ ಔಷಧ ಎಂದರೆ ನಾವು ನಿತ್ಯವೂ ಬಳಸುವ ಶುಂಠಿ, ಜೀರಿಗೆ, ಅರಿಶಿಣ, ಅಮೃತಬಳ್ಳಿ ಸೇರಿದಂತೆ ಔಷಧಯುಕ್ತ ಪದಾರ್ಥಗಳ ಮಿಶ್ರಣವಷ್ಟೇ.

    ಆದರೆ, ಔಷಧ ಪಡೆದು ಜನರು ಮೃತಪಟ್ಟರೆ ಅದಕ್ಕೆ ಯಾರು ಹೊಣೆ ಎಂದು ತಜ್ಞರು ಆನಂದಯ್ಯನವರನ್ನು ಮಾತ್ರ ಕೇಳುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಯೋಗಾಲಯದಿಂದ ಪರೀಕ್ಷೆಗೆ ಒಳಪಟ್ಟ ಆಧುನಿಕ ಔಷಧಗಳಿಂದ ಪ್ರಾಣ ಕಳೆದುಕೊಳ್ಳುತ್ತಿರುವವರು ಇಲ್ಲವೆ? ಲಕ್ಷ ಲಕ್ಷ ಮಂದಿ ಆಸ್ಪತ್ರೆಗೆ ಸೇರಿ ಔಷಧ ಪಡೆದು ಜೀವ ಕಳೆದುಕೊಂಡಿಲ್ಲವೆ? ಕರೊನಾ ಸಲುವಾಗಿ ಪಡೆದಿರುವ ಔಷಧಗಳಿಂದ ಅಡ್ಡ ಪರಿಣಾಮವಾಗಿ ಬ್ಲ್ಯಾಕ್‌ ಫಂಗಸ್‌, ವೈಟ್‌ ಫಂಗಸ್‌ ಜತೆಗೆ ಈಗ ಯೆಲ್ಲೋ ಫಂಗಸ್‌ ಎಂದು ಕಣ್ಣುಗಳನ್ನು, ಜೀವವನ್ನು ಕಳೆದುಕೊಳ್ಳುತ್ತಿರುವವರು ಇಲ್ಲವೆ? ವೈಜ್ಞಾನಿಕವಾಗಿ ಪ್ರಯೋಗಾಲಯದಿಂದ ಸಾಬೀತಾಗಿರುವ ಈ ಔಷಧಗಳನ್ನು ಪಡೆದು ಜೀವಹಾನಿ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಯಾವುದೇ ಅಡ್ಡ ಪರಿಣಾಮಗಳೂ ಇಲ್ಲದೇ ಆನಂದಯ್ಯನವರ ಆಯುರ್ವೇದ ಔಷಧವನ್ನು ಪಡೆದು ಜೀವ ಉಳಿಸಿಕೊಂಡರೆ ಅದರಲ್ಲಿ ತಪ್ಪೇನಿದೆ? ಎಲ್ಲದ್ದಕ್ಕೂ ವೈಜ್ಞಾನಿಕ ಪುರಾವೆ ಕೇಳುವುದು ಎಷ್ಟು ಸಮಂಜಸ ಎನ್ನುವುದು ನೆಟ್ಟಿಗರ ಪ್ರಶ್ನೆ.

    ಅಷ್ಟೇ ಅಲ್ಲದೇ. ಕರೊನಾದ ತವರು ಚೀನಾದಲ್ಲಿ ಕರೊನಾ ನಿಯಂತ್ರಣಕ್ಕೆ ಬಂದಿರುವ ಬಹುದೊಡ್ಡ ಕಾರಣವೆಂದರೆ ಅವರು ತಮ್ಮ ಪಾರಂಪರಿಕ ವಿಧಾನದಿಂದ ಗುಣಮುಖರಾಗುತ್ತಿರುವುದು. ಹಾಗಿರುವಾಗ ಭಾರತದಲ್ಲಿ ಪಾರಂಪರಿಕ ವಿಧಾನ ಎನಿಸಿಕೊಂಡಿರುವ ಆಯುರ್ವೇದದ ಬಳಕೆಗೆ ಏಕೆ ಇಷ್ಟು ಅಸಡ್ಡೆ ಎಂದು ಕೆಂಗಣ್ಣು ಬೀರುತ್ತಿದ್ದಾರೆ ನೆಟ್ಟಿಗರು. ಇದರ ಹಿಂದಿರುವ ಕಾರಣವೇನು ಎಂದಿರುವ ನೆಟ್ಟಿಗರ ಪ್ರಶ್ನೆಗೆ ಉತ್ತರ ಸಿಗಬೇಕಿದೆಯಷ್ಟೇ.

    ಸನ್ನಿ ಲಿಯೋನ್‌ ತೊಟ್ಟ ಡ್ರೆಸ್‌ನ ಜಿಪ್‌ ಮೇಲೇರಿಸಲು ಮೇಕಪ್‌ಮೆನ್‌ ಹರಸಾಹಸ- ವಿಡಿಯೋ ವೈರಲ್‌

    ಬ್ಯಾಂಕ್‌ಗೆ ಕೋಟ್ಯಂತರ ರೂ. ವಂಚನೆ: ದಶಕಗಳ ಕಾಲ ನೆಮ್ಮದಿಯಿಂದಿದ್ದ ನೀರವ್‌ ಮೋದಿ ಮಾವನೂ ಎಸ್ಕೇಪ್‌!

    ಹೆಚ್ಚಿಗೆ ಹಣ ವಸೂಲಿ- ದೂರು ನೀಡಿದ ಕಾರಣ ಸೋಂಕಿತನ ಸಾವಿಗೆ ಕಾರಣವಾದ ಆರೋಪ: ಆಸ್ಪತ್ರೆ ವಿರುದ್ಧ ಕೇಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts