ಹೆಚ್ಚಿಗೆ ಹಣ ವಸೂಲಿ- ದೂರು ನೀಡಿದ ಕಾರಣ ಸೋಂಕಿತನ ಸಾವಿಗೆ ಕಾರಣವಾದ ಆರೋಪ: ಆಸ್ಪತ್ರೆ ವಿರುದ್ಧ ಕೇಸ್‌

bharathi hospital
Published on

ಬೆಂಗಳೂರು: ಕೋವಿಡ್ ರೋಗಿಯನ್ನು ಡಿಸ್ಚಾಜ್೯ ಮಾಡಿ ಅವರ ಸಾವಿಗೆ ಕಾರಣರಾದ ಭಾರತಿ ಆಸ್ಪತ್ರೆ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬಿಬಿಎಂಪಿ ವೈದ್ಯಾಧಿಕಾರಿ ಡಾ.ರಾಜೇಂದ್ರ ನೀಡಿದ ದೂರಿನ ಮೇಲೆ ಕೇಸ್ ದಾಖಲಿಸಲಾಗಿದೆ. 64 ವರ್ಷದ ಮಹಿಳೆ ಕರೊನಾ ಚಿಕಿತ್ಸೆಗೆ ಭಾರತಿ ಆಸ್ಪತ್ರೆಗೆ ದಾಖಲಾಗಿದ್ದರು.

ರೆಮ್ ಡೆಸಿವಿರ್ ಚುಚ್ಚುಮದ್ದು ಕೊಡಲು 15 ಸಾವಿರ ರೂ. ಕೇಳಿದ್ದರು. ಈ ಬಗ್ಗೆ ಡ್ರಗ್ ಕಂಟ್ರೋಲ್‌ ಬೋಡ್೯ಗೆ ದೂರು ನೀಡಿದಾಗ ಅವರು ಬಂದು ಪರಿಶೀಲನೆ ನಡೆಸಿ ಚುಚ್ಚುಮದ್ದು ಕೊಡಿಸಿದ್ದರು. ಆದರೆ ದೂರು ನೀಡಿದ ಕಾರಣಕ್ಕೆ ರೋಗಿಯನ್ನು ಡಿಸ್ಚಾಜ್೯ ಮಾಡಿದ್ದರು. ಪಾಲಕರು ಬೇರೆ ಆಸ್ಪತ್ರೆ ಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಈ ಕುರಿತು ಡಾ.ರಾಜೇಂದ್ರ ನೀಡಿದ ದೂರಿನ ಮೇಲೆ ವಿಜಯನಗರ ಠಾಣೆಯಲ್ಲಿ ಭಾರತಿ ಆಸ್ಪತ್ರೆ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net