More

    ತಗ್ಗದ-ಬಗ್ಗದ ಕರೊನಾ; ರಾಜ್ಯದಲ್ಲಿ ಶೇ. 5 ದಾಟಿತು ಪಾಸಿಟಿವಿಟಿ ಪ್ರಮಾಣ!

    ಬೆಂಗಳೂರು: ರಾಜ್ಯದಲ್ಲಿ ಅತಿರೇಕಕ್ಕೆ ತೆರಳುತ್ತಿರುವ ಕರೊನಾ ಹಾವಳಿ ಚಿಂತೆಗೀಡು ಮಾಡುವ ಮಟ್ಟಕ್ಕೆ ತಲುಪುತ್ತಿದ್ದು, ಇದೀಗ ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ. 5 ದಾಟಿರುವುದು ಆತಂಕವನ್ನು ಹೆಚ್ಚಿಸಿದೆ.

    ದೇಶದಲ್ಲಿ ನಿನ್ನೆ ಏಳು ತಿಂಗಳ ಬಳಿಕ ದೈನಂದಿನ ಸೋಂಕಿನ ಸಂಖ್ಯೆ 1 ಲಕ್ಷವನ್ನು ದಾಟಿದರೆ ಇದೀಗ ರಾಜ್ಯದಲ್ಲಿ ದೈನಂದಿನ ಸೋಂಕಿನ ಪ್ರಕರಣಗಳ ಸಂಖ್ಯೆ ಸದ್ಯದಲ್ಲೇ ಹತ್ತು ಸಾವಿರವನ್ನು ದಾಟುವ ಲಕ್ಷಣಗಳು ಗೋಚರಿಸಿವೆ.

    ಇಂದು ರಾಜ್ಯದಲ್ಲಿ 8,906 ಮಂದಿಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದ್ದು, ಆ ಪೈಕಿ ಬೆಂಗಳೂರು ಒಂದರಲ್ಲೇ 7,113 ಜನರಲ್ಲಿ ಸೋಂಕು ದೃಢಪಟ್ಟಿದೆ. ಆತಂಕದ ವಿಚಾರವೆಂದರೆ ನಿನ್ನೆಯವರೆಗೂ ಶೇ. 4.15 ಇದ್ದ ಪಾಸಿಟಿವಿಟಿ ರೇಟ್‌ ಇವತ್ತು ಶೇ. 5.42 ಆಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಅದು ದುಪ್ಪಟ್ಟಾಗಿದ್ದು, ಪಾಸಿಟಿವಿಟಿ ರೇಟ್‌ ಶೇ. 10ಕ್ಕೆ ತಲುಪಿದೆ. ರಾಜ್ಯದ ಒಟ್ಟು ಪ್ರಕರಣಗಳ ಪೈಕಿ ಶೇ.79 ರಾಜಧಾನಿ ಬೆಂಗಳೂರಿನಲ್ಲೇ ವರದಿಯಾಗಿದೆ. ಇನ್ನು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 38,507ಕ್ಕೆ ತಲುಪಿದ್ದು, ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ 333ರಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts