More

    ಕೋವಿಡ್‌ನಿಂದ ಚೇತರಿಸಿಕೊಂಡ ಭಾರತೀಯರಲ್ಲಿ ಶ್ವಾಸಕೋಶದ ಹಾನಿ ಹೆಚ್ಚು!

    ಬೆಂಗಳೂರು: ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ನಡೆಸಿದ ಅಧ್ಯಯನವು ಕೋವಿಡ್‌ನಿಂದ ಚೇತರಿಸಿಕೊಂಡ ಭಾರತೀಯರಲ್ಲಿ ಶ್ವಾಸಕೋಶದ ಹಾನಿ ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದೆ. ಕೆಲವರು ಜೀವನಪೂರ್ತಿ ಈ ಸಮಸ್ಯೆಯ ಜತೆ ಬದುಕಬೇಕಾಗಬಹುದು. ಯುರೋಪಿಯನ್ನರು ಮತ್ತು ಚೀನಿಯರಿಗೆ ಹೋಲಿಸಿದರೆ ಭಾರತೀಯರಲ್ಲಿ ಶ್ವಾಸಕೋಶದ ಕಾರ್ಯಚಟುವಟಿಕೆಗೆ ಹೆಚ್ಚಿನ ಹಾನಿಯಾಗಿದೆ ಎಂದು ಅಧ್ಯಯನವು ಹೇಳಿದೆ.

    ಕೆಲವರು ಮಾತ್ರ ಸ್ವಲ್ಪ ಸಮಯದ ನಂತರ ಕ್ರಮೇಣ ಸಹಜ ಸ್ಥಿತಿಗೆ ಮರಳಿದರೆ, ಇನ್ನು ಕೆಲವರು ಶ್ವಾಸಕೋಶದ ಹಾನಿಯೊಂದಿಗೆ ಜೀವನಪೂರ್ತಿ ಬದುಕಬೇಕಾಗಬಹುದು ಎಂದು ಅಧ್ಯಯನ ಹೇಳಿದೆ. ಈ ಕುರಿತು 207 ವ್ಯಕ್ತಿಗಳನ್ನು ಪರೀಕ್ಷಿಸಲಾಗಿದ್ದು, ಕೋವಿಡ್‌ ಸಮಯದಲ್ಲಿ ನಡೆಸಲಾದ ಈ ಅಧ್ಯಯನವನ್ನು ಇತ್ತೀಚೆಗೆ ಪಿಎಲ್​​​ಒಎಸ್ ಗ್ಲೋಬಲ್ ಪಬ್ಲಿಕ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

    ಎರಡು ತಿಂಗಳ ಚೇತರಿಕೆಯ ನಂತರ, ಸೌಮ್ಯ, ಮಧ್ಯಮ ಮತ್ತು ತೀವ್ರ ಕೋವಿಡ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಸಂಪೂರ್ಣ ಶ್ವಾಸಕೋಶದ ಕಾರ್ಯ ಪರೀಕ್ಷೆ, ಆರು ನಿಮಿಷಗಳ ನಡಿಗೆ ಪರೀಕ್ಷೆ, ರಕ್ತ ಪರೀಕ್ಷೆ ಮತ್ತು ಜೀವನದ ಗುಣಮಟ್ಟದ ಮೌಲ್ಯಮಾಪನಗಳನ್ನು ನಡೆಸಲಾಗಿದೆ. ಅಷ್ಟೇ ಅಲ್ಲ, ಚೀನಾ ಮತ್ತು ಯುರೋಪಿಯನ್ನರಿಗೆ ಹೋಲಿಸಿದರೆ ಹೆಚ್ಚು ಭಾರತೀಯರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕೊಮೊರ್ಬಿಡಿಟಿಗಳನ್ನು ಹೊಂದಿದ್ದರು. 

    ಮತಭಾರತ ಲೋಕಸಭೆ ಚುನಾವಣೆ 2024| ಬೆಂಗಳೂರು ಕೇಂದ್ರ ನಾನಾ ಲೆಕ್ಕಾಚಾರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts