More

    ಕೋವಿಡ್ ಪ್ರಕರಣ ಇಳಿಮುಖ

    ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕೆಲ ದಿನಗಳಿಂದ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಬುಧವಾರ ನಡೆಸಲಾಗಿರುವ 7,589 ಪರೀಕ್ಷೆಗಳಲ್ಲಿ 87 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 672 ತಲುಪಿದ್ದು, ಕೇವಲ 30 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ (ಹೊಸ ರೂಪಾಂತರಿ ತಳಿ ಜೆಎನ್.1) ಯಲ್ಲಿ ಏರಿಕೆ ಕಂಡ ಒಂದು ತಿಂಗಳ ನಂತರ, ಸೋಂಕು, ಸಕ್ರಿಯ ಪ್ರಕರಣಗಳು ಹಾಗೂ ಆಸ್ಪತ್ರೆ ದಾಖಲಾತಿ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ಸಾಕ್ಷಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.

    ಡಿಸೆಂಬರ್ ಮಧ್ಯದ ವೇಳೆಗೆ ತೀವ್ರ ಏರಿಕೆ ಕಂಡುಬಂದಿತ್ತು. ತಿಂಗಳಲ್ಲಿ (ಡಿ.15 ರಿಂದ ಜ.17ರವರೆಗೆ) 31 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಡಿ.19ರಂದು 79 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಡಿ.31ರ ವೇಳೆಗೆ ಒಂದು ಸಾವಿರ ಮೀರಿತ್ತು. ಜ.4ರ ವೇಳೆಗೆ ಈ ಸಂಖ್ಯೆ 1,240ಕ್ಕೆ ಏರಿಕೆಯಾಗುವ ಮೂಲಕ ಆತಂಕಕ್ಕೆ ಕಾರಣವಾಗಿತ್ತು. ಅಲ್ಲಿಂದೀಚೆಗೆ ಸಕ್ರಿಯ ಪ್ರಕರಣಗಳು ಇಳಿಕೆ ಆಗಿರುವುದು ಕೊಂಚ ನಿರಾಳತೆ ಮೂಡಿಸಿದೆ.

    ರಾಜ್ಯದಲ್ಲಿ ಬುಧವಾರ 7,589 ಪರೀಕ್ಷೆಗಳನ್ನು ಮಾಡಲಾಗಿದ್ದು, 87 ಸೋಂಕು ಪ್ರಕರಣಗಳು ವರದಿಯಾಗಿದ್ದು, 165 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ ಸೋಂಕು ಹಾಗೂ ಮರಣ ಪ್ರಮಾಣ ದರ ಶೇ. 1.14 ಇದೆ.

    ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಬ್ಬರು ಪ್ರಕರಣಗಳ ನಿರಂತರ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಹತ್ತು ದಿನಗಳು ನಿರ್ಣಾಯಕವಾಗಿದ್ದು, ಈ ಅವಧಿಯಲ್ಲಿ ವರದಿಯಾಗುವ ಪ್ರಕರಣಗಳನ್ನು ಆಧರಿಸಿ ಕೋವಿಡ್ ಪ್ರವೃತ್ತಿ ಅಂದಾಜಿಸಬಹುದಾಗಿದೆ ಎಂದು ತಿಳಿಸಿದರು.

    ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಯೊಂದು ನಡೆಸುತ್ತಿರುವ ಒಳಚರಂಡಿಯಲ್ಲಿ ವೈರಾಣು ಪತ್ತೆ ಕಾರ್ಯದಲ್ಲೂ ಸೋಂಕು ಪ್ರಕರಣಗಳು ಕಂಡು ಬಂದಿಲ್ಲ. ಆದಾಗ್ಯೂ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts