ಶಾಲೆಗೆ ಸ್ಕರ್ಟ್ ಧರಿಸಿ ಬರಲಾರಂಭಿಸಿದ ಪುರುಷ ಶಿಕ್ಷಕರು! ಅಷ್ಟಕ್ಕೂ ಕಾರಣವೇನು ಗೊತ್ತಾ?

1
Published on

ಮ್ಯಾಡ್ರಿಡ್: ಸ್ಲೇನ್​ ದೇಶದಲ್ಲಿ ಇದೀಗ ಹೊಸದೊಂದು ಟ್ರೆಂಡ್​ ಶುರುವಾಗಿದೆ. ಅಲ್ಲಿನ ಶಾಲೆಗಳ ಮಹಿಳಾ ಶಿಕ್ಷಕರ ಜತೆ ಪುರುಷ ಶಿಕ್ಷಕರೂ ಸ್ಕರ್ಟ್​ ಧರಿಸಿ ಶಾಲೆಗೆ ಬರಲಾರಂಭಿಸಿದ್ದಾರೆ. ಅಂದ ಹಾಗೆ ಅದಕ್ಕೂ ಕಾರಣವಿದೆ..


ಸ್ಪೇನ್​ನ ಶಾಲೆಯೊಂದರಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳನ್ನು ಶಾಲೆಯಿಂದ ಹೊರಹಾಕಲಾಗಿದೆ. ಆಕೆ ಮೊಣಕಾಲಿಗಿಂತ ಮೇಲಿನ ಸ್ಕರ್ಟ್ ಧರಿಸಿದ್ದಳು ಎನ್ನುವ ಒಂದೇ ಒಂದು ಕಾರಣಕ್ಕೆ ಆಕೆಯನ್ನು ಶಾಲೆಯಿಂದ ಹೊರ ಹಾಕಲಾಗಿದೆ. ಆದರೆ ಶಾಲೆಯ ಈ ಧೋರಣೆಯ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾವೆಲ್ಲರೂ ವಿದ್ಯಾರ್ಥಿನಿಗೇ ಬೆಂಬಲ ನೀಡುವುದಾಗಿ ಅನೇಕರು ಹೇಳಿದ್ದಾರೆ.


ಶಾಲೆಯಿಂದ ಹೊರ ಹಾಕಲ್ಪಟ್ಟ ವಿದ್ಯಾರ್ಥಿನಿ ಪರವಾಗಿ ಅನೇಕ ಶಾಲಾ ಶಿಕ್ಷಕರೂ ಧ್ವನಿ ಎತ್ತಲಾರಂಭಿಸಿದ್ದಾರೆ. ಶಾಲೆಗಳ ಪುರುಷ ಶಿಕ್ಷಕರು ಸ್ಕರ್ಟ್​ ಧರಿಸಿ ಶಾಲೆಗೆ ಬಂದು ಪಾಠ ಮಾಡಲಾರಂಭಿಸಿದ್ದಾರೆ. ಬಟ್ಟೆಗೆ ಲಿಂಗವಿಲ್ಲ ಎಂದು ಕೂಗಿ ಹೇಳಲಾರಂಭಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net