ಮೋದಿಯಿಂದ ಮತ್ತೊಂದು ನೋಟ್ ಬ್ಯಾನ್​; ಬಿಜೆಪಿಗೆ ಕ್ಲ್ಯಾರಿಟಿಯೇ ಇಲ್ಲ: ಸಿದ್ದರಾಮಯ್ಯ

Siddaramaiah (2)
Published on

ಬೆಂಗಳೂರು: ಎರಡು ಸಾವಿರ ರೂ. ಮುಖಬೆಲೆಯ ನೋಟು ಹಿಂಪಡೆತ ಘೋಷಣೆಯಾದ ಬೆನ್ನಿಗೇ ಕಾಂಗ್ರೆಸ್​ನ ಹಲವರು ನಾಯಕರು ಬಿಜೆಪಿಯನ್ನು ಟೀಕಿಸಿ ಪ್ರತಿಕ್ರಿಯೆ ನೀಡುತ್ತಿದ್ದು, ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ ಕೂಡ ಟೀಕೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯಿಂದ ಮತ್ತೊಂದು ನೋಟ್ ಬ್ಯಾನ್ ಆಗಿದ್ದು, ಬಿಜೆಪಿಗೆ ತನ್ನ ನೀತಿಗಳ ಬಗ್ಗೆ ಸ್ಪಷ್ಟತೆಯೇ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಬ್ಯಾನ್ ಮಾಡುವ ಉದ್ದೇಶ ಇದ್ದಿದ್ದೇ ಆಗಿದ್ದರೆ ಅವರು ಅದನ್ನು 2016ರಲ್ಲಿ ಚಲಾವಣೆಗೆ ತಂದಿದ್ದಾದರೂ ಯಾಕೆ? ಎಂದೂ ಅವರು ಪ್ರಶ್ನಿಸಿದ್ದಾರೆ.

ಭಾರತೀಯ ಜನತಾ ಪಕ್ಷ ತನ್ನ ವೈಫಲ್ಯಗಳಿಂದ ಜನರ ಗಮನವನ್ನು ಬೇರೆ ಕಡೆ ಸೆಳೆಯುವ ಹತಾಶ ಪ್ರಯತ್ನವಾಗಿ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆದುಕೊಂಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net