ಪರವಾಗಿಲ್ಲ, ಇದನ್ನು ಒಪ್ಪುತ್ತೇವೆ… ನಟಿ ರಾಖಿ ಸಾವಂತ್ ಮಾಡಿದ ಎಡವಟ್ಟನ್ನು ಕ್ಷಮಿಸಿದ ನೆಟ್ಟಿಗರು!

WhatsApp Image 2024-05-05 at 4.19.56 PM
Published on

ಬಾಲಿವುಡ್​ನ ನಟಿ, ವಿವಾದಗಳ ರಾಣಿ ಎಂದೇ ಕರೆಯಲ್ಪಡುವ ಹಾಟ್ ಬೆಡಗಿ ರಾಖಿ ಸಾವಂತ್ ಸದ್ಯ ಒಂದಲ್ಲ ಒಂದು ವಿಷಯಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಲೇ ಇರುತ್ತಾರೆ. ಇದೀಗ ಅದೇ ರೀತಿ ಮತ್ತೊಂದು ವಿಷಯದಿಂದ ಭಾರೀ ವಿವಾದಕ್ಕೆ ಸಿಲುಕಿದ ನಟಿ, ತದನಂತರ ನಡೆದುಕೊಂಡ ಪರಿಗೆ ನೆಟ್ಟಿಗರು ಪರವಾಗಿಲ್ಲ, ಇದನ್ನು ಒಪ್ಪುತ್ತೇವೆ ಎಂದು ಆಕೆಯ ಬೆನ್ನುತಟ್ಟಿ, ಮೆಚ್ಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ನಟಿಗೆ ಅಭಿಮಾನಿಯೊಬ್ಬರು ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇದನ್ನು ಸ್ವೀಕರಿಸಲು ಗ್ರ್ಯಾಂಡ್ ಆಗಿ ಮುಂಬೈ ನಗರಕ್ಕೆ ಎಂಟ್ರಿ ಕೊಟ್ಟ ರಾಖಿ ಸಾವಂತ್​ರನ್ನು ನೋಡಲು ಜನರು ಮುಗಿಬಿದ್ದರು. ಈ ವೇಳೆ ನೂಕುನುಗ್ಗಲು ಉಂಟಾದ ಕಾರಣ ನಟಿ ಸಿಡಿಮಿಡಿಗೊಂಡಿದ್ದರು. ಜನರ ಮಧ್ಯೆಯೇ ಕಾರಿನ ಬಳಿ ಬರುವಾಗ ಮಹಿಳಾ ಅಭಿಮಾನಿಯೊಬ್ಬರು ತನಗೆ ಕಿರಿಕಿರಿ ಉಂಟುಮಾಡಿದರು ಎಂಬ ಕಾರಣಕ್ಕೆ ಆಕೆಗೆ ರಾಖಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಈ ಗಲಾಟೆಯಿಂದ ತೀವ್ರ ಬೇಸರಗೊಂಡ ನೆರೆದಿದ್ದ ಅಭಿಮಾನಿಗಳು ನಟಿಯ ನಡೆಗೆ ತೀವ್ರ ಅಸಮಾಧಾನ ಹೊರಹಾಕಿದರು. ಮೊದ ಮೊದಲು ಆಕೆಯ ಜತೆ ವಾಗ್ವಾದ ಮಾಡಿದ ರಾಖಿ, ತದನಂತರ ಮಹಿಳಾ ಅಭಿಮಾನಿಯನ್ನು ಕೂಗಿ ಕರೆದು, ಫೋಟೋ ತೆಗೆದುಕೊಳ್ಳೋಣ ಬನ್ನಿ ಎಂದು ಹೇಳಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ನಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು, ಮಾಡಿದ್ದು ತಪ್ಪೇ! ಆದರೂ ಪರವಾಗಿಲ್ಲ, ಇದನ್ನು ಒಪ್ಪುತ್ತೇವೆ ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net