More

    ಸ್ಥಗಿತಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಮತ್ತೆ ಪುನರಾರಂಭ!

    ರಾಮ ಕಿಶನ್​ ಕೆ.ವಿ.
    ಬೆಂಗಳೂರು: ನಗರದಲ್ಲಿ ಮಾರ್ಚ್​ ಆರಂಭವಾಗುತ್ತಿದ್ದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 224ಕ್ಕೂ ಹೆಚ್ಚಿನ ಶುದ್ಧ ಕುಡಿಯುವ ನೀರಿನ ಟಕಗಳು ಸ್ಥಗಿತಗೊಂಡಿದ್ದವು. ಇದೀಗ ಪರಿಸ್ಥಿತಿ ಸುಧಾರಿಸುತ್ತಿದ್ದು, ಆ ಘಟಕಗಳು ಮತ್ತೆ ಕಾರ್ಯಾರಂಭಿಸುತ್ತಿವೆ.

    ಸಮಸ್ಯೆ ಅರಿತುಕೊಂಡ ಜಲಮಂಡಳಿ ಕಳೆದ ತಿಂಗಳಿನಿಂದ ಸ್ಥಗಿತಗೊಂಡಿದ್ದ ಶುದ್ಧ ಕುಡಿಯುವ ನೀರಿನ ಟಕಗಳಿಗೆ ನಿತ್ಯ ಟ್ಯಾಂಕರ್​ ಹಾಗೂ ಪೈಪ್​ಲೈನ್​ ಮೂಲಕ ಕಾವೇರಿ ನೀರನ್ನು ಪೂರೈಕೆ ಮಾಡುತ್ತಿದೆ. ಈ ನೀರನ್ನು ಟಕಗಳಲ್ಲಿರುವ ಟ್ಯಾಂಕ್​ನಲ್ಲಿ ಶೇಖರಿಸಲಾಗುತ್ತಿದೆ. ಬಳಿಕ ಶುದ್ಧೀಕರಿಸಿ ಮೊದಲಿನಂತೆ ಗ್ರಾಹಕರಿಗೆ ನೀರು ವಿತರಿಸಲಾಗುತ್ತಿದೆ. ಈ ಪ್ರಯತ್ನದಿಂದಾಗಿ ಸ್ಥಗಿತಗೊಂಡಿದ್ದ ಬಹುತೇಕ ಟಕಗಳಲ್ಲಿ ಮತ್ತೆ ನೀರು ಲಭಿಸುವಂತಾಗಿದೆ.

    ಎಲೆಕ್ಟ್ರಾನಿಕ್ಸ್​ ಸಿಟಿ, ರಾಜರಾಜೇಶ್ವರಿನಗರ, ಯಶವಂತಪುರ, ವಿಜಯನಗರ, ಮಡಿವಾಳ, ಮಾರತ್ತಹಳ್ಳಿ, ಬ್ಯಾಟರಾಯನಪುರ, ಅವಲಹಳ್ಳಿ ಸೇರಿ ವಿವಿಧ ಭಾಗಗಲ್ಲಿ ಬಿಬಿಎಂಪಿ ಸ್ಥಾಪಿಸಿರುವ ಕುಡಿಯುವ ನೀರಿನ ಟಕಗಳು ಹೆಚ್ಚಿನ ಸಂಖ್ಯೆಯಲ್ಲಿ ನಿಷ್ಕ್ರಿಯಗೊಂಡಿದ್ದವು. ಪರಿಣಾಮ ಕೆಲವೆಡೆ ಒಬ್ಬ ವ್ಯಕ್ತಿಗೆ ಒಂದು ಕ್ಯಾನ್​ ನೀರು ಕೊಂಡೊಯ್ಯಲಷ್ಟೇ ಅವಕಾಶ ನೀಡಲಾಗುತ್ತಿತ್ತು. ಈ ಬಗ್ಗೆ ಬಿಬಿಎಂಪಿ ಮಾಹಿತಿ ನೀಡಿದ್ದು, 1,120 ಶುದ್ಧ ಕುಡಿಯುವ ನೀರಿನ ಟಕಗಲ್ಲಿ 1,104 ಟಕಗಳಲ್ಲಿ ನೀರು ಲಭ್ಯವಾಗುತ್ತಿದೆ. ಏಪ್ರಿಲ್​ ಅಂತ್ಯದ ವೇಳೆಗೆ 16 ಟಕಗಳು ಸ್ಥಗಿತಗೊಂಡಿವೆ ಎಂದು ತಿಳಿಸಿದೆ. ಬೆಂಗಳೂರು ದಣದಲ್ಲಿ 4, ಬೊಮ್ಮನಹಳ್ಳಿಯಲ್ಲಿ 2, ಮಹದೇವಪುರದಲ್ಲಿ ಮತ್ತು ಆರ್​.ಆರ್​. ನಗರದಲ್ಲಿ ತಲಾ 5 ಟಕಗಳು ಮಾತ್ರ ಸ್ಥಗಿತಗೊಂಡಿವೆ. ಉಳಿದವು ಮತ್ತೆ ಕಾರ್ಯಾರಂಭಿಸಿವೆ.

    ಕೆಲ ಗಂಟೆಯಷ್ಟೇ ನೀರು ಪೂರೈಕೆ

    ನೀರಿನ ಅಭಾವದ ನಡುವೆಯೂ ಕಾರ್ಯನಿರ್ವಹಿಸುತ್ತಿರುವ ಕೆಲ ಟಕಗಳು ನೀರು ಪೂರೈಸಲು ಸಮಯ ನಿಗದಿಪಡಿಸಿಕೊಂಡಿದೆ. ಬೆಳಗ್ಗೆ 8ರಿಂದ ಮಧ್ಯಾಹ್ನ 1 ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ನೀರು ಪೂರೈಸುತ್ತಿದೆ. ಎಲ್ಲ ಟಕಗಳ ಮುಂದೆ ಬೋರ್ಡ್​ಗಳನ್ನು ಅಳವಡಿಸಿ ಸಮಸ್ಯೆ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗುತ್ತಿದೆ.

    ಸರತಿ ಸಾಲು ನಿರಂತರ

    ನಿಧಾನವಾಗಿ ಸಮಸ್ಯೆ ಬಗೆಹರಿಯುತ್ತಿದ್ದರೂ ಶುದ್ಧ ಕುಡಿಯುವ ನೀರಿನ ಘಟಕಗಳ ಮೇಲೆ ಒತ್ತಡ ಮಾತ್ರ ಕಡಿಮೆಯಾಗುತ್ತಿಲ್ಲ. ನೀರು ಪಡೆದುಕೊಳ್ಳಲು ಬೆಳಗ್ಗೆಯಿಂದಲೇ ಜನರು ಸರತಿಯಲ್ಲಿ ನಿಲ್ಲುವ ದೃಶ್ಯ ಸಾಮಾನ್ಯ ಎಂಬಂತಾಗಿದೆ. ಕಳೆದ ಎರಡು ತಿಂಗಳಿನಿಂದ ಟಕಗಳಿಂದ ನೀರು ಪಡೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಿದೆ.

    ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಶುದ್ಧ ಕುಡಿಯುವ ನೀರಿನ ಟಕಗಳಿಗೆ ನಿತ್ಯ 10 ಸಾವಿರ ಲೀ. ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಈ ನೀರನ್ನು ಶುದ್ಧೀಕರಿಸಿಕೊಂಡು ಟಕಗಳು ಮತ್ತೆ ಕಾರ್ಯಾರಂಭಿಸಿವೆ. ಈ ಮೂಲಕ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ವ್ಯವಸ್ಥೆ ಮಾಡಲಾಗಿದೆ. ಸಮಸ್ಯೆ ಬಗೆಹರಿಯುವವರೆಗೆ ಈ ಕ್ರಮ ಅನುಸರಿಸಲಾಗುತ್ತದೆ.
    -ಡಾ.ವಿ.ರಾಮ್​ ಪ್ರಸಾತ್​ ಮನೋಹರ್​, ಬೆಂಗಳೂರು ಜಲಮಂಡಳಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts