More

  ಹೊಣೆ ಮರೆತ್ರೆ ಕಷ್ಟ ‘ಗ್ಯಾರಂಟಿ’!

  ಅಭಿವೃದ್ಧಿಗೆ ಸಿಕ್ಕಿಲ್ಲ ಹಣದ ಪಾಲು | ಸರ್ಕಾರಕ್ಕೆ ಸರಣಿ ಸವಾಲು

  ಬೆಂಗಳೂರು: ಪಂಚ ಗ್ಯಾರಂಟಿ ಯೋಜನೆಗಳ ಎಕ್ಸ್​ಪ್ರೆಸ್ ಏರಿ ವಿಧಾನಸೌಧದಲ್ಲಿ ಆಸೀನರಾದ ಸಿಎಂ ಸಿದ್ದರಾಮಯ್ಯ ಹಲವು ವಿವಾದಗಳ ತಿರುವು, ಬರ, ತೆರಿಗೆ ಕೊರತೆಯಂತಹ ರೋಡ್ ಹಂಪ್ ದಾಟಿ 1 ವರ್ಷದ ಪ್ರಯಾಣ ಪೂರ್ಣಗೊಳಿಸಿದ್ದಾರೆ. ಆದರೆ ಸರ್ಕಾರದ ಈ ರಥ ನಿಶ್ಚಿಂತೆಯಿಂದ ಸಾಗಲು ಗ್ಯಾರಂಟಿ ಇಂಧನವಷ್ಟೇ ಸಾಲದು, ಅಭಿವೃದ್ಧಿಯ ಬಂಡವಾಳವೂ ಬೇಕೆಂಬ ಕಟು ಸತ್ಯ ಸಿದ್ದರಾಮಯ್ಯಗೆ ಮನವರಿಕೆ ಆಗಿದೆ.

  2023 ಮೇ 20ರ ಶನಿವಾರ ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಸಮಾರಂಭದಲ್ಲಿ ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ಜೋಡಿ ಪ್ರಮಾಣ ವಚನ ಸ್ವೀಕರಿಸಿತ್ತು. ಅದರೊಂದಿಗೆ ಸಿದ್ದರಾಮಯ್ಯ 2.0 ಸರ್ಕಾರದ ಪರ್ವ ಆರಂಭವಾಗಿತ್ತು. ಅಧಿಕಾರ ಸ್ವೀಕರಿಸಿದ ಕೆಲ ಹೊತ್ತಿನಲ್ಲೇ ಸಂಪುಟ ಸಭೆ ನಡೆಸಿದ್ದ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಅನುಷ್ಠಾನ ಮಾಡುವ ನಿರ್ಣಯ ಕೈಗೊಂಡಿತ್ತು. ಈ ಪಂಚ ಗ್ಯಾರಂಟಿಗಳೇ ಲೋಕಸಭೆ ಚುನಾವಣೆ ಮುಗಿಯುವವರೆಗೆ ಸಿದ್ದರಾಮಯ್ಯ ಸರ್ಕಾರದ ಟ್ರಂಪ್ ಕಾರ್ಡ್ ಆಗಿದ್ದು ಇತಿಹಾಸ.

  ರಾಜಕೀಯ ಮಹತ್ವ: ಇಡೀ ದೇಶದಲ್ಲಿ ಕಾಂಗ್ರೆಸ್ ಬುಡ ಅಲ್ಲಾಡುತ್ತಿದ್ದಾಗ ಪಕ್ಷದ ಬೇರು ಇನ್ನೂ ಗಟ್ಟಿಯಾಗಿದೆ ಎಂಬುದನ್ನು ಸಾಬೀತುಪಡಿಸಿದ್ದೇ ಕರ್ನಾಟಕ. ಕರ್ನಾಟಕದ ಗೆಲುವು ಇಡೀ ದೇಶಕ್ಕೆ ಸಂದೇಶ ಕಳಿಸಿತ್ತು.

  ಸಿದ್ದರಾಮಯ್ಯ ಸರ್ಕಾರಕ್ಕೆ ವರ್ಷದ ಹರ್ಷ:

  ಗ್ಯಾರಂಟಿ ಬಿಟ್ಟೇನು?

  ಗಿಗ್ ಕಾರ್ವಿುಕರಿಗೆ ವಿಮಾ ಯೋಜನೆ

  ಕ್ಯಾಬ್ ಚಾಲಕರ ಮಕ್ಕಳಿಗೆ ನೆರವು

  ಅಲ್ಪಸಂಖ್ಯಾತರಿಗೆ 1 ಸಾವಿರ ಕೋಟಿ ರೂ.

  ಬ್ರಾ್ಯಂಡ್ ಬೆಂಗಳೂರು ಕಲ್ಪನೆಗೆ ಜೀವ

  ಜಾತಿಗಣತಿ ಸ್ವೀಕಾರಕ್ಕೆ ಗಟ್ಟಿತನದ ನಿರ್ಧಾರ

  ಎಸ್​ಸಿ ಮೀಸಲು ವರ್ಗೀಕರಣ ಜಾಣ ನಡೆ

  ಹಿಂದುಳಿದ ವರ್ಗಕ್ಕೆ ಮೀಸಲು ವಿಚಾರ

  ರಾಜಕೀಯ ಮೀಸಲಿಗೆ ಭಕ್ತವತ್ಸಲ ವರದಿ ಸ್ವೀಕಾರ

  ಗ್ಯಾರಂಟಿ ವೆಚ್ಚ:

  ಮಹಿಳೆಯರ ಫ್ರೀಬಸ್ ಸೇವೆ ಶಕ್ತಿ ಯೋಜನೆಗೆ 5,096 ಕೋಟಿ ರೂ.ವೆಚ್ಚ, 210.29 ಕೋಟಿ ಟಿಕೆಟ್ ವಿತರಣೆ

  ಮಾಸಿಕ 2 ಸಾವಿರ ನೀಡುವ ಗೃಹಲಕ್ಷ್ಮಿಗೆ 1.17 ಕೋಟಿ ನೋಂದಣಿ, 11,726 ಕೋಟಿ ರೂ. ವರ್ಗಾವಣೆ

  ಅನ್ನಭಾಗ್ಯ ಯೋಜನೆ ಅಡಿ 5 ಕೆಜಿ ಧಾನ್ಯದ ಮೊತ್ತ ವರ್ಗಾವಣೆ, ತಲಾ 170 ರೂ.ನಂತೆ 4.02 ಕೋಟಿ ಫಲಾನುಭವಿಗಳಿಗೆ ಲಾಭ

  ಗೃಹಜ್ಯೋತಿಯಡಿ 200 ಯುನಿಟ್​ವರೆಗೆ ಉಚಿತ ವಿದ್ಯುತ್ ಪೂರೈಕೆ

  ಯುವನಿಧಿ ಅಡಿ 1.40 ಲಕ್ಷ ಪದವೀಧರರು, ಡಿಪ್ಲೋಮಾ ಪದವೀಧರರ ನೋಂದಣಿ

  ಹತ್ತು ಹಲವು ವಿವಾದಗಳು

  ಕೇಂದ್ರದೊಂದಿಗೆ ಸಂಘರ್ಷಕ್ಕೆ ಇಳಿದಿದ್ದು ಒಂದೆಡೆಯಾದರೆ ಸರ್ಕಾರ ರಚನೆಯಾದ ಆರಂಭದಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಗೊಳಿಸುವ ನಿರ್ಣಯ ಕೈಗೊಂಡಿದ್ದು ಬಿರುಗಾಳಿ ಎಬ್ಬಿಸಿತ್ತು. ಬರ ಪರಿಹಾರ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲೇರಿ ಸಂಘರ್ಷದ ಹಾದಿ ತುಳಿಯಿತು. ಇನ್ನೊಂದು ಭಾಗದಲ್ಲಿ ಎಸ್​ಎಸ್​ಎಲ್​ಸಿ ಫಲಿತಾಂಶ ಏರಿಸಲು ಗ್ರೇಸ್ ಮಾರ್ಕ್ ನೀಡಿದ್ದು, ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯ ಹೊರತಾದ ಪ್ರಶ್ನೆಗಳು ನುಸುಳಿದ್ದು, ಪಠ್ಯ ಪುಸ್ತಕ ಪುನಾರಚನೆಯಂತ ವಿವಾದವನ್ನೂ ಸರ್ಕಾರ ಮೈಮೇಲೆ ಎಳೆದುಕೊಂಡಿತ್ತು.

  ಆರ್​ಸಿಬಿ ಗೆಲುವಿಗೆ ಅಲ್ಲಿಂದಲೇ ಶುಭಕೋರಿದ ವಿಜಯ್​​ ಮಲ್ಯ! ದಯವಿಟ್ಟು ಫೈನಲ್​ಗಾದ್ರೂ ಭಾರತಕ್ಕೆ ಬನ್ನಿ…

  ಇದೇ ನಮ್ಮ ಸೋಲಿಗೆ ಮುಖ್ಯ ಕಾರಣ… ತಂಡದ ಸಹ ಆಟಗಾರರನ್ನು ದೂರಿದ ರುತುರಾಜ್ ಗಾಯಕ್ವಾಡ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts