ಬೆಲೆ ಕುಸಿತದಿಂದ ರೈತರು ಕಂಗಾಲು; ರಸ್ತೆಗೆ ಟೊಮ್ಯಾಟೊ ಸುರಿದು ಆಕ್ರೋಶ!

Untitled design - 2023-09-07T174422.685
Published on

ಆಂಧ್ರಪ್ರದೇಶ: ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 4 ರೂ.ಗೆ ಕುಸಿತ ಕಂಡ ಪರಿಣಾಮ ಕಂಗಾಲಾದ ಕರ್ನೂಲ್‌ ರೈತರು, ರಾಶಿ ರಾಶಿ ಟೊಮ್ಯಾಟೊ ಬೆಳೆಯನ್ನು ರಸ್ತೆಗೆ ಸುರಿದ ಘಟನೆ ಆಂಧ್ರಪ್ರದೇಶದಲ್ಲಿ ವರದಿಯಾಗಿದೆ.

ತಾವು ಬೆಳೆದ ಟೊಮ್ಯಾಟೊ ಬೆಳೆಯನ್ನು ಉತ್ತಮ ಬೆಲೆಗೆ ಮಾರಾಟ ಮಾಡುವ ಆಲೋಚನೆಯಲ್ಲಿ ಮಾರುಕಟ್ಟೆಗೆ ಬಂದ ರೈತರಿಗೆ ಕೆಜಿ ಟೊಮ್ಯಾಟೊ ಬೆಲೆ 4 ರೂ.ಗೆ ಕುಸಿದಿದೆ ಎಂಬ ಸಂಗತಿ ತಿಳಿದು ಬೇಸರವಾಗಿದೆ. ಈ ಕಾರಣದಿಂದ ತಂದಿದ್ದ ಟೊಮ್ಯಾಟೊವನ್ನು ರಸ್ತೆಗೆ ಎಸೆದಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 150-200 ರೂ. ಏರಿಕೆಯಾಗಿತ್ತು. ಆದ್ರೆ, ಈಗ ಗಮನಾರ್ಹವಾಗಿ ಕುಸಿತ ಕಂಡಿದ್ದು, ಇದರಿಂದ ಕರ್ನೂಲ್ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.

ಕರ್ನೂಲ್ ಜಿಲ್ಲೆಯ ಕೃಷಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಕುಸಿದ ಪರಿಣಾಮ ಇದೀಗ ರೈತರು ತಾವು ಬೆಳೆದ ಉತ್ಪನ್ನಗಳನ್ನು ರಸ್ತೆಯಲ್ಲಿ ಚೆಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ತಮ್ಮ ಆರ್ಥಿಕ ಸಂಕಷ್ಟಕ್ಕೆ ಕಾರ್ಮಿಕ ಮತ್ತು ಸಾರಿಗೆ ಕಾರಣ ಎಂದು ಹೇಳಿದ್ದಾರೆ. ಟೊಮ್ಯಾಟೊ ಬೆಲೆ ಇಳಿಕೆಯಿಂದ ಮೂಲ ಸಾಮಗ್ರಿಗಳನ್ನು ಖರೀದಿಸಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net