More

    ಮತ್ತೆ ಶುರುವಾಗಲಿದೆ ಪಂಚಮಸಾಲಿ ಮೀಸಲಾತಿ ಹೋರಾಟ!

    ಬೆಳಗಾವಿ: ಬಿಜೆಪಿ ಸರ್ಕಾರವನ್ನು ಇನ್ನಿಲ್ಲದಂತೆ ಕಾಡಿದ್ದ ಪಂಚಮಸಾಲಿ ಲಿಂಗಾಯತ ಸಮಾಜದ 2ಎ ಮೀಸಲಾತಿ ಹೋರಾಟ ‌ಮತ್ತೆ ಮುನ್ನೆಲೆಗೆ ಬಂದಿದ್ದು, ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯಿಂದಲೇ ಮತ್ತೊಮ್ಮೆ ಮೀಸಲಾತಿ ಹೋರಾಟ ಆರಂಭವಾಗಲಿದೆ. ಹೋರಾಟ ಯಾವ ಸ್ವರೂಪದಲ್ಲಿ ಇರುತ್ತದೆ, ಎಲ್ಲಿಂದ ಹೋರಾಟ ಆರಂಭವಾಗುತ್ತದೆ ಎಂಬುದರ ವಿವರಗಳನ್ನು ಸ್ವತಃ ಸ್ವಾಮೀಜಿಯವರೇ ನೀಡಿದ್ದಾರೆ.

    ಇದನ್ನೂ ಓದಿ: ಅಕ್ರಮ ಸಂಬಂಧ ಮಹಿಳೆ ಕೊಲೆಯಲ್ಲಿ ಅಂತ್ಯ ಅಪ್ರಾಪ್ತ ಬಾಲಕನೇ ಆರೋಪಿ?

    ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಕೂಡಲಸಂಗಮ ಪೀಠದ ಜಗದ್ಗುರು ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆದಿದ್ದ ಸಂದರ್ಭದಲ್ಲಿ ಹೋರಾಟಕ್ಕೆ ಮಣಿದಿದ್ದ ಬೊಮ್ಮಾಯಿ ಸರ್ಕಾರ ಪ್ರತ್ಯೇಕ ಮೀಸಲಾತಿ ರಚಿಸಿ 2ಡಿಯಡಿ ಮೀಸಲಾತಿ ಘೋಷಣೆ ಮಾಡಿ ಕೇಂದ್ರಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

    ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ 2ಡಿ ಮೀಸಲಾತಿ ಸಮಾಜದ ಗೊಂದಲಕ್ಕೆ ಕಾರಣವಾಗಿತ್ತು. ಇದು ಪಂಚಮಸಾಲಿ ಲಿಂಗಾಯತ ಸಮಾಜದ ಕೆಂಗಣ್ಣಿಗೂ ಗುರಿಯಾಗಿದ್ದಲ್ಲದೇ, ಮೀಸಲಾತಿ ಹೋರಾಟದ ಎಫೆಕ್ಟ್ ಕಳೆದ ವಿಧಾನಸಭೆ ಕಲಾಪದ ಮೇಲೆ ಬಿದ್ದಿತ್ತು‌‌. ಆದರೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಲ್ಲಿದೆ. 2ಎ ಮೀಸಲಾತಿ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದ್ದು, ಕೂಡಲಸಂಗಮ ಪೀಠದ ಜಗದ್ಗುರುಗಳ ನೇತೃತ್ವದಲ್ಲಿ ಪ್ರತಿ ತಾಲೂಕು ಜಿಲ್ಲಾ ಕೇಂದ್ರದಲ್ಲಿ ಪೂರ್ವಭಾವಿ ಸಭೆಗಳನ್ನು ಮಾಡಲಾಗುತ್ತಿದೆ.

    ಇದನ್ನೂ ಓದಿ: ಹಾರರ್​ ವೀಕ್ಷಿಸುವ ಪ್ರೇಕ್ಷಕರಿಗೆಂದೇ ತಯಾರಾದ ‘ದಿ ನನ್ 2’ ರಿಲೀಸ್​ಗೆ ಕ್ಷಣಗಣನೆ!

    ಹೋರಾಟ ನೇತೃತ್ವದ ವಹಿಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಈಗಾಗಲೇ ಬೆಳಗಾವಿ ಜಿಲ್ಲೆಯ ತಾಲೂಕಾ ಕೇಂದ್ರಗಳಲ್ಲಿ ಪೂರ್ವಭಾವಿ ಸಭೆಗಳನ್ನು ಮಾಡುತ್ತಿದ್ದು, ಹೇಗೆ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಬೇಕೆಂಬ ಅಭಿಪ್ರಾಯದ ಜತೆಗೆ ಸಮಾಜದ ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದು, ರಾಜ್ಯ ಸರ್ಕಾರಕ್ಕೆ ಮತ್ತೆ ಮೀಸಲಾತಿ ಹೋರಾಟದ ಟೆನ್ಶನ್ ಶುರುವಾಗಲಿದೆ.

    ಸೆ. 10ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಲಿದ್ದಾರೆ. ಲಿಂಗಾಯತ ಪಂಚಮಸಾಲಿ, ಚತುರ್ಥ ಲಿಂಗಾಯತ, ಗೌಡ ಲಿಂಗಾಯತರಿಗೆ ರಾಜ್ಯ ಸರ್ಕಾರ 2ಎ ಮೀಸಲಾತಿ ಹಾಗೂ ಎಲ್ಲಾ ಲಿಂಗಾಯತ ಉಪ ಸಮಾಜಕ್ಕೆ ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಯನ್ನು ನೀಡಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಲಿದ್ದಾರೆ.

    ಇದನ್ನೂ ಓದಿ: Has Gruha Lakshmi Registration Stopped?: Lakshmi Hebbalkar Reacts | ಗೃಹಲಕ್ಷ್ಮಿ ಯೋಜನೆ ನೋಂದಣಿ ಸ್ಥಗಿತ ಆಯ್ತಾ? ಲಕ್ಷ್ಮಿ ಹೆಬ್ಬಾಳ್ಕರ್ ಹೇಳೋದೇನು?

    ”ಮೀಸಲಾತಿಗಾಗಿ ಕಳೆದ ಮೂರು ವರ್ಷಗಳಿಂದ ದೊಡ್ಡ ಹೋರಾಟ ಮಾಡಿದ್ದೇವೆ. ನಮಗೆ ಸಿಗಬೇಕಾದ ಮೀಸಲಾತಿ ಅನುಷ್ಟಾನಗೊಂಡಿಲ್ಲ. ಹೊಸ ಸರ್ಕಾರದ ಗಮನ ಸೆಳೆಯುವುದಕ್ಕೆ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಪುನರಾಂಭಿಸಬೇಕೆಂದು ನಿರ್ಧಾರ ಮಾಡಲಾಗಿದ್ದು, ರಾಜ್ಯಾದ್ಯಂತ ಬೃಹತ್ ಹೋರಾಟ ಮಾಡಲಾಗವುದು” ಎಂದು ತಿಳಿಸಿದ್ದಾರೆ.

    ಹಾರರ್​ ವೀಕ್ಷಿಸುವ ಪ್ರೇಕ್ಷಕರಿಗೆಂದೇ ತಯಾರಾದ ‘ದಿ ನನ್ 2’ ರಿಲೀಸ್​ಗೆ ಕ್ಷಣಗಣನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts