

ಬೆಂಗಳೂರು: ಮುಂದೆ ಬರಲಿರುವ ಲೋಕಸಭಾ ಚುನಾವಣೆಗೆ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದ್ದು, ದೇಶದ ಸಂವಿಧಾನ ಉಳಿಸಬೇಕು ಎನ್ನುವ ಚಿಂತನೆ ಇರುವ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಬೇಕಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: ಒಂದು ಕಾಲದ ಪ್ರಸಿದ್ಧ ಲಾವಣಿ ಕಲಾವಿದೆ ಇಂದು ಭಿಕ್ಷುಕಿ!
ಈ ಕುರಿತಾಗಿ ಮಾತನಾಡಿದ ಅವರು, ಎಲ್ಲ ಪಕ್ಷಗಳು ಸೇರಿಕೊಂಡು ಸಿಮ್ಲಾದಲ್ಲಿ ಸಭೆ ಮಾಡಲಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿಯ ಹೊಂದಾಣಿಕೆ ಮಾಡಬೇಕು. ಆ ಸಂಧರ್ಭದಲ್ಲಿ ಎಲ್ಲ ಪಕ್ಷಗಳು ಒಗ್ಗೂಡಿ ಯಾವ ಅಜೆಂಡಾಗಳ ಮೇಲೆ ಹೋಗಬೇಕು ಎನ್ನುವ ವಿಚಾರಗಳ ಬಗ್ಗೆ ಚರ್ಚಿಸಬೇಕಾಗಿದೆ ಎಂದು ಹೇಳಿದ್ದಾರೆ
ಬಡವರ ಅಕ್ಕಿ ವಿಚಾರವನ್ನು ಕೇಂದ್ರ ಸರ್ಕಾರವು ಪ್ರತಿಷ್ಠೆಯಾಗಿ ಪರಿಗಣಿಸಿದೆ. ನಮ್ಮ ಗ್ಯಾರಂಟಿಯನ್ನು ಜಾರಿ ಮಾಡುವ ಸಲುವಾಗಿ ಹಣವನ್ನು ತೆಗೆದುಕೊಂಡು ಅಕ್ಕಿ ಕೊಡುವಂತೆ ಕೇಂದ್ರಕ್ಕೆ ಕೇಳಿದ್ದೇವೆ. ಜನರ ಹಿತದೃಷ್ಟಿಯಿಂದ ಅಕ್ಕಿ ಕೊಡುವುದನ್ನು ಬಿಟ್ಟು, ಕೇಂದ್ರವು ರಾಜಕೀಯ ಮಾಡುತ್ತಿದೆ.
ಇದನ್ನೂ ಓದಿ: ಆ.17ರ ನಂತರ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಹಣ ಜಮೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೇರೆ ದೇಶಗಳು ಸಂಕಟದಲ್ಲಿದ್ದಾಗ ನಾವು ಬೇರೆ ದೇಶಕ್ಕೆ ಸಾಕಷ್ಟು ಆಹಾರ, ಹಣ, ಇತ್ಯಾದಿ ವಿಚಾರವಾಗಿ ಸಹಾಯ ಮಾಡಿದ್ದೇವೆ. ಈಗ ನಮ್ಮ ಜನಕ್ಕೆ ಅಕ್ಕಿ ಕೊಡಲಿಲ್ಲ ಎಂದರೆ ಹೇಗೆ? ಎಂದು ಖರ್ಗೆ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.(ಏಜೆನ್ಸೀಸ್)