More

    ಒಂದು ಕಾಲದ ಪ್ರಸಿದ್ಧ ಲಾವಣಿ ಕಲಾವಿದೆ ಇಂದು ಭಿಕ್ಷುಕಿ!

    ನವದೆಹಲಿ: ಪ್ರಸಿದ್ಧ ಲಾವಣಿ ಕಲಾವಿದೆ ಶಾಂತಾಬಾಯಿ ಕೋಪರಗಾಂವ್ಕರ್ ಅಹಮದ್‌ನಗರ ಜಿಲ್ಲೆಯ ಸೇಂಟ್ ಡಿಪೋದ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದಾರೆ.

    ಶಾಂತಾಬಾಯಿ ಕೋಪರಗಾಂವ್ಕರ್ ಅಲಿಯಾಸ್ ಶಾಂತಾಬಾಯಿ ಅರ್ಜುನ್ ಲೋಂಧೆ ಅವರು ಮಹಾರಾಷ್ಟ್ರದ ಲಾವಣಿ ಕಲಾವಿದೆ. ನಲವತ್ತು ವರ್ಷಗಳ ಹಿಂದೆ ಮುಂಬೈನ ಲಾಲ್‌ಬಾಗ್ ಪ್ಯಾರಾಲ್ ಹನುಮಾನ್ ಥಿಯೇಟರ್‌ನಲ್ಲಿ ಶಾಂತಾಬಾಯಿ , ಚಪ್ಪಾಳೆ, ಶಿಳ್ಳೆಗಳು ಪಡೆಯುತ್ತಿದ್ದರು. ಆದರೆ ಇಂದು ಕೋಪರಗಾಂವ್ ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುವ ಕಾಲ ಬಂದಿದೆ. ಕೋಪರ್‌ಗಾಂವ್‌ ಬಸ್‌ ನಿಲ್ದಾಣವೇ ಅವರ ಮನೆಯಾಗಿದ್ದು, ಆಹಾರಕ್ಕಾಗಿ ದಿನವಿಡೀ ಭಿಕ್ಷೆ ಬೇಡುತ್ತಿರುವುದು ಕಂಡು ಬರುತ್ತಿದೆ. ಕೆಲವರು ಆಕೆಗೆ ಹುಚ್ಚಿ ಎಂದು ಭಾವಿಸಿದರೆ, ಕೆಲವರು ಕಲ್ಲೆಸೆಯುತ್ತಾರೆ.

    ಕಳೆದ ಕೆಲ ದಿನಗಳಿಂದ ವೃದ್ಧೆಯೊಬ್ಬರು ಲಾವಣಿ ಹಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣುತ್ತಿರುವ ವೃದ್ಧೆ ಲಾವಣಿ ಕಲಾವಿದೆ ಎಂದು ಮಾಹಿತಿ ಪಡೆದು ಕೋಪರಗಾಂವ ಸಮಾಜ ಸೇವಕ ಡಾ. ಅಶೋಕ್ ಗವಿತ್ರೆ ಕೋಪರಗಾಂವ್‌ನಲ್ಲಿ ಹುಡುಕಾಟವನ್ನು ಪ್ರಾರಂಭಿಸಿದರು.

    ಆ ನಂತರ, ಎರಡು ದಿನಗಳ ನಂತರ ಕೋಪರಗಾಂವ್ ಪಟ್ಟಣದ ವಿಘ್ನೇಶ್ವರ ಚೌಕದಲ್ಲಿ ವೃದ್ಧೆ ಪತ್ತೆಯಾಗಿದ್ದಾರೆ. ಆ ನಂತರ ಆಕೆಯನ್ನು ಕಾರಿನಲ್ಲಿ ಕೂರಿಸಿ ಶಾಂತಾಬಾಯಿಯ ಸೋದರಳಿಯ ಧೋಂಡಿರಾಮ್ ಲೋಂಧೆ ಮನೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿ ಹೊಸ ಬಟ್ಟೆ ತೊಡಲು ಅನುವು ಮಾಡಿಕೊಡಲಾಯಿತು. ಬಳಿಕ ಚಹಾ, ಉಪಹಾರ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.

    ತಮ್ಮ ಮದುವೆಯಲ್ಲಿ ಹರಿಯಿತು ರಕ್ತದೋಕುಳಿ; ನವದಂಪತಿ ಸೇರಿ ನಾಲ್ವರ ಪ್ರಾಣ ತೆಗೆದ ಅಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts