ಬಾಲಿವುಡ್​ ಚಿತ್ರರಂಗಕ್ಕೆ ಶಾಕ್​: ಒಂದೇ ದಿನ ಇಹಲೋಕ ತ್ಯಜಿಸಿದ ಖ್ಯಾತ ನಟ-ನಟಿ

viabhavi and nitesh
Published on

ಮುಂಬೈ: ಬಾಲಿವುಡ್​ ಚಿತ್ರರಂಗಕ್ಕೆ ಶಾಕ್ ಎದುರಾಗಿದ್ದು, ಒಂದೇ ದಿನ ಖ್ಯಾತ ನಟ-ನಟಿ ಮೃತಪಟ್ಟಿದ್ದಾರೆ. ಖ್ಯಾತ ನಟಿ ವೈಭವಿ ಉಪಾಧ್ಯಾಯ ಹಾಗೂ ನಟ ನಟ ನಿತೇಶ್ ಪಾಂಡೆ ಇಹಲೋಕವನ್ನು ತ್ಯಜಿಸಿದ್ದು, ಅವರ ಅಗಲಿಕೆಗೆ ಹಲವಾರು ಸೆಲೆಬ್ರಿಟಿಗಳು ಕಂಬನಿಯನ್ನು ಮಿಡಿದ್ದಾರೆ.

ಬಾಲಿವುಡ್​ನ ಛಪಾಕ್ ಮತ್ತು ತಿಮಿ‌ ಚಿತ್ರಗಳಲ್ಲಿ ನಟಿಸಿದ್ದ ವೈಭವಿ ಮೃತಪಟ್ಟಿರುವ ಶಾಕಿಂಗ್ ಸುದ್ದಿಯ ಬಗ್ಗೆ ನಿರ್ಮಾಪಕ ಜೆಡಿ ಮಜೇಥಿಯಾ ತಿಳಿಸಿದ್ದು, ಜೀವನವು ತುಂಬಾ ಅನಿರೀಕ್ಷಿತವಾಗಿದೆ. ಸಾರಾಭಾಯಿ Vs ಸಾರಾಭಾಯಿ ಚಿತ್ರದ ಮಲ್ಲಿಗೆ ಪಾತ್ರದ ಜನಪ್ರಿಯ ನಟಿ, ಆತ್ಮೀಯ ಸ್ನೇಹಿತೆ ವೈಭವಿ ಉಪಾಧ್ಯ ಉತ್ತರ ಭಾರತದಲ್ಲಿ ನಡೆದ ಅಪಘಾತವೊಂದರಲ್ಲಿ ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್ನೊಂದೆಡೆ. ನಟ ನಿತೇಶ್ ಪಾಂಡೆ 51ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿತೇಶ್ ಅವರ ಸೋದರ ಮಾವ, ನಿರ್ಮಾಪಕ ಸಿದ್ಧಾರ್ಥ್ ನಗರ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ನಟ ನಿತೇಶ್ ಪಾಂಡೆ, ಅನುಪಮಾ, ಪ್ಯಾರ್ ಕಾ ದರ್ದ್ ಹೈ, ಮೀಠಾ ಮೀಠಾ-ಪ್ಯಾರಾ ಪ್ಯಾರಾ ಧಾರಾವಾಹಿಯಲ್ಲಿ ನಟಿಸಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net