More

    ಒಂದು ರಸ್ತೆ ಗುಂಡಿಗೆ 1 ಲಕ್ಷ ರೂ. ದಂಡ! ಗುತ್ತಿಗೆದಾರರಿಗೆ ಬಿಗ್​ ಶಾಕ್​

    ಮುಂಬೈ: ಪ್ರಮುಖ ನಗರಗಲ್ಲಿ ಎದುರಿಸುವ ಸಮಸ್ಯೆಗಳಲ್ಲಿ ಕಳಪೆ ರಸ್ತೆಯು ಒಂದು. ರಸ್ತೆ ಗುಂಡಿಗಳಿಂದ ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಬಗ್ಗೆ ನ್ಯಾಯಾಲಯ ಎಷ್ಟೇ ಎಚ್ಚರಿಕೆ ನೀಡಿದರೂ ಪಾಲಿಕೆಗಳು ಮಾತ್ರ ಈ ಬಗ್ಗೆ ಸರಿಯಾಗಿ ಗಮನಿಸುವುದೇ ಇಲ್ಲ. ಆದರೆ, ಮಹಹಾರಾಷ್ಟ್ರದ ಥಾಣೆ ಮುನ್ಸಿಪಲ್​ ಕಾರ್ಪೊರೇಷನ್​ ತೆಗೆದುಕೊಂಡಿರುವ ಈ ನಿರ್ಧಾರ ಇತರೆ ಪಾಲಿಕೆಗಳಿಗೆ ಮಾದರಿಯಾಗಿದೆ.

    ಇನ್ನು ಮುಂದೆ ರಸ್ತೆಗಳಲ್ಲಿ ಗುಂಡಿ ಬಿದ್ದರೆ ಅದಕ್ಕೆ ಗುತ್ತಿಗೆದಾರರು ಹೊಣೆಯಾಗಲಿದ್ದು, ಒಂದು ಗುಂಡಿ ಒಂದು ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಥಾಣೆಯ ಮುನ್ಸಿಪಲ್​ ಕಾರ್ಪೊರೇಷನ್​ ಎಚ್ಚರಿಕೆ ಸಂದೇಶವನ್ನು ಗುತ್ತಿಗೆದಾರರಿಗೆ ರವಾನಿಸಿದೆ. ಈ ವಿಚಾರವನ್ನು ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಇದನ್ನೂ ಓದಿ: ಚುನಾವಣೆಯಲ್ಲಿ ಸತತ ಸೋಲುಗಳ ಬಳಿಕ ಮಹತ್ವದ ನಿರ್ಧಾರಕ್ಕೆ ಮುಂದಾದ ನಿಖಿಲ್​ ಕುಮಾರಸ್ವಾಮಿ!

    ಒಪ್ಪಂದದಲ್ಲಿ ಒಂದು ಷರತ್ತನ್ನು ಸೇರಿಸಿದೆ

    ಥಾಣೆಯಲ್ಲಿ 134 ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ನಾವು ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದನ್ನು ಮಾತ್ರ ಖಚಿತಪಡಿಸಿಕೊಳ್ಳುವುದಿಲ್ಲ, ಅದರ ಜೊತೆಗೆ ರಸ್ತೆಗಳ ಗುಣಮಟ್ಟದ ಬಗ್ಗೆಯೂ ಗಮನಹರಿಸುತ್ತಿದ್ದೇವೆ. ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ತನ್ನ ಒಪ್ಪಂದದಲ್ಲಿ ಒಂದು ಷರತ್ತನ್ನು ಸೇರಿಸಿದೆ. ಇನ್ನು ಮುಂದೆ ಹೊಸದಾಗಿ ನಿರ್ಮಿಸುವ ರಸ್ತೆಗಳಲ್ಲಿ ಗುಂಡಿಗಳು ಬಿದ್ದರೆ, ಪ್ರತಿ ಗುಂಡಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಇಂತಹ ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ನಾವು ಒಪ್ಪುವುದಿಲ್ಲ ಶಿಂಧೆ ಹೇಳಿದರು.

    ಅಧಿಕಾರಿಗಳೇ ಹೊಣೆ

    ಕಳಪೆ ಗುಣಮಟ್ಟದ ರಸ್ತೆಯಿಂದ ಜನರಿಗೆ ತೊಂದರೆಯಾದರೆ ಸಂಬಂಧಪಟ್ಟ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಹಾಗೆಯೇ ಕಾಮಗಾರಿಗಳು ಸುಸೂತ್ರವಾಗಿ ನಡೆದರೆ ಸಂಬಂಧಪಟ್ಟ ಅಧಿಕಾರಿಯನ್ನು ಸನ್ಮಾನಿಸಲಾಗುವುದು ಎಂದು ಶಿಂಧೆ ತಿಳಿಸಿದರು. (ಏಜೆನ್ಸೀಸ್​)

    ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಹೆಸರು ಹೇಳ್ತಾನೆ 7ರ ಪೋರ! ಈತನ ನೆನಪಿನ ಶಕ್ತಿಗೆ ಒಂದು ಸಲಾಂ

    ಈಜುಕೊಳದಲ್ಲಿ ಮಿಂದೆದ್ದ ಎಮ್ಮೆಗಳು! ದಂಪತಿಗಾದ ನಷ್ಟದ ಮೊತ್ತ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

    ಬೋರಾಯ್ತಾ ಬರೀ ಮಾತು?; ಜತೆಗಿರಬೇಕು ಶರೀರ ಶಾರೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts