More

    ಸ್ಥಳೀಯ ಗುತ್ತಿಗೆದಾರರ ಕಡೆಗಣನೆ: ಬಿವೈಆರ್ ಬೇಸರ

    ಶಿವಮೊಗ್ಗ: ಅಕ್ರಮ, ಸಕ್ರಮ, ಗಂಗಾ ಕಲ್ಯಾಣ, ಕುಡಿಯುವ ನೀರಿನ ಯೋಜನೆ, ರೀ ಕಂಡಕ್ಟರಿಂಗ್ ಲಿಂಕ್‌ಲೈನ್ ಮುಂತಾದ ಬೃಹತ್ ಮೊತ್ತದ ದರ ಒಪ್ಪಂದ ಮತ್ತು ಟೆಂಡರ್ ಕೂಡಲೆ ರದ್ದುಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೆಸ್ಕಾಂನ ವಿದ್ಯುತ್ ಗುತ್ತಿಗೆದಾರರ ಸಂಘದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪದಾಧಿಕಾರಿಗಳು ನಡೆಸುತ್ತಿರುವ ಧರಣಿಯಲ್ಲಿ ಗುರುವಾರ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪಾಲ್ಗೊಂಡು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

    ಒಂದು ಲಕ್ಷದಿಂದ 5 ಲಕ್ಷ ರೂ.ವರೆಗಿನ ಕಾಮಗಾರಿಗಳನ್ನು ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ಎಸ್.ಆರ್.ದರದಲ್ಲಿ ನೇರವಾಗಿ ಪೂರ್ಣ ಅಥವಾ ಆಂಶಿಕ ಗುತ್ತಿಗೆ ನೀಡುವ ಆದೇಶವಿದ್ದರೂ ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಟೆಂಡರ್ ಕರೆದಿರುವುದರಿಂದ ಗುತ್ತಿಗೆದಾರರು ಬೀದಿಗೆ ಬೀಳುವಂತಾಗಿದೆ ಎಂದು ಬಿವೈಆರ್ ಹೇಳಿದರು.
    ನೀರಾವರಿ ಪಂಪ್‌ಸೆಟ್‌ಗಳಿಗೆ ಸ್ವಯಂ ಆರ್ಥಿಕ ಯೋಜನೆಯಡಿಯಲ್ಲಿ ಮಾಡುವ ಕಾಮಗಾರಿಗಳ ವಿದ್ಯುತ್ ಮಂಜೂರಾತಿಗಳನ್ನು ವಿದ್ಯುತ್ ಜಾಲದಿಂದ 500 ಮೀಟರ್ ಒಳಗಿನ ಮಿತಿಗೊಳಿಸಲಾಗುತ್ತಿದೆ. ಇದರಿಂದ 25 ಸಾವಿರ ರೂ. ಮೇಲ್ವಿಚಾರಣಾ ಶುಲ್ಕ, ಜಿಎಸ್‌ಟಿ ಮತ್ತು ಠೇವಣಿ ಸೇರಿ 40 ಸಾವಿರ ರೂ. ಆಗುವುದರಿಂದ ರೈತರಿಗೆ ಹೊರೆ ಆಗಲಿದೆ. ಶುಲ್ಕ ತೆಗೆಯಬೇಕೆಂದು ಸರ್ಕಾರದ ಗಮನಸೆಳೆಯಲಾಗುವುದು ಎಂದು ಭರವಸೆ ನೀಡಿದರು.
    ಶಾಸಕ ಎಸ್.ಎನ್.ಚನ್ನಬಸಪ್ಪ, ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ಕೆ.ಮಹಾಲಿಂಗಪ್ಪ, ಉಪಾಧ್ಯಕ್ಷರಾದ ಎಂ.ಎನ್.ರುದ್ರಮುನಿ, ಕಾರ್ಯದರ್ಶಿ ಎನ್.ಕುಮಾರ್, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಆರ್.ಹರೀಶ್, ಉಪಾಧ್ಯಕ್ಷರಾದ ಯು.ನರೇಶ್, ಪ್ರಮುಖರಾದ ಮರಿಯಾರಾಜ್, ಎಚ್.ಇ.ಹರೀಶ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts