ಇನ್ನುಮುಂದೆ ಯಾವ ವಿಷಯವಾಗಿಯೂ ಮಾತನಾಡದಂತೆ ದಿಗ್ಬಂಧ: ನಟ ಜಗ್ಗೇಶ್ ಹೀಗಂದಿದ್ಯಾಕೆ?

jaggesh
Published on

ಬೆಂಗಳೂರು: ಹುಲಿಯುಗುರಿನ ಪೆಂಡೆಂಟ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್​ ಅದಾದ ಬಳಿಕ ಬಹಳ ಬೇಸರಗೊಂಡಿದ್ದು, ಇದೀಗ ತೀರಾ ಮನನೊಂದು ತಮ್ಮ ಮನದ ಭಾವನೆಯನ್ನು ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಯಾವುದೇ ವಿಚಾರವಾದರೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಬಂದಿರುವ ಅವರು ಇದೀಗ ತೀರಾ ಬೇಸರಗೊಂಡಿದ್ದು, ಇನ್ನು ಮುಂದೆ ಯಾವ ವಿಚಾರವಾಗಿಯೂ ತಾವು ಮಾತನಾಡುವುದಿಲ್ಲ ಎಂಬಂಥ ನಿರ್ಧಾರಕ್ಕೆ ಬಂದಂತಿದೆ.

ತಮ್ಮ ತಾಯಿ ಉಡುಗೊರೆಯಾಗಿ ಕೊಟ್ಟಿರುವ ಹುಲಿಯುಗುರಿನ ಪೆಂಡೆಂಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮೆಟ್ಟಿಲೇರಿರುವ ಅವರಿಗೆ ಇಂದೊಂದು ಹೈಕೋರ್ಟ್ ಆದೇಶದಿಂದ ಸ್ವಲ್ಪ ನಿರಾಳಗೊಂಡಿರುವ ಅವರು ಅದರ ಬೆನ್ನಿಗೇ ತಮ್ಮ ಅನಿಸಿಕೆಯೊಂದನ್ನು ಹಂಚಿಕೊಂಡಿದ್ದಾರೆ.

"ನಾನಾಯಿತು ನನ್ನ ಬದುಕಾಯಿತು ಎಂದು ಶ್ರದ್ಧೆಯಿಂದ ಬಾಳುತ್ತಿರುವ ನನ್ನನ್ನು ಪ್ರಚಾರ ವಸ್ತುವಿನಂತೆ ಬಳಕೆ ಮಾಡಲಾಯಿತು. ಪ್ರೀತಿ ನಂಬಿಕೆ ಸಂಬಂಧ ಎಂದು ಸಾಮಾಜಿಕವಾಗಿ ಮಾತಾನಾಡುತ್ತಿದ್ದ ನನ್ನನ್ನು ಮೂಕನಾಗಿಸಿ ಇನ್ನುಮುಂದೆ ಯಾವ ವಿಷಯವು ಮಾತನಾಡದಂತೆ ದಿಗ್ಬಂಧ ಹಾಕಿಕೊಂಡಿತು ಮನಸ್ಸು ಇಂದಿನ ದುರ್ಧೈವ ಪ್ರಚಾರ ಕಂಡು! ಸಂಬಂಧ ಅರಿವಿಲ್ಲದ ಸಮುದಾಯ..!" ಎಂದು ಜಗ್ಗೇಶ್ ತಮ್ಮ ಮನದಾಳದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಅವರು ತಾವು ಇನ್ನು ಸೋಷಿಯಲ್ ಮೀಡಿಯಾದಲ್ಲಿ ಮುಕ್ತವಾಗಿ ಯಾವ ವಿಚಾರದ ಕುರಿತು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನೆ ಮಾಡಿದಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net