ಲೋಕ ಸಮರ 2024: ಸಚಿವರ ಪುತ್ರಿ VS ಶಾಸಕರ ಪತ್ನಿ! ಅಭ್ಯರ್ಥಿಗಳ ಬೆಂಬಲಿಗರಲ್ಲಿ ಬಿಗ್ ಫೈಟ್

WhatsApp Image 2024-03-21 at 2.43.50 PM
Published on

ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರ ಸದ್ಯ ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್​ಗಾಗಿ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಮತ್ತು ವೀಣಾ ಕಾಶಪ್ಪನವರು ಭಾರೀ ಜಿದ್ದಾಜಿದ್ದಿ ನಡೆಸುತ್ತಿದ್ದಾರೆ. ಟಿಕೆಟ್ ಪಡೆಯಲು ನಾ ಮುಂದು ತಾ ಮುಂದು ಎನ್ನುತ್ತಿರುವ ಮಧ್ಯೆ ಅಂತಿಮವಾಗಿ ಸಂಯುಕ್ತಾಗೆ ಕೈ ಟಿಕೆಟ್ ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಈ ಸುದ್ದಿ ಹೊರಬೀಳುತ್ತಿದ್ದಂತೆ ದೆಹಲಿಯಲ್ಲಿರುವ ವೀಣಾ ಕಾಶಪ್ಪನವರ ಕಣ್ಣೀರಿಟ್ಟಿದ್ದಾರೆ. ಕಾಂಗ್ರೆಸ್​ ಟಿಕೆಟ್​ಗಾಗಿ ಅಭ್ಯರ್ಥಿಗಳ ಮಧ್ಯೆ ಇರಬೇಕಾದ ಜಿದ್ದಾಜಿದ್ದಿ ಸದ್ಯ ಬೆಂಬಲಿಗರ ನಡುವೆ ಹೆಚ್ಚಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೀಣಾ ಕಾಶಪ್ಪನವರ ಹಾಗೂ ಸಂಯುಕ್ತಾ ಪಾಟೀಲ ಬೆಂಬಲಿಗರ ಬಿಗ್ ಫೈಟ್ ನಡೆಸುತ್ತಿದ್ದಾರೆ.

ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಹಾಗೂ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಬೆಂಬಲಿಗರ ನಡುವೆ ಸದ್ಯ ಭರ್ಜರಿ ಪೈಪೋಟಿ ಆರಂಭಗೊಂಡಿದ್ದು, ಕೇವಲ ಟಿಕೆಟ್​ಗಾಗಿ ಭಾರೀ ಜಟಾಪಟಿ ನಡೆಸುತ್ತಿದ್ದಾರೆ. ಒಂದೆಡೆ ಸಂಯುಕ್ತಾಗೆ ಟಿಕೆಟ್​ ಆಗಬೇಕು ಎಂದರೆ, ಮತ್ತೊಂದೆಡೆ ವೀಣಾಗೆ ಟಿಕೆಟ್​ ಕೊಡಬೇಕು, ಅದೇ ನ್ಯಾಯ ಎಂಬ ಕೂಗು ಕೇಳಿಬಂದಿದೆ.

ಸಂಯುಕ್ತಾ ಪಾಟೀಲಗೆ ಟಿಕೆಟ್ ಫಿಕ್ಸ್ ಎನ್ನುವ ಸುದ್ದಿ ವ್ಯಾಪಕವಾಗಿ ಕೇಳಿಬರುತ್ತಿದ್ದಂತೆ ವೀಣಾಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಲಿದೆ ಎಂಬ ಮಾಹಿತಿ ಅವರ ಬೆಂಬಲಿಗರಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಇಬ್ಬರು ಬೆಂಬಲಿಗರಿಂದ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲವರು ಸಂಯುಕ್ತಾ ಪಾಟೀಲ ಬಾಗಲಕೋಟೆಗೆ ಹೊಸ ಭರವಸೆ ಎಂದು ಬ್ಯಾಟಿಂಗ್ ಬೀಸಿದ್ದಾರೆ.

ಆದರೆ, ವೀಣಾ ಬೆಂಬಲಿಗರು 'ಗೋ ಬ್ಯಾಕ್ ಸಂಯುಕ್ತಾ' ಎಂದು ಪೋಸ್ಟರ್ ಹಿಡಿದು ಕಿಡಿಕಾರಿದ್ದಾರೆ. 'ಬರ್ರಿ ಪಾಟೀಲರ ಉಂಡು ಹೋಗ್ರಿ ಬಾಗಲಕೋಟೆ ನಿಮ್ಮಂತೋರಿಗೆ ಬಿಟ್ಟಿ ಬಿದ್ದೈತಿ' ಎಂದು ವ್ಯಂಗ್ಯವಾಡಿದ್ದಾರೆ. 'ವೀಣಾ ಹನಿ ಹನಿ ಕಣ್ಣೀರಿನ‌ಶಾಪ ತಟ್ಟದೇ ಬಿಡಲ್ಲ' ಎಂದು ಆಕ್ರೋಶ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net