

ಜೊಹಾನ್ಸ್ಬರ್ಗ್: ಕರೊನಾ ಲಾಕ್ಡೌನ್ ಅವಧಿಯಲ್ಲಿ ಮಾಲ್ಡೀವ್ಸ್ನ ಐಷಾರಾಮಿ ರೆಸಾರ್ಟ್ನಲ್ಲಿ ಇದ್ದ ಏಕೈಕ ಹನಿಮೂನ್ ಜೋಡಿ ಕೊನೆಗೂ ಸ್ವದೇಶಕ್ಕೆ ಮರಳಿದೆ. ದಕ್ಷಿಣ ಆಫ್ರಿಕಾದ ರೌಲ್ ಡೆ ಫ್ರೈಟಸ್(28) ಮತ್ತು ಒಲಿವಿಯಾ(27) ನವದಂಪತಿ ಕಳೆದ ಶನಿವಾರ ಮಾಲ್ಡೀವ್ಸ್ನಲ್ಲಿದ್ದ ಇತರೆ ದಕ್ಷಿಣ ಆಫ್ರಿಕಾದ ಪ್ರಜೆಗಳ ಜತೆಗೆ ಸರ್ಕಾರದ ನೆರವಿನೊಂದಿಗೆ ಮತ್ತೆ ಊರು ಸೇರಿದ್ದಾರೆ.
ಲಾಕ್ಡೌನ್ ಕಾರಣಕ್ಕೆ ಮಾಲ್ಡೀವ್ಸ್ನಲ್ಲಿ ಇವರೂ ಸೇರಿ 40 ದಕ್ಷಿಣ ಆಫ್ರಿಕಾ ಪ್ರಜೆಗಳು ಸಂಕಷ್ಟಕ್ಕೆ ಒಳಗಾಗಿದ್ದರು. ಒಬ್ಬೊಬ್ಬರದ್ದು ಒಂದೊಂದು ಕಥೆ-ವ್ಯಥೆ. ಅವರ ನೆರವಿಗೆ ಅಲ್ಲಿನ ದಕ್ಷಿಣ ಆಫ್ರಿಕಾ ರಾಯಭಾರಿ ಮೊಹಮ್ಮದ್ ಅಲಿ ಮನಿಕ್ ಧಾವಿಸಿದ್ದರು. ಹೀಗಾಗಿ ಪ್ರಯಾಣಕ್ಕೆ ಇರುವ ಎಲ್ಲ ವ್ಯವಸ್ಥೆಯೂ ಆದ ನಂತರ ಕಳೆದ ಶನಿವಾರ ಎಲ್ಲರನ್ನೂ ದಕ್ಷಿಣ ಆಫ್ರಿಕಾಕ್ಕೆ ಸರ್ಕಾರವೇ ವಿಶೇಷ ವಿಮಾನದಲ್ಲಿ ಕರೆದೊಯ್ದಿದೆ.
ರೌಲ್ ಡೆ ಫ್ರೈಟಸ್ ಮತ್ತು ಒಲಿವಿಯಾ ಜೋಡಿ ಮಾಲ್ಡೀವ್ಸ್ನ ಸಿನ್ನಮೊನ್ ವೆಲಿಫುಷಿ ರೆಸಾರ್ಟ್ಗೆ ಮಾರ್ಚ್ 22ರಂದು ಆರು ದಿನಗಳ ಹನಿಮೂನ್ಗಾಗಿ ಆಗಮಿಸಿತ್ತು. ಒಂದು ವಾರದ ಹನಿಮೂನ್ ಮೂರುವಾರಕ್ಕೆ ವಿಸ್ತರಣೆಯಾದಾಗ ಒಂದೆಡೆ ಖುಷಿಯಾದರೂ, ಖರ್ಚುವೆಚ್ಚದ ಕಾರಣಕ್ಕೆ ಇಬ್ಬರೂ ಕಂಗಾಲಾಗಿದ್ದರು. ಲೈಫ್ ಟೈಮ್ಸ್ ಅನುಭವವನ್ನು ಅವರು ಈ ಹಿಂದೆ ಹಂಚಿಕೊಂಡಿದ್ದರು. ಅದರ ಪೂರ್ಣ ಓದಿಗಾಗಿ ಕೆಳಗಿನ ಲಿಂಕ್ ಗಮನಿಸಬಹುದು.