More

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಮಾಲೆ: ಕರೊನಾ ಸೋಂಕಿನ ಅಡ್ಡ ಪರಿಣಾಮ ಒಂದೇ ಎರಡೇ…!!! ಮಾಲ್ಡೀವ್ಸ್​ನ ಐಷಾರಾಮಿ ರೆಸಾರ್ಟ್​ಗೆ ಆರು ದಿನ ಹನಿಮೂನ್ ಆಚರಿಸೋಕೆ ಆಗಮಿಸಿದ ಜೋಡಿಗೆ ಭರ್ಜರಿ ಅನುಭವವೇ ಆಗಿದೆ.. 26 ದಿನ ಅದೇ ರೆಸಾರ್ಟ್​ನಲ್ಲಿ ಉಳಿಯುವಂತಾಗಿದೆ. ಅಲ್ಲಿ ಇವರನ್ನು ಬಿಟ್ಟರೆ ಬೇರಾರೂ ಅತಿಥಿಗಳಿಲ್ಲ!

    ಅವರು ದಕ್ಷಿಣ ಆಫ್ರಿಕಾದ ಪ್ರಜೆಗಳು. ಹೊಸದಾಗಿ ಮದುವೆಯಾದ ಆ ಜೋಡಿ ಹನಿಮೂನ್​ಗಾಗಿ ಆಯ್ಕೆ ಮಾಡಿಕೊಂಡದ್ದು ಮಾಲ್ಡೀವ್ಸ್ ಅನ್ನು. ಅಲ್ಲಿನ ಐಷಾರಾಮಿ ರೆಸಾರ್ಟ್​ ಒಂದರಲ್ಲಿ ಆರು ದಿನಗಳ ಹನಿಮೂನ್ ಪ್ಯಾಕೇಜ್ ಬುಕ್ ಮಾಡಿಕೊಂಡಿತ್ತು ಆ ಜೋಡಿ. ಆಕೆಯ ಹೆಸರು ಒಲಿವಿಯಾ(27). ಆತನ ಹೆಸರು ರೌಲ್​ ಡೆ ಫ್ರೈಟಸ್​(28). ಈ ನವದಂಪತಿ ಮಾಲ್ಡೀವ್ಸ್​ನ ಸಿನ್ನಮೊನ್​ ವೆಲಿಫುಷಿ ರೆಸಾರ್ಟ್​ಗೆ ಮಾರ್ಚ್​ 22ರಂದು ಆಗಮಿಸಿದ್ದರು. ಆ ವಾರದ ಕೊನೆಯಲ್ಲಿ ಅವರು ಮತ್ತೆ ದಕ್ಷಿಣ ಆಫ್ರಿಕಾ ತಲುಪಬೇಕಾಗಿತ್ತು.

    ಅವರು ಅಲ್ಲಿ ಲ್ಯಾಂಡ್​ ಆಗಿ ಒಂದೆರಡು ದಿನ ಅವರ ಮಟ್ಟಿಗೆ ಬುಧವಾರ(ಮಾ.26)ದ ತನಕ ತನಕ ಎಲ್ಲವೂ ಸರಿಯಾಗಿಯೇ ಇತ್ತು. ಈ ನಡುವೆಯೇ, ಕರೊನಾ ಸೋಂಕು ಹರಡದಂತೆ ತಡೆಯಲು ಬಹುತೇಕ ದೇಶಗಳು ಲಾಕ್​ಡೌನ್ ಘೋಷಣೆ ಮಾಡಿವೆ. ಈ ನಡುವೆ ದಕ್ಷಿಣ ಆಫ್ರಿಕಾ ಕೂಡ ಲಾಕ್​ಡೌನ್ ಘೋಷಣೆ ಮಾಡಿತು. ಅಷ್ಟೇ ಏಕೆ ಮಾಲ್ಡೀವ್ಸ್​ನಲ್ಲೂ ಲಾಕ್​ಡೌನ್ ಘೋಷಣೆಯಾಗಿ ಬಿಡ್ತು.

    ದಕ್ಷಿಣಾ ಆಫ್ರಿಕಾದಲ್ಲಿ ಏಪ್ರಿಲ್ 16ರ ತನಕ ಲಾಕ್​ಡೌನ್ ಮುಂದುವರಿಯಲಿದ್ದು, ಅಲ್ಲಿ ತನಕ ಇವರು ಮಾಲ್ಡೀವ್ಸ್ ಬಿಡುವಂತಿಲ್ಲ. ಮಾರ್ಚ್​ 26ರಂದು ಇವರ ಕೈಗೊಂದು ನೋಟಿಸ್ ರಾಯಭಾರ ಕಚೇರಿಯಿಂದ ತಲುಪುತ್ತದೆ. ಗುರುವಾರ ಮಧ್ಯರಾತ್ರಿಯಿಂದ ದಕ್ಷಿಣ ಆಫ್ರಿಕಾದ ವಿಮಾನ ನಿಲ್ದಾಣಗಳು ಬಂದ್ ಆಗಿರಲಿವೆ. ಮಾಲ್ಡೀವ್ಸ್​ನಿಂದ ಅಂದು ಹೊರಟರೂ ಅವರು ಗುರುವಾರ ಮಧ್ಯರಾತ್ರಿಯೊಳಗೆ ತವರು ದೇಶ ತಲುಪುವುದು ಅಸಾಧ್ಯದ ಮಾತಾಗಿತ್ತು. ಹಾಗೆ ವಿಧಿಯಿಲ್ಲದೇ ಅಥವಾ ವಿಧಿಯ ಆಟಕ್ಕೆ ಸಿಲುಕಿತು ಈ ಜೋಡಿ!

    ಈ ಹನಿಮೂನ್ ಅವಧಿಯನ್ನು ಅನುಭವಿಸಬೇಕೋ ಅಥವಾ ಆತಂಕದಲ್ಲಿ ದಿನದೂಡಬೇಕೋ ಎಂಬ ಗೊಂದಲದಲ್ಲೇ ಬದುಕು ಸಾಗಿದೆ. ಈ ನಡುವೆ, ಸಂಕಷ್ಟದ ಸಮಯವಾದ್ದರಿಂದ ಈ ದಂಪತಿಗೆ ಪ್ರತಿ ರಾತ್ರಿಯ ಬಾಡಿಗೆ ದರದಲ್ಲಿ 750 ಡಾಲರ್​ ರಿಯಾಯಿತಿ ಲಭಿಸಿದೆ. ಆದಾಗ್ಯೂ, ಉಳಿತಾಯದ ಹಣ ನೀರಿನಂತೆ ಖರ್ಚಾಗುತ್ತಿದೆ ಎಂಬ ಆತಂಕ ಚಿಂತೆ ಅವರನ್ನು ಕಾಡಿದೆ. ಇವೆಲ್ಲದರ ನಡುವೆ, ಆ ರೆಸಾರ್ಟ್ ಬಿಟ್ಟು ಹೊರಹೋಗುವಂತಿಲ್ಲ, ಹೋದರೆ ವಾಪಸ್ ಅಲ್ಲಿಗೆ ತಲುಪುವಂತಿಲ್ಲ ಎನ್ನುವ ಸ್ಥಿತಿ.

    ಸದ್ಯ ಸ್ವಲ್ಪ ಹೊತ್ತು ಬೋಟಿಂಗ್​ ಮಾಡಿ, ನಂತರ ರೆಸಾರ್ಟ್​ನಲ್ಲಿ ಅಡ್ಡಾಡುತ್ತ ಕಾಲ ಕಳೆಯುತ್ತಿದೆ ಈ ಜೋಡಿ. ಲಾಕ್​ಡೌನ್ ಹಿಂತೆಗೆಯಲ್ಪಟ್ಟರೆ ಒಮ್ಮೆ ಊರು ತಲುಪಿಬಿಡುವ ಧಾವಂತ ಅವರ ಕಂಗಳಲ್ಲಿವೆ. (ಏಜೆನ್ಸೀಸ್)

    ಹುಲಿಯೂ ಕೆಮ್ಮೋಕೆ ಶುರುಮಾಡ್ತು – ಪ್ರಾಣಿಗಳಿಗೂ ಸೋಂಕು ಹರಡಿದ್ದಾರು ಎಂದು ತಿಳಿದ್ರೆ ನಿಮಗೆ ಆಗತ್ತೆ ಗ್ಯಾರೆಂಟಿ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts