

ಬೀಜಿಂಗ್: ಕರೊನಾ ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿದೆ. ಯಾರು ಕೆಮ್ಮಿದ್ರೂ, ಸೀನಿದ್ರೂ ಸಂದೇಹದಿಂದಲೇ ನೋಡ್ತಾರೆ. ಅಂಥದ್ದರಲ್ಲಿ ಆಕೆ ಕೆಮ್ಮುತ್ತಲೇ ಇದ್ಳು- ಇದಕ್ಕೊಂದು ಪರಿಹಾರ ಕಾಣಬೇಕು ಎಂದು ಆಸ್ಪತ್ರೆಗೆ ದಾಖಲಾದರೆ ಎಲ್ಲರಿಗೂ ಶಾಕ್!
ಇದು ಚೀನಾದಲ್ಲಿ ನಡೆದ ಘಟನೆ. ಆಕೆಗೆ 22 ವರ್ಷ ವಯಸ್ಸು. ಡಾಕ್ಟರ್ ಎದುರು ಆಕೆ ಕೆಮ್ಮಿನ ಕಥೆಯನ್ನು ಅನಾವರಣಗೊಳಿಸಿದಳು. ಆ ಕೆಮ್ಮಿಗೆ 14 ವರ್ಷಗಳ ಇತಿಹಾಸ. ಹಾಗಾಗಿ ಕರೊನಾ ಅಲ್ಲ ಎಂಬುದು ಖಾತರಿ ಆಯಿತು.
ಕೊನೆಗೆ ತೀರಾ ಇತ್ತೀಚೆಗೆ ಹೈಪರ್ಹಿಡ್ರೋಸಿಸ್ ಆಪರೇಷನ್ ಮಾಡಿಸಬೇಕು ಎಂಬ ನಿರ್ಧಾರಕ್ಕೆ ಆಕೆ ಬಂದಿದ್ದಳು. ಡಾಕ್ಟರ್ಗಳು ಇದಕ್ಕಾಗಿ ಕೆಲವು ಟೆಸ್ಟ್ಗಳನ್ನು ಮಾಡಲು ಮುಂದಾಗಿದ್ದರು. ಉಸಿರಾಟದ ಸಮಸ್ಯೆ ಗಮನಿಸಿದ ಗುವಾಂಗ್ಝೂ ಯೂನಿವರ್ಸಿಟಿಯ ಕಾರ್ಡಿಯೋಥೊರಾಸಿಕ್ ಸರ್ಜರಿ ವಿಭಾಗದ ಡೆಪ್ಯುಟಿ ಚೀಫ್ ವಾಂಗ್ ಜಿಯೋಂಗ್ ಅವರು ಆಕೆಯ ಸಿಟಿ ಸ್ಕ್ಯಾನ್ ಮಾಡಿಸಲು ಶಿಫಾರಸು ಮಾಡಿದರು.
ಆ ನಿಗೂಢ ವಸ್ತುವನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆಯನ್ನೂ ಪೂರೈಸಿದರು. ಆ ವಸ್ತುವನ್ನು ಹೊರತೆಗೆದು ಶುಚಿಗೊಳಿಸಿದ ಬಳಿಕ ಅದೇನು ಎಂಬುದನ್ನು ಪರಿಶೀಲಿಸಲಾಯಿತು. ಕೊನೆಗೆ ಅದು ಚಿಕನ್ ಬೋನ್ ಎಂಬುದು ದೃಢವಾಯಿತು. ಎರಡು ಸೆಂಟಿ ಮೀಟರ್ ಇದ್ದ ಇತ್ತದು. ಬಾಲ್ಯದಲ್ಲಿ ಅಕಸ್ಮಾತ್ ಆಗಿ ಆ ಚಿಕನ್ ಬೋನ್ ಪೀಸ್ ಶ್ವಾಸಕೋಶಕ್ಕೆ ಹೋಗಿತ್ತು. ಅದುವೇ ಕೆಮ್ಮಿಗೆ ಕಾರಣವಾಯಿತು ಎಂಬುದನ್ನು ಅರಿತು ಆ ಯುವತಿಯೂ ಸೇರಿ ಎಲ್ಲರಿಗೂ ಶಾಕ್!.