ಪ್ರಯಾಣ ನಿರ್ಬಂಧ ಸಡಿಲಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ- ಡಬ್ಲ್ಯುಎಚ್​ಒ ಪರಿಣತರ ಎಚ್ಚರಿಕೆ

WHO
Published on

ಜಿನೇವಾ: ಕರೊನಾ ವೈರಸ್ COVID19 ಸೋಂಕಿನ ಪ್ರಮಾಣ ಇಳಿಮುಖವಾಗಿದೆ ಎಂದು ತಪ್ಪಾಗಿ ಭಾವಿಸಿಕೊಂಡು ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಬೇಡಿ. ಇಂತಹ ತಪ್ಪು ಮಾಡಿದರೆ ಭಾರಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರು ಎಚ್ಚರಿಸಿದ್ದಾರೆ.

ಡಬ್ಲ್ಯುಎಚ್​ಒದ ತುರ್ತುಪರಿಸ್ಥಿತಿ ನಿರ್ವಹಿಸುವ ತಜ್ಞ ಡಾ.ಮೈಕ್ ರಿಯಾನ್​ ಈ ಬಗ್ಗೆ ಮಾತನಾಡಿದ್ದು, ಇಷ್ಟು ಬೇಗ ಪ್ರಯಾಣ ನಿರ್ಬಂಧ ಸಡಿಲಿಸಬಾರದು. ಅದರಲ್ಲೂ ಜಾಗತಿಕ ಪ್ರಯಾಣ ನಿರ್ಬಂಧ ಸಡಿಲಿಸಲು ಇದು ಸಕಾಲವಲ್ಲ. ಈ ಸಂದರ್ಭದಲ್ಲಿ ನಮಗೆ ಜಾಗರೂಕತೆಯ ರಿಸ್ಕ್ ಮ್ಯಾನೇಜ್​ಮೆಂಟ್ ಅನಿವಾರ್ಯ ಎಂದರು.

ಆಫ್ರಿಕಾದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಸೊಮಾಲಿಯದಲ್ಲಿ ಕಳೆದ ವಾರ ಶೇಕಡ 300ರ ದರದಲ್ಲಿ ಸೋಂಕು ಕಳೆದವಾರ ವ್ಯಾಪಿಸಿದೆ. ಆಫ್ರಿಕಾದಲ್ಲಿ ಸೋಂಕು ತೀವ್ರತೆ ಪಡೆದುಕೊಂಡಿದೆ. ಸೋಂಕಿನ ತೀವ್ರತೆ ಆರಂಭ ಆಫ್ರಿಕಾದಲ್ಲಾಗಿದೆ ಎಂದು ರಿಯಾನ್ ವ್ಯಾಖ್ಯಾನಿಸಿದ್ದಾರೆ.

ಸೋಂಕು ತಡೆಯುವ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನವನ್ನು ಎಲ್ಲ ರಾಷ್ಟ್ರಗಳೂ ಮಾಡಬೇಕು. ಈಗಿರುವ ಸನ್ನದ್ಧತೆ ಸಾಲದು. ಕೇವಲ ಶೇಕಡ 76ರ ಪ್ರಮಾಣದಲ್ಲಿ ನಿಗಾ ವ್ಯವಸ್ಥೆ ಮತ್ತು ಕೇಸ್ ಪತ್ತೆ ಹಚ್ಚುವ ಕೆಲಸ ನಡೆದಿದೆ. ಇನ್ನೂ ಸಾಕಷ್ಟು ಅಂತರವಿದೆ. ಯಾವುದೇ ರಾಷ್ಟ್ರವೂ ಈ ಸೋಂಕು ಬಾಧೆಯಿಂದ ಹೊರತಾಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ರಿಯಾನ್​ ವಿವರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net