More

    ಲಾಕ್​ಡೌನ್ ಅವಧಿಯಲ್ಲಿ ನಿಗೂಢತೆ ಸೃಷ್ಟಿಸಿದ ದಂಪತಿ: ಇದು ಅವರ ಬೆಡ್​ ರೂಮ್​ ರಹಸ್ಯ!

    ಮಿನ್ನೆಸೊಟಾ: ಬೆಡ್​ ರೂಮ್​ ರಹಸ್ಯ ಎಂದ ಕೂಡಲೇ ರಸಿಕರ ಇಂದ್ರಿಯಗಳೆಲ್ಲವೂ ಚುರುಕಾಗಿ ಬಿಡುತ್ತವೆ. ಏನಿರಬಹುದೆಂಬ ಸಹಜ ಕುತೂಹಲ. ಈ ದಂಪತಿಯ ಬೆಡ್​ರೂಂ ರಹಸ್ಯ ಈಗ ಜಗತ್ತಿನ ಮನೆಮಾತು. ಅಂಥದ್ದೇನು ಅಂತೀರಾ – ಅದು ಒಂದು ಮರ್ಡರ್ ಮಿಸ್ಟ್ರಿಯಷ್ಟೇ ನಿಗೂಢವಾದುದು!

    ಮಿನ್ನೆಸೊಟಾದ ಈ ದಂಪತಿ ಹೆಸರು ಕ್ಯಾರ್ರೀ ಮತ್ತು ಕೈಲೆ ಡೊರ್​. ಇಬ್ಬರೂ ಬಹಳ ಕ್ರಿಯೇಟಿವ್​. ಫೇಸ್​ಬುಕ್​ನಲ್ಲಿ ಒಂದು ಖಾಸಗಿ ಗ್ರೂಪ್ ಇದೆ. ಅದರ ಹೆಸರು diyonabudgetofficial. ಅಲ್ಲಿ ಅವರು ಈ ಬೆಡ್​ ರೂಮ್ ರಹಸ್ಯ ಬಹಿರಂಗಪಡಿಸಿದ್ದಾರೆ. ನೀವೂ ಈ ರಹಸ್ಯವನ್ನು ಇಂಪ್ಲಿಮೆಂಟ್ ಮಾಡಿ ಕಾಪಾಡಿ ಅಂತಾನೂ ಹೇಳಿದ್ದಾರೆ. ಲಾಕ್​ಡೌನ್ ಪ್ರಾಜೆಕ್ಟ್​ ಆಗಿ ಇದನ್ನು ಅವರು ಕೈಗೆತ್ತಿಕೊಂಡು ಪೂರ್ಣಗೊಳಿಸಿದ್ದಾರೆ. ಮನೆಗೆ ಬಂದ ಅತಿಥಿಗಳ ಕಂಗಳು ಸಹಜವಾಗಿಯೇ ಬೆಡ್​ರೂಮ್ ಕಡೆಗೆ ಹೋಗುತ್ತದೆ. ಆದರೆ ಈ ದಂಪತಿಯ ಮನೆಯಲ್ಲಿ ಎಲ್ಲಿ ಜಾಲಾಡಿದರೂ ಒಂದೇ ನೋಟಕ್ಕೆ ಬೆಡ್​ ರೂಮ್ ಕಾಣಲ್ಲ. ಇದುವೇ ರಹಸ್ಯ!

    ಬೆಡ್​ ರೂಮ್ ರಹಸ್ಯ ಇರುವುದೆಲ್ಲಿ ಅಂದರೆ ಅದರ ಡೋರ್​ನಲ್ಲಿ!. ಹೌದು, ಅವರು ಲಾಕ್​ಡೌನ್ ಪ್ರಾಜೆಕ್ಟ್​ನಲ್ಲಿ ಕೈಗೆತ್ತಿಕೊಂಡದ್ದು ಬೆಡ್​ರೂಮ್ ಡೋರ್ ಮರೆಮಾಚುವ ಕೆಲಸ. ಅದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಜಗತ್ತಿನ ಗಮನವನ್ನೂ ಸೆಳೆದಿದ್ದಾರೆ.

    ಅವರ ಮನೆಯೊಳಗೆ ಗಮನಸೆಳಯುವ ಬುಕ್ ಶೆಲ್ಫ್​ ಒಂದು ಇದೆ. ಅದುವೇ ಬೆಡ್​ರೂಮ್​ಗೆ ರಹಸ್ಯ ಡೋರ್​. ಮನೆಗೆ ಬಂದ ಅತಿಥಿಗಳಿಗೆ ಇರುವ ಬೆಡ್​ರೂಮ್ ಅದು. ಈ ಡೋರ್ ಓಪನ್ ಮಾಡಬೇಕಾದರೆ ಒಂದು ಪುಸ್ತಕವನ್ನು ಹೊರತೆಗೆಯಬೇಕು. ಆಗಷ್ಟೇ ಡೋರ್​ ಲಾಕ್ ಕಾಣಿಸುತ್ತದೆ. ಬೆಡ್​ ರೂಮ್​ ಡೋರ್ ಅನ್ನು ಈ ರೀತಿ ಮರುವಿನ್ಯಾಸಗೊಳಿಸಿದ್ದು ಸಾಮಾಜಿಕ ತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಕಾರಣವಾಗಿದೆ. (ಏಜೆನ್ಸೀಸ್​)

    ಆ 22ರ ಯುವತಿ ಕೆಮ್ಮುತ್ತಲೇ ಇದ್ಳು- ಆಸ್ಪತ್ರೆಗೆ ದಾಖಲಾದರೆ ಕೆಮ್ಮಿನ ಇತಿಹಾಸ ಕೇಳಿ, ಕಾರಣ ನೋಡಿ ಅಲ್ಲಿದ್ದವರಿಗೆಲ್ಲ ಶಾಕ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts