ವ್ಯಾಟಿಕನ್​ ಸಿಟಿಯಲ್ಲಿ ಕ್ರೈಸ್ತ ಧರ್ಮಗುರು ಪೋಪ್​ ಫ್ರಾನ್ಸಿಸ್​ರನ್ನ ಭೇಟಿಯಾದ ನರೇಂದ್ರ ಮೋದಿ

New Project (13)
Published on

ವ್ಯಾಟಿಕನ್​ ಸಿಟಿ(ಇಟಲಿ): ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲೆಂದು ಇಟಲಿ​ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವ್ಯಾಟಿಕನ್​ ನಗರದಲ್ಲಿ ಕ್ರೈಸ್ತ ಧರ್ಮದ ಪರಮೋಚ್ಛ ಗುರು ಪೋಪ್​ ಫ್ರಾನ್ಸಿಸ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಕ್ಯಾಥೋಲಿಕ್​ ಚರ್ಚ್​ನ ಮುಖ್ಯಸ್ಥರಾಗಿರುವ ಪೋಪ್​ ಫ್ರಾನ್ಸಿಸ್​ ಅವರನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿದ್ದು ಇದೇ ಮೊದಲು. ಜಗತ್ತಿನಲ್ಲಿ ಶಾಂತಿ ಮತ್ತು ನೆಮ್ಮದಿ, ಬಡತನ ನಿರ್ಮೂಲನೆ, ಉತ್ತಮ ಜೀವನ ನಿರ್ವಹಣೆ ಕುರಿತು ಪೋಪ್​ ಫ್ರಾನ್ಸಿಸ್ ಮತ್ತು ನರೇಂದ್ರ ಮೋದಿ ಇಬ್ಬರೂ ಸುಮಾರು 1 ತಾಸು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಪೋಪ್​ ಫ್ರಾನ್ಸಿಸ್ ಅವರ ಭೇಟಿ ಬಳಿಕ ಫೋಟೋಗಳನ್ನು ಟ್ವಿಟರ್​ ಹಂಚಿಕೊಂಡಿರುವ ನರೇಂದ್ರ ಮೋದಿ, ಪೋಪ್​ ಫ್ರಾನ್ಸಿಸ್​ ಅವರ ಭೇಟಿ ಅತ್ಯಂತ ಆತ್ಮೀಯವಾಗಿತ್ತು. ಅವರೊಂದಿಗೆ ಕೆಲವು ಮಹತ್ತರ ವಿಚಾರಗಳನ್ನ ಚರ್ಚಿಸಲು ಅವಕಾಶ ಸಿಕ್ಕಿತು. ಅವರನ್ನು ಭಾರತಕ್ಕೆ ಆಹ್ವಾನಿಸಲಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

ರೋಮ್​ನಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರವೇ ಇಟಲಿಗೆ ತೆರಳಿದ್ದಾರೆ. ಪ್ರಧಾನಿ ಜತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ಡೊಭಾಲ್​ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್​ ನಿಯೋಗ ಇದೆ.

ರೋಮ್​ನ ಕ್ಯಾಥೋಲಿಕ್​ ಚರ್ಚ್​​ನ ಪ್ರಧಾನ ಕಚೇರಿ ವ್ಯಾಟಿಕನ್​ ಸಿಟಿಯಲ್ಲಿದೆ. ಈ ಸಿಟಿ ರೋಮ್​ನಿಂದ ಸುತ್ತುವರಿಯಲ್ಪಟ್ಟ ರಾಜಧಾನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net