More

    ಹೆಸರು ಬದಲಾಯಿಸಿದ್ರೂ ವಿಧಿಯಾಟ ಬೇರೆಯೇ ಇತ್ತು, ಪುನೀತ್ ಅಲ್ಪಾವಧಿಗೆ ಹೋಗ್ಬಿಟ್ರು..!

    ಬೆಂಗಳೂರು: ಸದಾ ನಗುಮುಖದ, ಸರಳ ವ್ಯಕ್ತಿತ್ವದ, ಪ್ರತಿಭಾವಂತ ನಟ, ಡೊಡ್ಮನೆಯ ಕುಡಿ, ಅಸಂಖ್ಯಾತ ಅಭಿಮಾನಿಗಳ ಮನದ ರಾಜಕುಮಾರ, ಸ್ಯಾಂಡಲ್​ವುಡ್​ನ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅತೀ ಚಿಕ್ಕ ವಯಸ್ಸಿನಲ್ಲೇ ಅಕಾಲಿಕ ಮರಣಕ್ಕೀಡಾಗಿದ್ದು, ಕರುನಾಡೇ ಕಣ್ಣೀರ ಕಡಲಲ್ಲಿ ಮುಳುಗಿದೆ. ಕೋಟ್ಯಂತರ ಅಭಿಮಾನಿಗಳು ದೇವರ ಜತೆಗೆ ವಿಧಿಯನ್ನೂ ಶಪಿಸುತ್ತಿದ್ದಾರೆ. ಪುನೀತನಾಗಿರಬೇಕಿದ್ದ ಅಪ್ಪುಗೆ ಅಲ್ಪಾಯುಷ್ಯ ಕೊಟ್ಟಿದ್ದೇಕೆ? ಎಂದು ಲೆಕ್ಕವಿಲ್ಲದಷ್ಟು ಮಂದಿ ದೇವರನ್ನ ಪ್ರಶ್ನಿಸುತ್ತಲೇ ಇದ್ದಾರೆ. ಅತ್ತ ಅಪ್ಪುವಿನ ಮೊದಲ ಹೆಸರನ್ನ ಬದಲಾಯಿಸಿದ್ರು ವಿಧಿಯಾಟ ಬೇರೆನೆ ಇತ್ತು, ಪುನೀತ್ ಅಲ್ಪಾವಧಿಗೆ ಹೋಗ್ಬಿಟ್ಟಾ… ಎಂದು ಕುಮಾರ್​ ಬಂಗಾರಪ್ಪ ಕಣ್ಣೀರಿಟ್ಟಿದ್ದಾರೆ.

    ಕಂಠೀರವ ಸ್ಟೇಡಿಯಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್​ ಬಂಗಾರಪ್ಪ, ದೇವರು ಕಾಣದ ಕೈಯಲ್ಲಿ ಕೂತು ಆಟವಾಡಿಸ್ತಾನೆ. ಈ ದುಃಖವನ್ನು ಸಹಿಸಲಾಗ್ತಿಲ್ಲ. ಅಭಿಮಾನಿ ದೇವರುಗಳು, ಕುಟುಂಬಸ್ಥರು ಸೇರಿದಂತೆ ಎಲ್ಲರಿಗೂ ಅಪ್ಪು ಅಗಲಿಕೆಯ ನೋವು ಒಂದೇ ತೂಕದಲ್ಲಿದೆ. ಯಾಕಂದ್ರೆ ಅಪ್ಪು ರಾಜ್ಯದ ಪ್ರತಿ ಮನೆಯ ಸದಸ್ಯರಾಗಿದ್ದರು. ಅಪ್ಪು ಸಣ್ಣ ವಯಸ್ಸಲ್ಲೇ ಬಹಳ ಸಾಧನೆ ಮಾಡಿದ್ರು. ಸಣ್ಣ ಮಗು ಇದ್ದಾಗಲೇ ಅಪ್ಪುಗೆ ಕಲಾ ದೇವತೆ ಮತ್ತು ರಾಜ್​ಕುಮಾರ್​ರ ಆಶೀರ್ವಾದ ಇತ್ತು. ಶ್ರದ್ಧೆ, ನಡವಳಿಕೆ, ಸರಳತೆ, ಹಾಡುಗಾರಿಕೆ, ನಟನೆ, ಚಲನಚಿತ್ರರಂಗದ ಎಲ್ಲರೊಂದಿಗೂ ಅವರು ನಡೆದುಕೊಳ್ಳುತ್ತಿದ್ದ ರೀತಿ… ಹೀಗೆ ಎಲ್ಲವನ್ನೂ ನೋಡಿದಾಗ ಅಪ್ಪು ಪುನೀತನಾಗಿರಬೇಕಿತ್ತು. ಹರಿಶ್ಚಂದ್ರ ಸಿನಿಮಾದಲ್ಲಿ ಲೋಹಿತ್​ ಹೆಸರಿತ್ತು. ಅದು ಅಲ್ಪಾಯುಷಿ ಹೆಸ್ರು ಇದನ್ನ ಇಡಬಾರದು ಅಂತಿತ್ತು. ಯಾರೋ ಒಬ್ರು ಹಿರಿಯರು ಹೇಳಿದ್ರು ಅಂತೇಳಿ ಪಾರ್ವತಮ್ಮ ರಾಜ್​ಕುಮಾರ್​ ಮತ್ತು ಡಾ.ರಾಜ್​ಕುಮಾರ್​ ಇಬ್ಬರೂ ಅಪ್ಪುಗೆ ಇದ್ದ ಲೋಹಿತ್​ ಎಂಬ ಹೆಸರನ್ನ ಬದಲಿಸಿ ಪುನೀತ್​ ಎಂದು ಇಟ್ಟಿದ್ದರು. ಮಗ ಪುನೀತನಾಗಿರಬೇಕು ಎಂದೇ ಬಯಸಿದ್ದರು. ಆದ್ರೆ ವಿಧಿಯಾಟ ಬೇರೆಯೇ ಇತ್ತು. ಇದು ಬಹಳ ಅತ್ಯಂತ ನೋವಿನ ಸಂಗತಿ ಎಂದು ಭಾವುಕರಾದರು.

    ಲೋಹಿತ್​ನಿಂದ ಪುನೀತ್​ವರೆಗೆ: ಪುನೀತ್​ಗಗೆ ಮನೆಯಲ್ಲಿ ಇಟ್ಟ ಹೆಸರು ಲೋಹಿತ್​. ಈ ಹೆಸರಿನಿಂದಲೇ ಅವರು ಹಲವು ಚಿತ್ರಗಳಲ್ಲಿ ನಟಿಸಿದರು. 1985ರಲ್ಲಿ ಬಿಡುಗಡೆಯಾದ ‘ಬೆಟ್ಟದ ಹೂವು’ ಚಿತ್ರದ ಹೊತ್ತಿಗೆ, ಲೋಹಿತ್​ ಹೆಸರು ಪುನೀತ್​ ಎಂದು ಬದಲಾಗಿತ್ತು. ಈ ಚಿತ್ರದಲ್ಲಿ ಮೊದಲ ಬಾರಿಗೆ ಟೈಟಲ್​ ಕಾರ್ಡ್​ನಲ್ಲಿ ಪುನೀತ್​ ಎಂದು ತೋರಿಸಲಾಗಿತ್ತು. ಅಲ್ಲಿಂದ ಲೋಹಿತ್​ ಅವರನ್ನು ಪುನೀತ್​ ಎಂದೇ ಗುರುತಿಸಲಾಗಿದೆ.

    ಮಂತ್ರಾಲಯದಲ್ಲಿ ಪುನೀತ್​ ಮಾತನಾಡುತ್ತಿರುವಾಗಲೇ ಅಲುಗಾಡಿದ್ದ ವೀಣೆ: ಸ್ಪಷ್ಟನೆ ನೀಡಿದ ಸುಭುದೇಂದ್ರ ಶ್ರೀಗಳು

    ಸಾವಿಗೂ ಮುನ್ನಾ ಪುನೀತ್ ಕರೆ ಮಾಡಿದ್ದು ಯಾರಿಗೆ? ಅದೆಲ್ಲವೂ ಕೊನೆಯಾಗಿಯೇ ಉಳಿಯಿತಲ್ಲ…

    ‘ಅಪ್ಪು’ಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಯುವಕ ಆತ್ಮಹತ್ಯೆ: ಅಭಿಮಾನಿಗಳೇ ದಯವಿಟ್ಟು ದುಡುಕಬೇಡಿ…

    ಇದೆಂಥಾ ದುರ್ವಿಧಿ: ಅಪ್ಪು ವ್ಯಕ್ತಿತ್ವ ಸಾರುವ ಈ ಹಾಡಿನ ಸಾಲು ಅವರ ಅಕಾಲಿಕ ಮರಣವನ್ನೂ ನಿಜವಾಗಿಸಿ ಬಿಡ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts