ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನಿಗೆ ಆಸರೆಯಾದ ಹುಲ್ಲು! ತಪ್ಪಿತು ದುರಂತ

suicide try
Published on

ಶಿವಮೊಗ್ಗ: ನೀರಿಗೆ ಬಿದ್ದವನಿಗೆ ಹುಲ್ಲು ಕಡ್ಡಿ ಆಸರೆ ಸಿಕ್ಕರೂ ಬದುಕುತ್ತಾನೆ ಎಂಬ ಮಾತಿದೆ. ಶಿವಮೊಗ್ಗದಲ್ಲಿ ಭಾನುವಾರ ಈ ಮಾತು ಅಕ್ಷರಶಃ ನಿಜವಾಗಿದೆ. ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನಿಗೆ ಹುಲ್ಲು ಆಸರೆಯಾಗಿ ಜೀವ ಉಳಿಸಿದೆ.

ತುಂಗಾನಗರದ ತನ್ವೀರ್ ಆತ್ಮಹತ್ಯೆಗೆ ಯತ್ನಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸೋಮವಾರ ಮಧ್ಯಾಹ್ನ ತುಂಗಾ ನದಿ ಸೇತುವೆ ಮೇಲಿಂದ ತನ್ವೀರ್ ನದಿಗೆ ಹಾರಿದ್ದ. ಸ್ಥಳದಲ್ಲಿದ್ದ ಸಾರ್ವಜನಿಕರು ತಡೆಯಲು ಯತ್ನಿಸಿದರೂ ಪ್ರಯೋಜನ ಆಗಲಿಲ್ಲ. ಅಷ್ಟರೊಳಗೆ ಸೇತುವೆ ಮೇಲಿಂದ ಹಾರಿದ್ದ ಯುವಕನಿಗೆ ನದಿಯಲ್ಲಿ ಬೆಳೆದಿದ್ದ ಹುಲ್ಲಿನ ಪೊದೆ ಆಸರೆಯಾಗಿದೆ.

ಪೊದೆಯಲ್ಲಿ ಸಿಕ್ಕಿಹಾಕಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಫೋನಾಯಿಸಿದ್ದರು. ಸ್ಥಳಕ್ಕಾಗಮಿಸಿದ ಠಾಣಾ ಅಧಿಕಾರಿ ಪ್ರವೀಣ್‌ಕುಮಾರ್ ನೇತೃತ್ವದ ತಂಡ ನದಿಗೆ ಇಳಿದು ತನ್ವೀರ್‌ನನ್ನು ರಕ್ಷಣೆ ಮಾಡಿದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಯುವಕ, ಆತ್ಮಹತ್ಯೆಗೆ ಯತ್ನಿಸಿದ್ದನ್ನು ಮರೆಮಾಚಿ ಕಾಲು ಜಾರಿ ಬಿದ್ದಿದ್ದಾಗಿ ತಿಳಿಸಿದ್ದಾನೆ. ಕೋಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net