ಥೂ, ಇವನೆಂಥಾ ಕಾಮುಕ? ಯುವಕನ ಮೇಲೇ ರೇಪ್​!

rape case
Published on

ಚಿಕ್ಕೋಡಿ: ವೃದ್ಧೆ, ಮಹಿಳೆ, ಮಕ್ಕಳು, ಹಸುಗೂಸನ್ನೂ ಬಿಡದ ಕಾಮುಕಕರು ಯುವಕರ ಮೇಲೂ ಅತ್ಯಾಚಾರವೆಸಗುತ್ತಿದ್ದಾರೆ. ಯುವಕರೇ ಎಚ್ಚರ! ಕಂಡಕಂಡವರ ಜತೆ ಹೋಗುವ ಮುನ್ನ ಜೋಕೆ...

ಬೆಳಗಾವಿ ಜಿಲ್ಲೆಯ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬ ಮತ್ತೊಬ್ಬ ಯುವಕನ ಮೇಲೆ ರೇಪ್ ಮಾಡಿದ ವಿಲಕ್ಷಣ ಘಟನೆ ನಡೆದಿದೆ. ಬಸ್​ಗಾಗಿ ಕಾಯುತ್ತಿದ್ದ ಯುವಕನಿಗೆ ಡ್ರಾಪ್​ ಕೊಡುವ ನೆಪದಲ್ಲಿ ಬೈಕ್ ಮೇಲೆ ಹತ್ತಿಸಿಕೊಂಡ ಕಾಮುಕನೊಬ್ಬ ಮಾರ್ಗಮಧ್ಯೆ ನಿರ್ಜನ ಪ್ರದೇಶದಲ್ಲಿ ಬಲವಂತವಾಗಿ ಅನೈಸರ್ಗಿಕ ಸಂಭೋಗ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ.

ನೊಂದ ಯುವಕ ಅಥಣಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಅತ್ಯಾಚಾರಿ ಆರೋಪಿ ರಾಜು ನೀಲವ್ವ ಆಚಾರಟ್ಟಿ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net