

ಚಿಕ್ಕಬಳ್ಳಾಪುರ: ಈತನ ಹೆಸರು ರಹೀಂ ಪಾಷ ಅಲಿಯಾಸ್ ಬಾಬು. ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದ ಗಂಗಮ್ಮನ ದೇವಸ್ಥಾನದ ಬಳಿ ಚೌಡೇಶ್ವರಿ ದೇವಿ ಫೋಟೋ ಇಟ್ಟುಕೊಂಡು ಮಾಟ-ಮಂತ್ರದ ಮೂಲಕ ಜನರ ಕಷ್ಟ ಬಗೆಹರಿಸುವ ಸೋಗಿನಲ್ಲಿ ಓಡಾಡಿಕೊಂಡಿದ್ದ. ಇದಿಷ್ಟು ಈತನ ಒಂದು ಮುಖ. ಇದೀಗ ಮಹಿಳೆಯೊಬ್ಬರು ಈತನ ಅಸಲಿ ಮುಖ ಬಯಲು ಮಾಡಿದ್ದು, ಆಕೆಯ ಪ್ರತಿ ಹೇಳಿಕೆಯೂ ಬೆಚ್ಚಿಬೀಳಿಸುತ್ತೆ.
ನನ್ನ ಮನೆಯಲ್ಲಿ ಹಲವು ಸಮಸ್ಯೆ ಎದುರಾಗಿತ್ತು. ದೇವಸ್ಥಾನಕ್ಕೆ ಹೋದಾಗ ರಹೀಂ ಎಂಬಾತನ ಪರಿಚಯವಾಗಿ, ಈತ ತನ್ನ ಮೈಮೇಲೆ ಗಂಗಮ್ಮ ತಾಯಿ ಬರುತ್ತಾಳೆ. ಜನರ ಕಷ್ಟಕಾರ್ಪಣ್ಯ ನಿವಾರಿಸುತ್ತೇನೆ ಎಂದಿದ್ದ. ನಾನು ಇದನ್ನು ನಂಬಿಬಿಟ್ಟೆ. ನನ್ನನ್ನು ವಶೀಕರಣ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಂಡ, ಹಲವೆಡೆ ಸುತ್ತಾಡಿಸಿದ, ಅಶ್ಲೀಲ ದೃಶ್ಯವನ್ನ ಮೊಬೈಲ್ನಲ್ಲಿ ಸೆರೆ ಹಿಡಿದ. ನನ್ನ ಬದುಕೇ ನಾಶವಾಯ್ತು... ಎಂದು ಸಂತ್ರಸ್ತ ಮಹಿಳೆಯೊಬ್ಬರು ನಕಲಿ ಮಂತ್ರವಾದಿ ಮಾಡಿಕೊಂಡಿದ್ದ ಅಶ್ಲೀಲ ವಿಡಿಯೋ ಸಮೇತ ಮಹಿಳಾ ಸಾಂತ್ವನ ಕೇಂದ್ರಕ್ಕೆ ಹೋಗಿ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿರಿ ತವರಿನಲ್ಲೇ ಕದ್ದುಮುಚ್ಚಿ ಪ್ರಿಯಕರನ ಸೇರುತ್ತಿದ್ದ ನವವಿವಾಹಿತೆ! ಮದ್ವೆಯಾದ ಒಂದೇ ತಿಂಗಳಲ್ಲಿ ಇಬ್ಬರ ಸಾವು
ನಕಲಿ ಮಂತ್ರವಾದಿಯ ಕಾಮಕಾಂಡದ ವಿಡಿಯೋ ತುಣುಕುಗಳು ಸಂತ್ರಸ್ತೆ ಬಳಿ ಇದ್ದು, ಈಗಾಗಲೇ ಎಂಟಕ್ಕೂ ಹೆಚ್ಚು ಮಹಿಳೆಯರಿಗೆ ತಾಳಿ ಕಟ್ಟಿ ಅವರ ಬಳಿ ಕಾಮದಾಟ ಮುಗಿಸಿ ನಗ-ನಾಣ್ಯ ದೋಚಿದ್ದಾನೆ. ಮಹಿಳೆಯರನ್ನ ವಶೀಕರಣ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಂಡು ಅದನ್ನ ವಿಡಿಯೋ ಮಾಡಿ ವಿಕೃತ ಆನಂದ ಪಡೆಯುತ್ತಾನೆ. ಇವನ ಕಾಮದಾಟಕ್ಕೆ ಹಲವು ಮಹಿಳೆಯರು ಬೀದಿಪಾಲಾಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ.