ಪ್ರಿಯಕರನ ಜತೆಗೂಡಿ ಗಂಡನನ್ನು ಕೊಂದು ಬೆಡ್​ ರೂಂನಲ್ಲೇ ಸುಟ್ಟುಹಾಕಿದ ಪತ್ನಿ! ವಾರದ ಬಳಿಕ ಬಯಲಾಗಿದ್ದೇ ರೋಚಕ

mumbai police
Published on

ಮುಂಬೈ: ಎಂಥಹ ಕ್ರೂರಿಗಳು ಇರ್ತಾರೆ ನೋಡಿ. ಪುಟ್ಟ ಕಂದಮ್ಮನ ಕಣ್ಣೆದುರಲ್ಲೇ ಆ ಮಗುವಿನ ತಂದೆಯನ್ನ ತಾಯಿಯೇ ಕೊಂದು, ಶವವನ್ನ ಮನೆಯೊಳಗೇ ಸುಟ್ಟು ಹಾಕಿದ್ದಾಳೆ...

ಇಂತಹ ಘಟನೆ ಪಶ್ಚಿಮ ಮುಂಬೈನ ಉಪನಗರದಲ್ಲಿ ಸಂಭವಿಸಿದೆ. 28 ವರ್ಷದ ರಶೀದಾ ಶೇಖ್​ ಕೊಲೆ ಆರೋಪಿ. ರಯೀಶ್​ ಶೇಖ್​ ಎಂಬಾತನೊಂದಿಗೆ ರಶೀದಾಳ ಮದುವೆ 9 ವರ್ಷದ ಹಿಂದೆಯೇ ಆಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಆದರೂ ರಶೀದಾಗೆ ಅಮಿತ್​ ಮಿಶ್ರಾ ಎಂಬಾತನ ಜತೆ ಅನೈತಿಕ ಸಂಬಂಧ ಇತ್ತು. ಇದನ್ನೂ ಓದಿರಿ ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

ಒಂದು ವಾರದ ಹಿಂದೆ ರಶೀದಾ ತನ್ನ ಮನೆಯಲ್ಲೇ ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನು ಮಗಳ ಕಣ್ಣೆದುರಲ್ಲೇ ಕೊಲೆ ಮಾಡಿ, ಮೃತದೇಹವನ್ನು ಬೆಡ್​ರೂಂನಲ್ಲಿ ಸುಟ್ಟು ಹಾಕಿದ್ದಳು. ಕೊಲೆಯಾದ ರಯೀಶ್​ ಶೇಖ್​ ಬಟ್ಟೆ ಅಂಗಡಿಯೊಂದಲ್ಲಿ ಸೇಲ್ಸ್​ಮ್ಯಾನ್​ ಆಗಿದ್ದ. ಒಂದು ವಾರದಿಂದ ಕೆಲಸಕ್ಕೆ ಬಾರದ ಕಾರಣ ಅಂಗಡಿಯವರೂ ಹುಡುಕುತ್ತಿದ್ದರು. ಗಂಡನನ್ನು ಕೊಂದ ಮರುದಿನವೇ ಪತ್ನಿ, ತನ್ನ ಗಂಡ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಅಷ್ಟರಲ್ಲಿ ಸ್ಥಳೀಯರೂ ಅನುಮಾನಗೊಂಡು ಪೊಲೀಸರಿಗೆ ತಿಳಿಸಿದ್ದರು.

ರಶೀದ್​ನ ಮನೆಗೆ ಭೇಟಿಕೊಟ್ಟ ಪೊಲೀಸರಿಗೆ ಮನೆಯ ಕೋಣೆಯ ನೆಲದ ಟೈಲ್ಸ್​ ಕೊಲೆಯ ಸುಳಿವು ಕೊಟ್ಟಿತ್ತು. ಶವ ಸುಟ್ಟಿಹಾಕಿದ್ದರಿಂದ ಆ ಜಾಗದಲ್ಲಿ ಟೈಲ್ಸ್​ ಹಾನಿಯಾಗಿತ್ತು. ಅಷ್ಟು ಜಾಗಕ್ಕೆ ಟೈಲ್ಸ್​ ತೆಗೆದು ಹೊಸದಾಗಿ ಸಿಮೆಂಟ್​ ಹಾಕಿದ್ದು ಪೊಲೀಸರಿಗೆ ಮತ್ತಷ್ಟು ಅನುಮಾನ ಮೂಡಿಸಿತ್ತು. ಇದೇ ಜಾಡನ್ನು ಹಿಡಿದು ಹೊರಟ ಪೊಲೀಸರಿಗೆ ಬ್ಯಾಗ್​ ಪತ್ತೆಯಾಗಿದ್ದು, ಅದರಲ್ಲಿ ಶವ ಸಿಕ್ಕಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನಿಸಿದ್ದಾರೆ. ರಶೀದ್​ನ ಪತ್ನಿಯನ್ನ ಪೊಲೀಸರು ಬಂಧಿಸಿದ್ದು, ಈಕೆಯ ಪ್ರಿಯಕರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net