ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! 'ಕಾಮ'ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ

Rape-Sexual-Assault-and-Sexual-Harassment-Whats-the-Difference
Published on

ಮುಜಾಫರ್​ ನಗರ: ಪದೇಪದೆ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಯನ್ನ ಪೀಡಿಸುತ್ತಿದ್ದ ವಿಕೃತ ಕಾಮಿಯೊಬ್ಬ ಸೆಕ್ಸ್​ ವಿಚಾರಕ್ಕೆ ಅಸಮಾಧಾನಗೊಂಡು ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಬಳಿಕ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳನ್ನೂ ನಾಲೆಗೆ ಎಸೆದಿದ್ದಾನೆ.

ಇಂತಹ ಅಮಾನವೀಯ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದ ಬೇಸಿಂಡಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ಪಪ್ಪು ಕುಮಾರ್(37) ಕೊಲೆ ಆರೋಪಿ. ಈತನ ಪತ್ನಿ ಡಾಲಿ (36) ಕೊಲೆಯಾದ ದುರ್ದೈವಿ. ಈ ದಂಪತಿಗೆ ಸೋನಿಯಾ (5), ವನ್ಯ (3) ಮತ್ತು 15 ತಿಂಗಳ ಹರ್ಷಿತಾ ಸೇರಿ ಮೂವರು ಪುಟ್ಟ ಹೆಣ್ಣುಮಕ್ಕಳಿದ್ದರು. ಕಳೆದ 15 ದಿನದಿಂದ ಸೆಕ್ಸ್​ ಮಾಡಲು ಪತ್ನಿ ನಿರಾಕರಿಸುತ್ತಿದ್ದಳಂತೆ. ಇದೇ ವಿಚಾರಕ್ಕೆ ಗಂಡ ಪಪ್ಪುಕುಮಾರ್​ ಕುಪಿತಗೊಂಡು ಡಾಲಿಯನ್ನು ಶೂಟ್​ ಮಾಡಿ ಕೊಂದಿದ್ದಾನೆ.

ಪತ್ನಿಯನ್ನ ಕೊಂದ ಬಳಿಕ ಮನೆಯಲ್ಲಿದ್ದ ಹಾಲುಗಲ್ಲದ ಮೂರು ಕಂದಮ್ಮಗಳನ್ನು ಜೀವಂತವಾಗಿಯೇ ನಾಲೆಗೆ ಎಸೆದು ಪರಾರಿಯಾಗಿದ್ದ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಮೂರು ಮಕ್ಕಳಿಗಾಗು ಹುಡುಕಾಟ ನಡೆಸಿದರೂ ಮೃತದೇಹಗಳು ಪತ್ತೆಯಾಗಲಿಲ್ಲ. ಪತ್ನಿ ಶವವನ್ನ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಸಂಸ್ಕಾರ ಮಾಡಲಾಗಿದೆ. ಕಾಮಕ್ಕಾಗಿ ಪತ್ನಿ-ಮಕ್ಕಳನ್ನೇ ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯನ್ನ ಬುಧವಾರ ಪುರ್ಕಾಜಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ಪಪ್ಪುಕುಮಾರ್​, ಪತ್ನಿಯನ್ನ ಕೊಂದು ನಾಲೆಗೆ ಮಕ್ಕಳನ್ನು ಎಸೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪುರ್ಕಜಿ ಪೊಲೀಸ್ ಠಾಣೆ ಅಧಿಕಾರಿ ದೇಶರಾಜ್ ಸಿಂಗ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net