ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

death
Published on

ನಾಗಮಂಗಲ: ಇವರಿಬ್ಬರೂ ದಾಂಪತ್ಯಕ್ಕೆ ಕಾಲಿಟ್ಟು 11 ತಿಂಗಳಾಗಿತ್ತು. ನೂರಾರು ಕನಸಿನ ಬುತ್ತಿಯೊಂದಿಗೆ ಖುಷಿಯಾಗಿದ್ದವರ ಬಾಳಲ್ಲಿ ವಿಧಿಯಾಟವೇ ಬೇರೆ ಇತ್ತು. ಇಬ್ಬರೂ ಪ್ರತ್ಯೇಕ ಘಟನೆಯಲ್ಲಿ ಒಂದೇ ದಿನ ದುರಂತ ಅಂತ್ಯ ಕಂಡಿದ್ದಾರೆ. ಗಂಡನ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದ ಪತ್ನಿಯೂ ಸಾವಿನ ಮನೆಯ ಕದ ತಟ್ಟಿದ ಕರುಣಾಜನಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ಶನಿವಾರ(ಇಂದು) ಸಂಭವಿಸಿದೆ.

ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಬೊಮ್ಮೇನಹಳ್ಳಿಯ ಕಿರಣ್ ಮತ್ತು ಇವರ ಪತ್ನಿ ಪೂಜಾ ಮೃತ ದುರ್ದೈವಿಗಳು. 11 ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದ ಈ ಜೋಡಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ವಾಸವಿತ್ತು. ಇದನ್ನೂ ಓದಿರಿ ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

ಕಿರಣ್​ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಇಂದು(ಶುಕ್ರವಾರ) ಬೆಳಗ್ಗೆ ಕೊನೆಯುಸಿರೆಳೆದಿದ್ದರು. ಮೃತದೇಹವನ್ನು ಕಿರಣ್​ರ ಸ್ವಗ್ರಾಮ ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯ ಬೊಮ್ಮೇನಹಳ್ಳಿಗೆ ತರತಾಗಿತ್ತು. ಗಂಡನ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಪತ್ನಿ ಪೂಜಾ, ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ-ಸೊಸೆ ಇಬ್ಬರನ್ನೂ ಒಂದೇ ದಿನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಹೃದಯವಿದ್ರಾವಕ ಘಟನೆಗೆ ಇಡೀ ಗ್ರಾಮವೇ ಮಮ್ಮಲ ಮರುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net