ಕೋವಿಡ್​ಗೆ ಗಂಡ ಬಲಿ, 4 ದಿನದ ಬಳಿಕ ಮನೆಯಲ್ಲೇ ದುರಂತ ಅಂತ್ಯ ಕಂಡ ಗರ್ಭಿಣಿ ಪತ್ನಿ!

suicide
Published on

ರಾಮನಗರ: ಮಹಾಮಾರಿ ಕರೊನಾ ಸೃಷ್ಟಿಸುತ್ತಿರುವ ಸಾವು-ನೋವು ಹೇಳತೀರದು. ಪ್ರೀತಿ ಪಾತ್ರರನ್ನ ಕಳೆದುಕೊಂಡವರ ಗೋಳಾಟವನ್ನ ನೋಡಲಾಗುತ್ತಿಲ್ಲ. ಕೆಲವರು ಬದುಕೇ ಮುಗಿಯಿತೆಂದು ಸಾವಿನ ಮನೆಯ ಕದ ತಟ್ಟುತ್ತಿರುವುದಂತೂ ಆತಂಕಕಾರಿ.

ಇಂತಹದ್ದೇ ಕರುಣಾಜನಕ ಘಟನೆಯೊಂದು ರಾಮನಗರ ಜಿಲ್ಲೆ ಕನಕಪುರದ ಬಸವೇಶ್ವರ ನಗರದಲ್ಲಿ ಗುರುವಾರ ಸಂಭವಿಸಿದೆ. ಗಂಡನ ಅಗಲಿಕೆಯ ನೋವನ್ನು ಸಹಿಸಲಾಗದ ಮೂರು ಗರ್ಭಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಸ್ಕಾಂ ಸಹಾಯಕ ಉದ್ಯೋಗಿ ನಂದಿನಿ (28) ಮೃತ ದುರ್ದೈವಿ. ಮೈಸೂರು ಮೂಲದ ಸತೀಶ್​ ಎಂಬಾತನನ್ನು ಪ್ರೀತಿಸಿ 2 ವರ್ಷಗಳ ಹಿಂದೆ ಮದುವೆಯಾಗಿ ಕನಕಪುರದಲ್ಲಿ ಸಂಸಾರ ನಡೆಸುತ್ತಿದ್ದರು. ಸತೀಶ್​ರ ತಾಯಿ ಕರೊನಾ ಸೋಂಕಿನಿಂದ ಮೃತಪಟ್ಟ ಬೆನ್ನಲ್ಲೇ ಸತೀಶ್​ಗೂ ಸೋಂಕು ದೃಢಪಟ್ಟಿತ್ತು. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಾಲ್ಕು ದಿನದ ಹಿಂದೆ ಮೃತಪಟ್ಟಿದ್ದರು. ಇದನ್ನೂ ಓದಿರಿ ಕರೊನಾ ಲಸಿಕೆಯಲ್ಲೂ ಹಣ ಪೀಕಿದ ವೈದ್ಯೆ! ಈಕೆ ಬಳಿ ವ್ಯಾಕ್ಸಿನ್​ ಪಡೆದವರಿಗೆ ಇಲ್ಲಿದೆ ಶಾಕಿಂಗ್​ ನ್ಯೂಸ್

ಗಂಡನ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಗೊಂಡಿದ್ದ ನಂದಿನಿ ನಾಲ್ಕು ದಿನದ ಬಳಿ ಡೆತ್ ನೋಟ್ ಬರೆದಿಟ್ಟು ಮಧ್ಯಾಹ್ನ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net