More

    ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

    ಬಿಹಾರ: ಕರೊನಾ ಸೋಂಕಿನಿಂದ ಬಳಲುತ್ತಿದ್ದ ನನ್ನ ಗಂಡನನ್ನು ಉಳಿಸಿಕೊಳ್ಳಲು ಆಸ್ಪತ್ರೆಗೆ ಹೋದ ನನಗೆ ಅಲ್ಲಿನ ಸಿಬ್ಬಂದಿ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಆಸ್ಪತ್ರೆ ವಿರುದ್ಧ ಸಂತ್ರಸ್ತ ಮಹಿಳೆ ದೂರು ಕೊಟ್ಟಿದ್ದಾರೆ.

    ಆಸ್ಪತ್ರೆ ಸಿಬ್ಬಂದಿಯೊಬ್ಬ ನನ್ನ ದುಪ್ಪಟ್ಟ ಎಳೆದು ಸೊಂಟಕ್ಕೆ ಕೈ ಹಾಕಿ ಲೈಂಗಿಕ ಕಿರುಕುಳ ಕೊಟ್ಟ. ಇದರ ವಿರುದ್ಧ ಧ್ವನಿ ಎತ್ತೋಣ ಅಂದ್ರೆ ಅದೇ ಆಸ್ಪತ್ರೆಯೊಳಗೆ ನನ್ನ ಗಂಡ ಮತ್ತು ತಾಯಿ ದಾಖಲಾಗಿದ್ದರು. ಆ ಕ್ಷಣ ನನಗೆ ಅವರ ಪ್ರಾಣ ಉಳಿದರೆ ಸಾಕಿತ್ತು. ಹಾಗಾಗಿ ಕಿರುಕುಳ ಸಹಿಸಿಕೊಂಡೇ ಅವರಿಬ್ಬರಿಗೂ ಸೂಕ್ತ ಚಿಕಿತ್ಸೆ ಕೊಡುವಂತೆ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯನ್ನ ಅಂಗಲಾಚಿದೆ… ಆದರೂ ನನ್ನ ಗಂಡನಿಗೆ ವೈದ್ಯರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಲಿಲ್ಲ, ಗಂಡ ಸತ್ತು ಹೋದರು… ಎಂದು ಸಂತ್ರಸ್ತೆ ಕಣ್ಣೀರಿಟ್ಟ ವಿಡಿಯೋ ವೈರಲ್​ ಆಗಿದೆ.

    ಬಿಹಾರದ ಭಾಗಲ್ಪುರದ ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲಿಸಿರುವ ಮಹಿಳೆ, ಆಸ್ಪತ್ರೆಯಲ್ಲಿ ತಾನು ಅನುಭವಿಸಿದ ನರಕವನ್ನ 12 ನಿಮಿಷದ ವಿಡಿಯೋದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ನನ್ನ ಗಂಡ ಸತ್ತಿದ್ದಾರೆ. ಕರೊನಾ ಸೋಂಕು ತಗುಲಿ ಅಸ್ವಸ್ಥರಾದ ನನ್ನ ಗಂಡನಿಗೆ ಚಿಕಿತ್ಸೆ ಕೊಡಿಸಲು ಮೂರು ಆಸ್ಪತ್ರೆಗೆ ಅಲೆದೆ. ಎಷ್ಟೇ ಬೇಡಿಕೊಂಡರೂ ಚಿಕಿತ್ಸೆ ಕೊಡಲು ಮುಂದಾಗಲಿಲ್ಲ. ಕೊನೆಗೆ ಗ್ಲೋಕಲ್ ಆಸ್ಪತ್ರೆಗೆ ದಾಖಲಿಸಿದೆ. ಅಲ್ಲಿ ಕೊಳಕು ಹಾಸಿಗೆ ಮೇಲೆಯೇ ನನ್ನ ಗಂಡನನ್ನ ಮಲಗಿಸಿದರು. ಅದನ್ನು ಬದಲಿಸಿ ಪ್ಲೀಸ್​, ಸ್ವಚ್ಛವಾಗಿರುವ ಬೆಡ್​ಶೀಟ್​ ಕೊಡಿ ಎಂದು ಆಸ್ಪತ್ರೆಯ ಅಟೆಂಡರ್​ ಜ್ಯೋತಿಕುಮಾರ್​ಗೆ ಮನವಿ ಮಾಡಿದೆ. ನನ್ನ ಅಸಾಹಯಕತೆಯನ್ನೇ ಬಂಡವಾಳ ಮಾಡಿಕೊಂಡ ಆತ, ಸಹಾಯ ಮಾಡುವುದಾಗಿ ಹೇಳಿ ನನ್ನ ದುಪ್ಪಟ್ಟಾ ಎಳೆದು, ಸೊಂಟಕ್ಕೆ ಕೈ ಹಾಕಿ ನಗುತ್ತಿದ್ದ. ನಾನು ಯಾರಿಗೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ನನ್ನ ಪತಿ ಮತ್ತು ನನ್ನ ತಾಯಿ ಆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಚಿಕಿತ್ಸೆ ನೀಡದಿದ್ದರೆ ಎಂದು ಭಯದಲ್ಲಿ ಹಲ್ಲುಕಚ್ಚಿಕೊಂಡು ಸಹಿಸಿಕೊಂಡೆ ಎಂದು ಕಣ್ಣೀರಿಟ್ಟಿದ್ದಾರೆ.

    ಆಸ್ಪತ್ರೆಯಲ್ಲಿ ತುಂಬಾ ನಿರ್ಲಕ್ಷ್ಯವಿತ್ತು. ವೈದ್ಯರು ಹಾಗೆ ಬಂದು ಹೋಗುತ್ತಿದ್ದರು. ಸಿಬ್ಬಂದಿ ಇರುತ್ತಿರಲಿಲ್ಲ. ಔಷಧ ನೀಡಲು ನಿರಾಕರಿಸುತ್ತಿದ್ದರು. ನನ್ನ ತಾಯಿ ಸ್ಥಿತಿ ಪರವಾಗಿರಲಿಲ್ಲ. ಆದರೆ ನನ್ನ ಗಂಡನಿಗೆ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ಅವರು ನೀರಿಗಾಗಿ ಕೈ ಸನ್ನೆ ಮಾಡುತ್ತಿದ್ದರೂ ಯಾರೊಬ್ಬರೂ ನೀರು ಕೊಡಲಿಲ್ಲ. ವೈದ್ಯರ ನಿರ್ಲಕ್ಷ್ಯದಿಂದಲೇ ನನ್ನ ಗಂಡನ ಪ್ರಾಣ ಹೋಯಿತು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

    ಇದಕ್ಕೂ ಮುನ್ನಾ ಮಾಯಾಗಂಜ್‌ನ ಸರ್ಕಾರಿ ಆಸ್ಪತ್ರೆಗೆ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಗಂಡನನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿ ಆಕ್ಸಿಜನ್ ಇಲ್ಲ ಎಂದುಬಿಟ್ಟರು. ಪಾಟ್ನಾದ ಖಾಸಗಿ ಆಸ್ಪತ್ರೆಗೆ ಹೋದರೆ ಅಲ್ಲಿನ ಸಿಬ್ಬಂದಿ ಬ್ಲಾಕ್ ಮಾರ್ಕೆಟ್​ನಲ್ಲಿ ಆಕ್ಸಿಜನ್ ಸಿಲಿಂಡರ್‌ ಖರೀದಿಸುವಂತೆ ಒತ್ತಾಯಿಸಿದರು ಎಂದು ಆಸ್ಪತ್ರೆಯ ಅವ್ಯವಸ್ಥೆಯನ್ನ ಬಿಚ್ಚಿಟ್ಟಿದ್ದಾರೆ.

    ಮಹಿಳೆಯ ಆರೋಪದಿಂದ ಎಚ್ಚೆತ್ತ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಗ್ಲೋಕಲ್ ಆಸ್ಪತ್ರೆಯ ಅಟೆಂಡರ್​ ಅನ್ನು ಕೆಲಸದಿಂದ ಅಮಾನತು ಮಾಡಲಾಸಮಸ್ತಕ್ದ. ಈ ಪ್ರಕರಣದ ತನಿಖೆಗಾಗಿ ಸಮಿತಿ ರಚಿಸಲಾಗಿದೆ.

    ಪ್ರೀತಿ ಹೆಸರಲ್ಲಿ ಶಾಲಾ ವಿದ್ಯಾರ್ಥಿನಿ ಜತೆ ಯುವಕನ ಸೆಕ್ಸ್: ಮಾತ್ರೆ ನುಂಗಿಸಿ ಸಿಕ್ಕಿಬಿದ್ದ ಕಾಮುಕನ ಕಥೆ ಏನಾಯ್ತು?

    ಅಪ್ಪ-ಅಮ್ಮ ಕೋವಿಡ್​ಗೆ ಬಲಿ! ತಾತ-ಅಜ್ಜಿಗೂ ಸೋಂಕು, ಅನಾಥೆಯಾದ 4 ವರ್ಷದ ಕಂದಮ್ಮ

    ಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ

    ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ ಕನ್ನಡತಿ ಧಾರಾವಾಹಿ ನಟ ಕಿರಣ್​ ರಾಜ್​! ಕರೊನಾ ಸಂಕಷ್ಟಕ್ಕೆ ಮಿಡಿದ ನಟನಿಗೆ ಸಲಾಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts