More

    ಕ್ಷೇತ್ರದ ಅಭಿವೃದ್ಧಿಗಾಗಿ ಜಗಳಕ್ಕಿಳಿಯುವ ಪ್ರಲ್ಹಾದ ಜೋಶಿ

    ಹುಬ್ಬಳ್ಳಿ : ನಾನು ಚುನಾವಣೆ ಪ್ರಚಾರಕ್ಕೆ ಹೋದಲ್ಲೆಲ್ಲ ಮತದಾರರು ನಮ್ಮ ಸಂಸದರನ್ನು ಮಂತ್ರಿ ಮಾಡುವಂತೆ ಮನವಿ ಮಾಡುತ್ತಾರೆ. ಆದರೆ, ಈಗಾಗಲೇ ಮಂತ್ರಿ ಇರುವ ಪ್ರಲ್ಹಾದ ಜೋಶಿ ಅವರನ್ನೇ ನಾವು ಕಣಕ್ಕೆ ಇಳಿಸಿದ್ದೇವೆ. ಧಾರವಾಡ ಕ್ಷೇತ್ರದ ಮತದಾರರು ಅವರನ್ನು ಚುನಾಯಿಸಿ, ದೆಹಲಿಗೆ ಕಳುಹಿಸಿ. ಜೋಶಿ ಅವರನ್ನು ಮತ್ತಷ್ಟು ದೊಡ್ಡ ವ್ಯಕ್ತಿ ಮಾಡುವ ಜವಾಬ್ದಾರಿ ನಮ್ಮದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಭರವಸೆ ನೀಡಿದರು.

    ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಚುನಾವಣೆ ಪ್ರಚಾರ ಬಹಿರಂಗ ಸಭೆ ಹಾಗೂ ‘ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಅಮಿತ್ ಷಾ ಮಾತನಾಡಿದರು.

    ಪ್ರಲ್ಹಾದ ಜೋಶಿ ಅತ್ಯುತ್ತಮ ಮಂತ್ರಿ. ತಮಗೆ ಕೊಟ್ಟಿರುವ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಜೋಶಿ ಮೇಲ್ನೋಟಕ್ಕೆ ಸರಳ ವ್ಯಕ್ತಿಯಂತೆ ಕಾಣುತ್ತಾರೆ. ಆದರೆ, ಧಾರವಾಢ ಲೋಕಸಭೆ ಕ್ಷೇತ್ರದ ಅಭಿವೃದ್ಧಿಯ ವಿಷಯ ಬಂದಾಗಲಂತೂ ನನ್ನ ಜೊತೆಗೂ ಜಗಳಕ್ಕೆ ಇಳಿಯುತ್ತಾರೆ. ಇಂತಹ ಸಂಸದರನ್ನು ಈ ಕ್ಷೇತ್ರದ ಮತದಾರರು ಕಳೆದುಕೊಳ್ಳಬಾರದು. ಈ ಬಾರಿಯೂ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

    ಕೋವಿಡ್ ಅತಿ ಹೆಚ್ಚು ಲಸಿಕೆಯನ್ನು ಧಾರವಾಡ ಕ್ಷೇತ್ರಕ್ಕೆ ತಂದಿದ್ದಾರೆ. ಇಲ್ಲಿನ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಧಾರವಾಡ ಜಿಲ್ಲೆಯ ಪ್ರತಿ ಮನೆಗೆ ನಳದ ಸಂರ್ಪಕ ಕೊಡಲು ಮುಂದಾಗಿದ್ದಾರೆ. ಹುಬ್ಬಳ್ಳಿ-ಧಾರವಾಡದ ಜನತೆಗೆ ಗ್ಯಾಸ್ ಸಂಪರ್ಕ ಒದಗಿಸುತ್ತಿದ್ದಾರೆ ಎಂದು ಹೇಳಿದರು.

    ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಹೋರಾಟದಲ್ಲಿ ಪ್ರಲ್ಹಾದ ಜೋಶಿ ಪಾಲ್ಗೊಂಡಿದ್ದರು. ಕಾಶ್ಮೀರದ ಲಾಲ್​ಚೌಕ್​ನಲ್ಲಿಯೂ ರಾಷ್ಟ್ರಧ್ವಜ ಹಾರಿಸುವ ಬಗ್ಗೆಯೂ ಬಿಜೆಪಿ ಹೋರಾಟ ನಡೆಸಿತ್ತು. ಎರಡೂ ಪ್ರದೇಶಗಳಲ್ಲಿ ತಿರಂಗಾ ಹಾರಿಸುವಲ್ಲಿ ಬಿಜೆಪಿ ಹೋರಾಟ ಯಶಸ್ವಿಗೊಂಡಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts