More

    ಪೇಟೆಕೆರೆ ಭೈರವೇಶ್ವರ, ಬಂಡಿ ಚೌಡೇಶ್ವರಿ ಸುಗ್ಗಿಹಬ್ಬ ಸಂಪನ್ನ

    ಬಾಳೆಹೊನ್ನೂರು: ಪಟ್ಟಣದ ಪೇಟೆಕೆರೆ ಭೈರವೇಶ್ವರ, ಮಾಸ್ತಮ್ಮ, ಬಂಡಿ ಚೌಡೇಶ್ವರಿ ಅಮ್ಮ ಹಾಗೂ ಪರಿವಾರ ದೇವತೆಗಳ ವಾರ್ಷಿಕ ಸುಗ್ಗಿಹಬ್ಬ ವಿಜೃಂಭಣೆಯಿಂದ ಭಾನುವಾರ ನಡೆಯಿತು.

    ಗುರುವಾರ ಆರಂಭಗೊಂಡ ಬೈರವೇಶ್ವರ, ಮಾಸ್ತಮ್ಮ, ಮಣಬೂರು ಚೌಡಿ, ಬೆಳ್ಳಿಕಟ್ಟೆ ಚೌಡಿ, ಬಂಡಿ ಚೌಡೇಶ್ವರಿ, ಚಿಕ್ಕಮ್ಮ, ದೊಡ್ಡಮ್ಮ, ನಾಗರ ಮಾದಗಿರಿ ಚೌಡಿ, ಉರಿ ಚೌಡಿ, ಜಟ್ಟಿಗ, ಕೆಂಚರ ಹುಲಿಚೌಡಿ ದೇವರುಗಳ ಸುಗ್ಗಿ ಹಬ್ಬದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.
    ಸುಗ್ಗಿ ಹಬ್ಬದ ಪ್ರಯುಕ್ತ ವಾರಕ್ಕೂ ಮೊದಲೇ ಗ್ರಾಮಸ್ಥರು ಚೌತ(ವ್ರತ) ಆರಂಭಿಸಿದ್ದರು. ಉತ್ಸಾಹದಿಂದ ಸುಗ್ಗಿ ಕುಣಿದು ಸಂಭ್ರಮಿಸಿದರು. ದೇವರ ಉತ್ಸವ ಮೂರ್ತಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಭದ್ರಾ ನದಿಗೆ ತೆರಳಿ ಗಂಗೆ ಪೂಜೆ ಮಾಡಿ ಗಂಗೆಯನ್ನು ದೇವಸ್ಥಾನಕ್ಕೆ ತಂದು ಸುಗ್ಗಿಗದ್ದೆಯಲ್ಲಿ ಹೊಂತೆ ಹೊತ್ತಿಸಿ, ಆರತಿ ಎತ್ತಿಸಿ, ಹಣ್ಣು-ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ಹರಕೆ, ದರ್ಶನ ಹಾಗೂ ಪಾತ್ರಿಯಿಂದ ಹೇಳಿಕೆ ಕೇಳಿಕೆ ನಡೆಯಿತು.
    ಸುಗ್ಗಿ ಹಬ್ಬದಲ್ಲಿ ಹಲಸೂರು, ಕಡ್ಲೇಮಕ್ಕಿ, ಬೈರನಮಕ್ಕಿ, ಹುಯಿಗೆರೆ, ಬನ್ನೂರು, ಮೆಣಸುಕುಡಿಗೆ ಕಾಲನಿ ಸೇರಿದಂತೆ ಸುತ್ತಮುತ್ತಲಿನ ನೂರಾರು ಭಕ್ತರು ಭಾಗವಹಿಸಿ ಧಾರ್ಮಿಕ ಪೂಜಾ ವಿಧಿವಿದಾನಗಳಲ್ಲಿ ಪಾಲ್ಗೊಂಡು ಮುಡಿಗಂಧ ಪ್ರಸಾದ ಸ್ವೀಕರಿಸಿದರು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts