More

    ಗಂಗಾವತಿಯಲ್ಲಿ ಶ್ರೀ ಭಾರತಿ ತೀರ್ಥರ ವರ್ಧಂತ್ಯುತ್ಸವ ಸಂಪನ್ನ

    ಗಂಗಾವತಿ: ಇಲ್ಲಿನ ಶಾರದಾ ನಗರದ ಶ್ರೀ ಶಂಕರ ಮಠದಲ್ಲಿ ಶೃಂಗೇರಿ ಪೀಠದ 36ನೇ ಪೀಠಾಧಿಪತಿ ಶ್ರೀ ಭಾರತಿ ತೀರ್ಥ ಸ್ವಾಮೀಜಿಗಳ 74ನೇ ವರ್ಧಂತ್ಯುತ್ಸವ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

    ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಶಾರದಾಂಬೆ ಹಾಗೂ ಪರಿವಾರದ ದೇವರುಗಳಿಗೆ, ಗುರು ಪಾದುಕೆಗಳಿಗೆ ಅಭಿಷೇಕ, ಅಷ್ಟೋತ್ತರ ಶತನಾಮಾವಳಿ ಪಾರಾಯಣ ಮತ್ತು ವಿಶೇಷ ಪೂಜೆ ನೆರವೇರಿಸಲಾಯಿತು. ಹಿಂದುಳಿದ ವರ್ಗದ ಮಹಿಳೆ ಹನುಮಂತಿ ಕುಟುಂಬದ ಕಲ್ಯಾಣ ಕಾರ್ಯುಕ್ಕಾಗಿ ಶ್ರೀಮಠದಿಂದ ಮಾಂಗಲ್ಯ ವಿತರಿಸಲಾಯಿತು.

    ಇದನ್ನೂ ಓದಿ: ಶ್ರೀ ಗುರು ರಾಯರ ವರ್ಧಂತ್ಯುತ್ಸವ ವೈಭವ

    ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ, ಶ್ರೀಗಳ ವರ್ಧಂತ್ಯುತ್ಸ ಮತ್ತು ಸನ್ಯಾಸತ್ವದ ಸುವರ್ಣ ಮಹೋತ್ಸವ ನಿಮಿತ್ತ ಸಮಾಜ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಬಡವರ್ಗದ ಮಹಿಳೆಯರಿಗೆ ಹೊಲಿಗೆ ಯಂತ್ರ, ಪರಿಸರ ರಕ್ಷಣೆಗೆ ಸಸಿಗಳ ವಿತರಣೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶುಲ್ಕ ಪಾವತಿ, ಲ್ಯಾಪ್‌ಟಾಪ್ ವಿತರಣೆ, ಗೋ-ಸಂರಕ್ಷಣೆಗೆ ಮೇವು ಹಂಚಿಕೆ ಇತರ ಕಾರ್ಯಕ್ರಮ ನಡೆಯಲಿವೆ ಎಂದರು.

    ಮಠದ ಹಿರಿಯ ಸದಸ್ಯ ಶ್ರೀಪಾದರಾವ್ ಮುಧೋಳಕರ್, ಪ್ರಧಾನ ಅರ್ಚಕ ಕುಮಾರಭಟ್, ಮುಖಂಡರಾದ ರಾಘವೇಂದ್ರ ಅಳವಂಡಿಕರ್, ವೇಣುಗೋಪಾಲ್, ಶೇಷಗಿರಿ ಗಡಾದ್, ಜಗನ್ನಾಥ ಅಳವಂಡಿಕರ್, ಶಂಕರ ಹೊಸಳ್ಳಿ, ಬೇವಿನಾಳ ಪ್ರಲ್ಹಾದಾಚಾರ್, ಕಾಶೀನಾಥ ಭಟ್ ಇದ್ದರು.

    ಶಾರದಾ ಶಂಕರ ಭಕ್ತ ಭಜನಾ ಮಂಡಳಿ, ಸೌಂದರ್ಯ ಲಹರಿ ಭಗಿನಿಯರ ಬಳಗ, ಸತ್ಯದೇವ ಭಜನಾ ಮಂಡಳಿ, ಗಂಗಾಧರೇಶ್ವರ ಭಜನಾ ಮಂಡಳಿ ಸದಸ್ಯರಿಂದ ಕಲ್ಯಾಣ ವಷ್ಠಿ ಸ್ತವ, ಶಿವಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರ ಮತ್ತು ಲಕ್ಷ್ಮಿನರಸಿಂಹ ಕರುಣಾಸರ ಸ್ತೋತ್ರ ಪಾರಾಯಣ ಮತ್ತು ಭಜನೆ ಜರುಗಿದವು.

    ಶ್ರೀಕವೀಂದ್ರ ತೀರ್ಥರ ಆರಾಧನೆ ನಾಳೆಯಿನಿಂದ

    ಗಂಗಾವತಿ: ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡಿಯಲ್ಲಿ ಶ್ರೀಕವೀಂದ್ರ ತೀರ್ಥರ ಆರಾಧನೆ ಮಹೋತ್ಸವ ಮಂತ್ರಾಲಯ ಮಠದಿಂದ ಏ.17 ಮತ್ತು 18ರಂದು ಹಮ್ಮಿಕೊಳ್ಳಲಾಗಿದೆ. ಹೈಕೋರ್ಟ್ ಆದೇಶದಂತೆ ಏ.17ರ ಮಧ್ಯಾಹ್ನ 1ರಿಂದ ಆರಾಧನೆ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದ್ದು, ಏ.18ರಂದು ಪೂರ್ಣ ದಿನ ನೆರವೇರಿಸಲಾಗುವುದು.

    ಮಂತ್ರಾಲಯಮಠದ ಶ್ರೀಸುಬುಧೇಂದ್ರ ತೀರ್ಥರ ಆದೇಶದಂತೆ ಶ್ರೀಕವೀಂದ್ರತೀರ್ಥರ ಮೂಲವೃಂದಾವನಕ್ಕೆ ಮಹಾಪಂಚಾಮತಾಭಿಷೇಕ, ವಿಶೇಷ ಪುಷ್ಪಾಲಂಕಾರ, ಸಂಸ್ಥಾನ ಪೂಜೆ, ವಿದ್ವಾಂಸರ ಪ್ರವಚನ, ಅಲಂಕಾರ ಸಂತರ್ಪಣೆ ಮತ್ತು ತೀರ್ಥಪ್ರಸಾದ ಜರುಗಲಿದೆ ಎಂದು ಆನೆಗೊಂದಿ ರಾಯರ ಮಠದ ವ್ಯವಸ್ಥಾಪಕ ಸುಮಂತ ಕುಲ್ಕರ್ಣಿ ಇಡಪನೂರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts