More

    ಶ್ರೀ ಗುರು ರಾಯರ ವರ್ಧಂತ್ಯುತ್ಸವ ವೈಭವ

    ಜೇವರ್ಗಿ: ಬಸವೇಶ್ವರ ಕಾಲನಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೃತ್ತಿಕಾ ವೃಂದಾವನ ಸ್ಥಾಪನೆಯ 10ನೇ ವರ್ಧಂತ್ಯುತ್ಸವ ಶನಿವಾರ ಸಂಭ್ರಮದಿAದ ನೆರವೇರಿತು.

    ಅರ್ಚಕ ಪವನಾಚಾರ್ಯ ಅವರ ನೇತೃತ್ವದಲ್ಲಿ ಬೆಳಗ್ಗೆ 6ಕ್ಕೆ ಸುಪ್ರಭಾತ, 7ಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, 10ಕ್ಕೆ ವೃಂದಾವನಕ್ಕೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಭಜನಾ ಮಂಡಳಿಯಿAದ ಭಜನಾ ಕಾರ್ಯ ನೆರವೇರಿತು. ಮಹಿಳೆಯರಿಂದ ಕೋಲಾಟ ನೃತ್ಯ ಜರುಗಿತು.

    ಮಧ್ಯಾಹ್ನ 1ಕ್ಕೆ ಮಹಾ ಪ್ರಸಾದ ವಿತರಣೆ ನಡೆಯಿತು. ರಾತ್ರಿ 8ಕ್ಕೆ ರಾಯರ ತೊಟ್ಟಿಲು ಸೇವೆ ಹಾಗೂ ಮಹಮಂಗಳಾರತಿ ಮೂಲಕ ಉತ್ಸವಕ್ಕೆ ತೆರೆ ಬಿದ್ದಿತು. ಆದರ್ಶ ಗುರುವರ್ಯ ಪ್ರಶಸ್ತಿ ಪಡೆದ ಉಪನ್ಯಾಸಕ ವೆಂಕಟರಾವ ಮುಜುಮದಾರ್ ಅವರನ್ನು ಸನ್ಮಾನಿಸಲಾಯಿತು.

    ರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷ ರಮೇಶಬಾಬು ಎನ್.ವಕೀಲ, ಕಾರ್ಯದರ್ಶಿ ಶಾಮರಾವ್ ಕುಲಕರ್ಣಿ ರೇವನೂರ, ಪ್ರಮುಖರಾದ ದತ್ತಾತ್ರೇಯರಾವ ಕುಲಕರ್ಣಿ ಕೋಳಕೂರ, ಹಳ್ಳೆಪ್ಪಾಚಾರ್ಯ ಜೋಶಿ, ವಿಜಯಕುಮಾರ ಮಾಸ್ಟರ್, ರಾಜೇಂದ್ರ ಕುಲಕರ್ಣಿ, ಕಿಶನರಾವ ಕುಲಕರ್ಣಿ ಹೇಮನೂರ, ಗುರುರಾಜ ಆಲಬಾಳ, ಅಪ್ಪಣ್ಣ ಪಾಟೀಲ್ ಕೂಟನೂರ, ಲಕ್ಷ್ಮೀಕಾಂತ ಕುಲಕರ್ಣಿ ಹೊತಿನಮಡು, ರಾಘವೇಂದ್ರ ಜವಳಿ, ರಾಧಾಕೃಷ್ಣ ಅವರಾದ, ಸಂಜಿವಾಚಾರ್ಯ ಜೋಶಿ, ಸುರೇಶ ಕುಲಕರ್ಣಿ ಯಾಳವಾರ, ಸುಧೀಂದ್ರ ಕುಲಕರ್ಣಿ, ಅನಂತಕೃಷ್ಣ ವಕೀಲ, ಪಾಂಡುರAಗ ಅವರಾದ, ಪ್ರಾಣೇಶ ಕುಲಕರ್ಣಿ ಮಳ್ಳಿ, ಸುದೀಂದ್ರ ವಕೀಲ್, ವಿಜಯಕುಮಾರ ಪೊದ್ದಾರ, ಗುರುರಾಜ ಜೋಶಿ, ಶಿವರಾಮ ಜೋಶಿ, ಭೀಮಸೇನ ಜೋಶಿ, ಶ್ರೂನಿವಾಸ ಮಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts