More

    ಎಐಸಿಸಿ ಅಧ್ಯಕ್ಷ ಖರ್ಗೆ ಅಳಿಯ ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ‘ರಾಧಾಕೃಷ್ಣ ದೊಡ್ಡಮನಿ’ ಆಸ್ತಿ ಎಷ್ಟು ಗೊತ್ತಾ?

    ಕಲಬುರಗಿ: ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕಾಂಗ್ರೆಸ್ ಅಬ್ಬರದ ಪ್ರಚಾರ ನಡೆಸುತ್ತಿದೆ. 28 ಕ್ಷೇತ್ರಗಳನ್ನು ಗೆಲ್ಲಲು ತಂತ್ರಗಳನ್ನು ರೂಪಿಸುತ್ತಿದೆ. ಇಂದು (ಶುಕ್ರವಾರ) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ, ಕಲಬುರಗಿ ಮೀಸಲು ಕ್ಷೇತ್ರದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಧಾಕೃಷ್ಣ ದೊಡ್ಡಮನಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

    ಇದನ್ನೂ ಓದಿ: Viral News: ಆಹಾರ ಕೊಟ್ಟು ಹೋಗುವಾಗ ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್‌..! ಈ ಬಗ್ಗೆ ಕಂಪನಿ ಹೇಳಿದ್ದೇನು?

    ಕಾಂಗ್ರೆಸ್ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ ರಾಧಾಕೃಷ್ಣ ದೊಡ್ಡಮನಿ ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ದೊಡ್ಡಮನಿ ಅವರು ಬರೋಬ್ಬರಿ 50 ಕೋಟಿ ರೂ.ಗೂ ಅಧಿಕ ಮೊತ್ತದ ಆಸ್ತಿ ಘೋಷಣೆ ಮಾಡಿದ್ದಾರೆ.
    ರಾಧಾಕೃಷ್ಣ ದೊಡ್ಡಮನಿ ಒಟ್ಟು ಆಸ್ತಿ 29.48 ಕೋಟಿ ರೂ., ಜೊತೆಗೆ 4.18 ಕೋಟಿ ಸಾಲವನ್ನು ಪಡೆದಿದ್ದಾರೆ. ಇವರ ಬಳಿ ಇನ್ನೋವಾ, ಮಹಿಂದ್ರಾ ಬುಲೆರೋ ಕಾರುಗಳಿವೆ. ಇನ್ನು 255 ಗ್ರಾಂ ಚಿನ್ನ, 6 ಕೆ.ಜಿ ಬೆಳ್ಳಿ ಹೊಂದಿದ್ದಾರೆ.

    18 ಎಕರೆ ಕೃಷಿ ಜಮೀನು ಹೊಂದಿದರೆ, 16.32 ಕೋಟಿ ಮೌಲ್ಯದ ಕೃಷಿಯೇತರ ಜಮೀನು ಕೂಡ ಇವರ ಹೆಸರಲ್ಲಿದೆ. 2.59 ಕೋಟಿಯ ವಾಣಿಜ್ಯ ಕಟ್ಟಡ ಕೂಡ ಇದೆ. ಇನ್ನು ರಾಧಾಕೃಷ್ಣ ಅವರ ಪತ್ನಿ ಡಾ.ಜಯಶ್ರಿ ಕೂಡ 13.03 ಕೋಟಿ ಆಸ್ತಿ ಒಡತಿಯಾಗಿದ್ದಾರೆ. ಇವರ ಬಳಿ 810 ಗ್ರಾಂ ಚಿನ್ನ, 11 ಕೆ ಜಿ ಬೆಳ್ಳಿ ಇದೆ.

    ಪೊಲೀಸ್ ಠಾಣೆಯಲ್ಲಿ ಪ್ರಕರಣ: ದೊಡ್ಡಮನಿ ಅವರ ವಿರುದ್ಧ ಬೆಂಗಳೂರಿನ ಸಿಸಿಬಿ ಪೊಲೀಸರು 2014ರಲ್ಲಿ ಐಪಿಸಿ ಸೆಕ್ಷನ್ 420, 468, 471ರ ಅಡಿ ವಂಚನೆ, ಫೋರ್ಜರಿ, ನಕಲಿ ದಾಖಲೆಗಳ ಸಲ್ಲಿಕೆಗೆ ಸಂಬಂಧಿಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಗಳು ವಿಚಾರಣೆಗೆ ಬಾಕಿ ಇದೆ.

    ಇಂದು ಕಲಬುರಗಿ ನಗರದ ಎನ್‌ವಿ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಆಯೋಜಿಸಿತ್ತು. ಸಮಾವೇಶವನ್ನ ಜ್ಯೋತಿ ಬೆಳಗಿಸುವುದರ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಉದ್ಘಾಟಿಸಿದರು.

    Viral News: ಹೋಟೆಲ್​ನಲ್ಲಿ ಎಕ್ಸ್ಟ್ರಾ ಚಟ್ನಿ ಹಾಕುವ ವಯೋವೃದ್ಧ: ವಯಸ್ಸು ಜಸ್ಟ್‌ ನಂಬರ್ ಎಂದ ಶಾಸಕ ಸುರೇಶ್ ಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts