More

    ಬಡವರ ಕೈಗೆ ವೈದ್ಯಕೀಯ ಸೇವೆ ಸಿಗಲಿ

    ಕಲಬುರಗಿ: ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಸಂಶೋಧನೆಗಳು ನಡೆಯುತ್ತಿದ್ದು, ಹೊಸ ತಂತ್ರಜ್ಞಾನಗಳು ಹೊರ ಬರುತ್ತಿವೆ. ಆದರೆ ದೇಶದಲ್ಲಿನ ಬಡ, ಮಧ್ಯಮ ವರ್ಗದವರ ಕೈಗೆ ನಿಲುಕುತ್ತಿಲ್ಲ. ವೈದ್ಯರಾದವರು ಬಡ, ಮಧ್ಯಮ ವರ್ಗದವರಿಗೆ ಅದನ್ನು ತಲುಪಿಸಬೇಕು ಎಂದು ಕೆಎಲ್‌ಇ ಡೀಮ್ಡ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ವೀರಪ್ಪ ಕೊತ್ತವಾಲೆ ಸಲಹೆ ನೀಡಿದರು.

    ನಗರದ ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಜೇಜ್‌ನಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ೨೦೧೮ ಬ್ಯಾಚ್‌ನ `ಅಧೀರನ್’ ಪದವಿ ಪ್ರದಾನ ಘಟಿಕೋತ್ಸವದಲ್ಲಿ ಮಾತನಾಡಿ, ಶೀಘ್ರದಲ್ಲಿ ಆರೋಗ್ಯ ಕ್ಷೇತ್ರದಲ್ಲೂ ಕೃತಕ ಬುದ್ಧಿ ಮತ್ತೆ ತಂತ್ರಜ್ಞಾನ ಬಳಕೆ ಆಗಲಿದೆ. ಅದನ್ನು ಬಳಸಲು ಸಜ್ಜಾಗಬೇಕು ಎಂದರು.

    ಹೊಸ ತಂತ್ರಜ್ಞಾನಗಳಿಗೆ ತಕ್ಕಂತೆ ನಿರಂತರವಾಗಿ ಅಧ್ಯಯನ, ಕಲಿಕೆ ಇರಬೇಕು. ಪದವಿ ಒಂದು ಮೈಲು ಗಲ್ಲಾಗಿದ್ದು, ಮುಂದೆ ಜೀವನಪಥದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವುದೇ ದೊಡ್ಡ ಪಾಠವಾಗಲಿದೆ ಎಂದರು.

    ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ ನಮೋಶಿ ಮಾತನಾಡಿ, ದೇವರು ವೈದ್ಯರ ಸ್ಥಾನದಲ್ಲಿದ್ದು, ರೋಗಿಗಳ ಜೀವ ಉಳಿಸುವ ಮಹತ್ಕಾರ್ಯವನ್ನು ಮಾಡುತ್ತೀರಿ. ಬದಲಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವೈದ್ಯರ ಅಗತ್ಯತೆ ಹೆಚ್ಚಳವಾಗಿದೆ. ಸೇವೆಯಲ್ಲಿ ಮಾನವೀಯತೆ ಇರಲಿ ಎಂದರು.

    ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜಿನ ಉಪ ಡೀನ್ ಡಾ.ಅನುರಾಧ ಪಾಟೀಲ್ ಪ್ರತಿಜ್ಞಾ ವಿಧಿ ಬೋಧಿಸಿದರು. ೧೪೫ ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

    ಸಂಸ್ಥೆ ಉಪಾಧ್ಯಕ್ಷ ರಾಜು ಭೀಮಳ್ಳಿ, ಆಡಳಿತ ಮಂಡಳಿ ಸದಸ್ಯರಾದ ಡಾ.ಕೈಲಾಶ ಪಾಟೀಲ್, ಡಾ.ಶರಣಬಸಪ್ಪ ಹರವಾಳ, ಅರುಣಕುಮಾರ ಪಾಟೀಲ್, ಡಾ.ರಜನೀಶ ವಾಲಿ, ಉದಯಕುಮಾರ ಚಿಂಚೋಳಿ, ಕಿರಣ ದೇಶಮುಖ ಇತರರಿದ್ದರು.

    ನಾಲ್ವರಿಗೆ ಬಂಗಾರ ಪದಕ: ಪ್ರಥಮ ವರ್ಷದಲ್ಲಿ ವೈಷ್ಣವಿ ಪಾಟೀಲ್, ದ್ವೀತಿಯ ವರ್ಷ ವೃತಿಕಾ ಕುಮಾರಿ, ತೃತೀಯ ವರ್ಷ(೧) ವೈಶಾಲಿ ಶೇ.೭೪.೧ ಹಾಗೂ ತೃತೀಯ ವರ್ಷ(೨)ರಲ್ಲಿ ಸೌಮ್ಯ ಬಂಗಾರ ಪದಕ ಪಡೆದರು. ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ -೨೦೨೩ರಲ್ಲಿ ವಿಷಯವಾರು ಒಬಿಜಿ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಯೋಗೇಶ ಎನ್ ಬಂಗಾರದ ಪದಕ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts