More

    ಬಿಹಾರ: ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದು ಜೆಡಿಯು ಅಭ್ಯರ್ಥಿ ಪರ ಮತಯಾಚನೆ

    ಪಾಟ್ನಾ: 15 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ಮಾಜಿ ಶಾಸಕರೊಬ್ಬರು ಜೆಡಿಯು ಅಭ್ಯರ್ಥಿ ಪರವಾಗಿ ಬೃಹತ್ ರೋಡ್ ಶೋ ನಡೆಸಿದರು.

    ಇದನ್ನೂ ಓದಿ: ಮುಸ್ಲಿಂರನ್ನು ಕಾಂಗ್ರೆಸ್‌ ಕೇವಲ ವೋಟ್‌ ಬ್ಯಾಂಕ್‌ಗೆ ಬಳಸಿಕೊಂಡಿದೆ: ರಾಜನಾಥ್ ಸಿಂಗ್

    ಛೋಟೆ ಸರ್ಕಾರ್ ಎಂದು ಕರೆಯಲ್ಪಡುವ ಅನಂತ್ ಕುಮಾರ್ ಸಿಂಗ್ ಅವರು ಮೊಕಾಮಾದಿಂದ ಐದು ಬಾರಿ ಶಾಸಕರಾಗಿದ್ದರು. ಇಂದು ಬೆಳಗ್ಗೆ ಪಾಟ್ನಾದ ಬ್ಯೂರ್ ಸೆಂಟ್ರಲ್ ಜೈಲಿನಿಂದ 15 ದಿನ ಅವರನ್ನು ಪರೋಲ್​ ಮೇಲೆ ಹೊರ ಬಂದಿದ್ದಾರೆ. ಜೈಲಿನಿಂದ ಹೊರಬಂದ ಬಂದ ಕೆಲವೇ ಗಂಟೆಗಳಲ್ಲಿ ಮಾಜಿ ಶಾಸಕ ಬಿಹಾರದಲ್ಲಿ ನಿತೀಶ್‌ ಕುಮಾರ್‌ ಪಕ್ಷದಿಂದ ಕಣಕ್ಕಿಳಿದಿರುವ ಅಭ್ಯರ್ಥಿ ಪರ ರೋಡ್‌ಶೋನಲ್ಲಿ ಭಾಗಿಯಾಗಿದ್ದಾರೆ.‌

    ಅಪರಾಧಿ ಅನಂತ್ ಕುಮಾರ್​ ಅವರು ಜೈಲಿನಿಂದ ಹೊರ ಬರುತ್ತಿದ್ದಂತೆ ಅವರ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ಅವರ ಮೇಲೆ ಹೂಮಳೆ ಸುರಿದು ಬ್ಯಾಂಡ್ ಸೆಟ್ ಬಾರಿಸಿ ಸ್ವಾಗತ ಕೋರಿದ್ದಾರೆ. ನಂತರ ಬಾರ್ಹ್​ ವಿಧಾನಸಭಾ ಕ್ಷೇತ್ರದ ಸಬ್ನೀಮಾ ಗ್ರಾಮದಿಂದ ಕಾರುಗಳ ಬೃಹತ್ ರೋಡ್​ ಶೋ ನಡೆಸಿದರು. ಮುಂಗರ್‌ನ ಜೆಡಿಯು ಅಭ್ಯರ್ಥಿ ಲಾಲನ್ ಸಿಂಗ್‌ಗೆ ಬೆಂಬಲ ವ್ಯಕ್ತಪಡಿಸಿದರು.

    2020 ರಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಅನಂತ್ ಸಿಂಗ್, ಶಸ್ತ್ರಾಸ್ತ್ರ ಪ್ರಕರಣದಲ್ಲಿ ದೋಷಿಯಾಗಿದ್ದು, 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

    ನಾಡಾದಿಂದ ಕುಸ್ತಿಪಟು ಬಜರಂಗ್ ಪೂನಿಯಾ ಅಮಾನತು! ಕಾರಣ ಹೀಗಿದೆ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts