ಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ

suicide
Published on

ಯಾದಗಿರಿ: ಪ್ರೀತಿ-ಪ್ರೇಮ ಅಂತ ಅಪ್ರಾಪ್ತೆಯನ್ನ ಬಲೆಗೆ ಬೀಳಿಸಿಕೊಂಡ ಯುವಕನೊಬ್ಬ ಆಕೆಯನ್ನ ಮದುವೆ ಆಗುವುದಾಗಿ ಕಾರಿನಲ್ಲಿ ಹೊತ್ತೊಯ್ದು ಇದೀಗ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಅತ್ತ ಬಾಲಕಿ ಸತ್ತು ಮಲಗಿದ್ದಾಳೆ.

ಇಂತಹ ಘಟನೆ ಸಿಂದಗಿಯ ತಾಲೂಕಿನಲ್ಲಿ ಸಂಭವಿಸಿದೆ. ಶಿವಕುಮಾರ್ ಬಾಚಮಟ್ಟಿ ಎಂಬಾತ ಹುಣಸಗಿ ಪಟ್ಟಣದ ಅಪ್ತಾಪ್ತ ಬಾಲಕಿಯನ್ನ ಪ್ರೀತಿಸುತ್ತಿದ್ದ. ಮದುವೆ ಆಗುವುದಾಗಿ ನಂಬಿಸಿ ಆಕೆಯನ್ನ ಮೇ 6ರಂದು ಕಾರಿನಲ್ಲಿ ಕರೆದೊಯ್ದಿದ್ದ. ಇದಕ್ಕೆ ಆತನ ಇಬ್ಬರು ಸ್ನೇಹಿತರು ಸಾಥ್​ ಕೊಟ್ಟಿದ್ದರು. ಸಿಂದಗಿ ತಾಲೂಕಿನ ಯಂಕಂಚಿಯ ಲಾಡ್ಜ್​ನಲ್ಲಿ ಇಬ್ಬರೂ ತಂಗಿದ್ದರು. ಅದ್ಹೇನಾಯ್ತೋ ಏನೋ ಮೇ 7ರ ರಾತ್ರಿ ಇಬ್ಬರೂ ವಿಷ ಕುಡಿದಿದ್ದಾರೆ. ಇದನ್ನೂ ಓದಿರಿ ಕೋವಿಡ್​ಗೆ ಬಲಿಯಾದ ಅಮ್ಮನ ಶವವನ್ನ ಎದೆಗೆ ಆನಿಸಿಕೊಂಡೇ ಆಟೋದಲ್ಲಿ ಸಾಗಿಸಿದ ಮಗ! ಈ ದೃಶ್ಯ ಕಂಡು ಕಣ್ಣೀರಿಟ್ಟ ಪೊಲೀಸರು

ಮಗಳನ್ನು ಹಿಂಬಾಲಿಸಿಕೊಂಡು ಬಂದ ಪೋಷಕರಿಗೆ ಮಗಳು ಯುವಕನೊಂದಿಗೆ ಲಾಡ್ಜ್​ನಲ್ಲಿ ಇರುವ ವಿಷಯ ಗೊತ್ತಾಗಿತ್ತು. ಅಲ್ಲಿಗೆ ಬಂದು ಬಾಗಿಲು ಬಡಿಯುವಷ್ಟರಲ್ಲಿ ಬಾಲಕಿ ಮತ್ತು ಪ್ರಿಯಕರ ಇಬ್ಬರೂ ಬಿದ್ದು ಒದ್ದಾಡುತ್ತಿದ್ದರು. ಕೂಡಲೇ ಅವರಿಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರು. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇತ್ತ ಮೃತ ಬಾಲಕಿಯ ಪೋಷಕರು ಯುವಕನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ವಿಷ ಕುಡಿದವರನ್ನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಬಾಲಕಿ ಅಂದು ಏನೆಲ್ಲ ಆಯ್ತು ಎಂಬುದನ್ನು ಪಾಲಕರ ಬಳಿ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ. 'ಮದುವೆ ಆಗುವುದಾಗಿ ನನ್ನನ್ನು ನಂಬಿಸಿದ ಶಿವಕುಮಾರ್​ ಕಾರಿನಲ್ಲಿ ಲಾಡ್ಜ್​ಗೆ ಕರೆದೊಯ್ದ. ನಾನು ಬೇಡ ಬೇಡ ಅಂದರೂ ಲೈಂಗಿಕ ಸಂಭೋಗ ನಡೆಸಿದ. ಇದಾದ ಮೇಲೆ ಬಸನಗೌಡ ಎಂಬಾದ ಬಂದು, ನಿಮ್ಮನ್ನು ಮನೆಯವರೆಲ್ಲ ಹುಡುಕುತ್ತಿದ್ದಾರೆ. ಅವರ ಕೈಗೆ ಸಿಕ್ಕರೆ ಒಟ್ಟಿಗೆ ಇರಲು ಬಿಡಲ್ಲ. ಎಲ್ಲಾದರೂ ವಿಷ ಕುಡಿದು ಸಾಯಿರಿ. ಆದರೆ ಊರಿಗೆ ಮಾತ್ರ ಬರಬೇಡಿ ಅಂದ. ಅದಕ್ಕೆ ನಾವು ವಿಷ ಕುಡಿದೆವು..' ಎಂದು ಸಾವಿಗೂ ಮುನ್ನ ಬಾಲಕಿ ಹೇಳಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶಿವಕುಮಾರ್ ಬಾಚಿಮಟ್ಟಿ, ಪ್ರಿಯಕರನಿಗೆ ಸಾಥ್ ನೀಡಿದ್ದ ಈತನ ಸ್ನೇಹಿತರಾದ ಮಹಾಂತೇಶ್ ಹಾಗೂ ಬಸನಗೌಡನ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net